ಅಲೋಕ್ ನಾಥ್ ಒಪ್ಪಿಕೊಳ್ಳುತ್ತಾರೆ ಅಂತಾ ಅನಿಸುತ್ತಿದ್ದೇಯಾ? ವಿಂತಾ ನಂದಾ
ಅತ್ಯಾಚಾರ ಆರೋಪ ಸಂಬಂಧ ಅಲೋಕ್ ನಾಥ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ವಿಂತಾ ನಂದಾ, ಅವರು ಒಪ್ಪಿಕೊಳ್ಳುತ್ತಾರೆ ಅಂತಾ ನಿಮ್ಮಗೆ ಅನ್ನಿಸುತ್ತಿದೇಯಾ ಎಂದು ಪ್ರಶ್ನಿಸಿದ್ದಾರೆ.

ಬಾಲಿವುಡ್ ನಟ ಅಲೋಕ್ ನಾಥ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಹಿರಿಯ ಕಥೆಗಾರ್ತಿ-ನಿರ್ಮಾಪಕಿ ವಿಂತಾ ನಂದಾ ,ಲೈಂಗಿಕ ಕಿರುಕುಳ ನೀಡಿದವರ ಹೆಸರು ಬಹಿರಂಗಪಡಿಸಲು ಭಯ ಆಗಲಿಲ್ಲ. ಆದರೆ, ಘಟನೆ ನಡೆದು 20 ವರ್ಷ ಆದ ಮೇಲೆ ಸಾಮಾಜಿಕ ಜಾಲತಾಣಗಳ ಮೂಲಕ ಇಷ್ಟೊಂದು ಪರಿಣಾಮ ಬೀರುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.
ಅತ್ಯಾಚಾರ ಆರೋಪ ಸಂಬಂಧ ಅಲೋಕ್ ನಾಥ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ವಿಂತಾ ನಂದಾ, ಅವರು ಒಪ್ಪಿಕೊಳ್ಳುತ್ತಾರೆ ಅಂತಾ ನಿಮ್ಮಗೆ ಅನ್ನಿಸುತ್ತಿದೇಯಾ ಎಂದು ಪ್ರಶ್ನಿಸಿದ್ದಾರೆ. ಈ ವಿಷಯವನ್ನು ಬೇರೆಯವರ ಜೊತೆ ಹೇಳಿಕೊಳ್ಳಲಾಗದೆ ತನ್ನಷ್ಟಕ್ಕೆ ತಾನು ತಪಿತಸ್ಥ ಭಾವನೆಯಲ್ಲಿ ಮಾನಸಿಕ ತೊಳಲಾಟದಲ್ಲಿ ಸಂಕಷ್ಟ ಅನುಭವಿಸಿದ್ದೇನೆ. ಇದರ ಹಿಂದೆ ಯಾವುದೇ ವ್ಯವಸ್ಥಿತ ತಂತ್ರವಲ್ಲ, ಮುಂದೆ ಏನು ಮಾಡಬೇಕು ಎಂದು ಯೋಚಿಸುತ್ತಿದ್ದೇನೆ. ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
ಮುಂದೆ ಏನು ಮಾಡುವುದು ಅಂತಾ ಇನ್ನೂ ನಿರ್ಧರಿಸಿಲ್ಲ. ಮೊದಲು ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾಗಿದೆ. ಘಟನೆ ನಡೆದು 20 ವರ್ಷಗಳಾಗಿದ್ದರೂ ಅದು ನನ್ನ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಒಬ್ಬ ಕಥೆಗಾರ್ತಿಯಾಗಿ ಮಾನವ ಜೀವಿ ಎಂಬ ವಿಶ್ವಾಸವನ್ನೇ ನಾನು ಕಳೆದುಕೊಂಡಿದ್ದೇನೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ನನ್ನ ಮೇಲೆ ಯಾರೂ ಅತ್ಯಾಚಾರ ನಡೆಸಿದ್ದರೋ ಅಂತವರಿಗೆ ಶಿಕ್ಷೆಯಾಗಬೇಕಿದೆ. ಆದರೆ, ಈಗ ಏನನ್ನೂ ಹೇಳಲ್ಲ. ಮುಂದೆ ಏನು ಮಾಡುವುದು ಅನ್ನೋದು ಗೊತ್ತಿಲ್ಲ. ನಾನು ಯಾವುದೇ ರೀತಿಯ ಯೋಚನೆ ಮಾಡಿಕೊಂಡಿಲ್ಲ ಎಂದು ಹೇಳುವ ವಿಂತಾ ನಂದಾ , ಸಂಸ್ಕಾರಿ ಯಾರು ಎಂಬ ಬಗ್ಗೆ ಎಲ್ಲರಿಗೂ ತಿಳಿದಿದ್ದು, ಸಾವಿರಾರು ಪ್ರತಿಕ್ರಿಯೆಗಳು ಬರುತ್ತಿವೆ. ಅವರ ಹೆಸರು ಬಹಿರಂಗಪಡಿಸುವುದರಿಂದ ಯಾವುದೇ ಭಯವಿಲ್ಲ ಎಂದು ಹೇಳಿದ್ದಾರೆ.
19 ವರ್ಷದ ಹಿಂದೆ ಸಂಸ್ಕಾರಿ ಎಂದು ಹೆಸರುವಾಸಿಯಾಗಿರುವ ಅಲೋಕ್ ನಾಥ್ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಮಿ ಟೂ ಅಭಿಯಾನದಲ್ಲಿ ವಿಂತಾ ನಂದಾ ಸೋಮವಾರ ರಾತ್ರಿ ಪೋಸ್ಟ್ ಹಾಕಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


