'ವಿಕ್ಟರಿ 2' ಹಾಡಿಗೆ ನಟಿ ಅಪೂರ್ವ ಹೆಜ್ಜೆ!
ನಟ ಶರಣ್ ಅಭಿನಯದ ಬಹುನಿರೀಕ್ಷಿತ ಚಿತ್ರ "ವಿಕ್ಟರಿ 2" ನ "ಕುಟ್ಟು ಕುಟ್ಟು ಕುಟ್ಟಪ್ಪ" ಹಾಡು ಇದೀಗ ಸಾಮಜಿಕ ಜಾಲತಾಣ ಸೇರಿಹಲವು ಚಾಟ್ ಬಜ್ ಗಳಲ್ಲಿ ಅಗ್ರಸ್ಥಾನದಲ್ಲಿದೆ

Published On :
ಬೆಂಗಳೂರು: ನಟ ಶರಣ್ ಅಭಿನಯದ ಬಹುನಿರೀಕ್ಷಿತ ಚಿತ್ರ "ವಿಕ್ಟರಿ 2" ನ "ಕುಟ್ಟು ಕುಟ್ಟು ಕುಟ್ಟಪ್ಪ" ಹಾಡು ಇದೀಗ ಸಾಮಜಿಕ ಜಾಲತಾಣ ಸೇರಿಹಲವು ಚಾಟ್ ಬಜ್ ಗಳಲ್ಲಿ ಅಗ್ರಸ್ಥಾನದಲ್ಲಿದೆ. ಶರಣ್ ಜತೆ ಅಭಿನಯಿಸಿದ ನಟಿ ಅಪೂರ್ವ ಅವರ ನೃತ್ಯ ಎಲ್ಲಾ ಚಿತ್ರಪ್ರೇಮಿಗಳ ಗಮನ ಸೆಳೆದಿದೆ. ನಾವು ಇದಾಗಲೇ ಇಂತಹಾ ಅಭಿನಯ ನೀಡಿದ ನಮ್ಮ ನಟಿಯರನ್ನು ಕಾಂಡಿದ್ದರೂ ಅಪೂರ್ವ ಈ ನಿರ್ದಿಷ್ಟ ಹಾಡಿನಲ್ಲಿ ಕಾಣಿಸಿಕೊಂಡ ರೀತಿ ನಿಜಕ್ಕೂ ವಿಭಿನ್ನವಾಗಿತ್ತು.
ನಾವು ಅಪೂರ್ವ ಅವರ ಈ ವಿಶಿಷ್ಟ ನೃತ್ಯದ ಕುರಿತು ಅವರನ್ನೇ ಕೇಳಿದಾಗ ನಾನು ನನ್ನ ಚೊಚ್ಚಲ ಚಿತ್ರ ಮಾಡಿದ ಬಳಿಕ ಕ್ರೇಜಿ ಸ್ಟಾರ್ ರವಿಚಂದ್ರನ್ ನನಗೆ ನೀನು ನಾಯಕಿಯಾಗಬೇಕಾದಲ್ಲಿ ನೃತ್ಯದ ವಿಭಿನ್ನ ಪ್ರಕಾರಗಳ ಪ್ರಯೋಗಗಳು ಕಲಿಯುವುದು ಅಗತ್ಯ ಎಂದಿದ್ದರು.ನಾನು ಮೊದಲಿನಿಂದ ನೃತ್ಯವನ್ನು ಇಷ್ಟಪಟ್ಟವಳಾಗಿದ್ದು ಅವರ ಮಾತಿನ ಬಳಿಕ ನಾನು ಮೂರು ತಿಂಗಳ ಕಾಲ ನೃತ್ಯ ತರಗತಿಗೆ ಸೇರಿದೆ. ಅಲ್ಲಿ ನಾನು ಹಲವು ಶಿಅಲಿಯ ನೃತ್ಯವನ್ನು ಅಭ್ಯಸಿಸಿದೆ. ಇದು ನನಗೆ ವಿಕ್ಟರಿಯಲ್ಲಿ ನೆರವಿಗೆ ಬಂದಿತು." ಅವರು ಹೇಳಿದ್ದಾರೆ.
ಹರಿ ಸಂತೋಷ್ ನಿರ್ದೇಶನದ ಈ ಚಿತ್ರಕ್ಕೆ ಧನಂಜಯ್ ನೃತ್ಯ ಸಂಯೋಜನೆ ಮಾಡಿದ್ದಾರೆ.
"ಸಾಮಾನ್ಯವಾಗಿ ಹೀರೋ (ನಾಯಕ ನಟ) ಮಾತ್ರ ಇಂತಹಾ ನೃತ್ಯವನ್ನು ಪ್ರದರ್ಶಿಸುತ್ತಾರೆ.ಆದರೆ ಇಲ್ಲಿ ನನಗೆ ಈ ಅವಕಾಅ ಒದಗಿತು. ಮತ್ತು ನಾನು ಇದನ್ನು ಯಶಸ್ವಿಯಾಗಿ ಬಳಸಿಕೊಂಡಿರುವುದು ನನಗೆ ಖುಷಿ ತಂದಿದೆ.ಅಂದಹಾಗೆ ಇದು ನನ್ನ ಮೊದಲ ಪ್ರಯತ್ನವಾಗಿರುವ ಕಾರಣ ನನಗೆ ಕಾಲುನೋವು ಕಾಣಿಸಿಕೊಂಡಿತ್ತು. ಆದರೆ ಇದೆಲ್ಲದರ ಹೊರತಾಗಿ ಒಳ್ಳೆ ಚಿತ್ರತಂಡದಿಂದ ನನಗೆ ಉತ್ತಮ ಬೆಂಬಲ ಸಿಕ್ಕಿದೆ, ನನ್ನ ಆತ್ಮವಿಶ್ವಾಸ ಇಮ್ಮಡಿಯಾಗಿದೆ" ಪುನೀತ್ ರಾಜ್ ಕುಮಾರ್ ಕನಡದಲ್ಲಿನ ಒಬ್ಬ ಉತ್ತಮ ನೃತ್ಯಪಟುವಾಗಿದ್ದು ಅವರ ಪ್ರದರ್ಶನ ಶೈಯನ್ನು ನಾವು ಅನುಸರಿಸಬೇಕು" ಅಪೂರ್ವ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


