ಸಿನಿಮಾ ಸುದ್ದಿ

ಶಾರುಖ್ ಖಾನ್, ಮೋಹನ್ ಲಾಲ್ ರನ್ನೇ ಹಿಂದಿಕ್ಕಿದ ರಾಕಿಂಗ್ ಸ್ಟಾರ್ ಯಶ್, ಕೆಜಿಎಫ್ ಹವಾ ಹೇಗಿದೆ ಗೊತ್ತಾ?

ಬೆಂಗಳೂರು: ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಇದೀಗ ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ರನ್ನೇ ಹಿಂದಿಕ್ಕಿದ್ದಾರೆ...

ಶಾರುಖ್ ಖಾನ್, ಮೋಹನ್ ಲಾಲ್ ರನ್ನೇ ಹಿಂದಿಕ್ಕಿದ ರಾಕಿಂಗ್ ಸ್ಟಾರ್ ಯಶ್, ಕೆಜಿಎಫ್ ಹವಾ ಹೇಗಿದೆ ಗೊತ್ತಾ?
ಯಶ್
Published On :
ಬೆಂಗಳೂರು: ಬೆಂಗಳೂರು: ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಇದೀಗ ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ರನ್ನೇ ಹಿಂದಿಕ್ಕಿದ್ದಾರೆ.
ಪ್ರಸ್ತುತ ಯಶ್ ಅಭಿನಯದ ಕೆಜಿಎಫ್ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದು, ಕೇವಲ ಕರ್ನಾಟಕ ಮಾತ್ರವಲ್ಲದೇ ಯಶ್ ಅಭಿನಯದ ಚಿತ್ರ ಕೆಜಿಎಫ್ ಭಾರತದ ಮೊದಲನೇ ಬಹು ನಿರೀಕ್ಷಿತ ಚಿತ್ರವಾಗಿದೆ.
Story image
ಹೌದು.. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ ಚಿತ್ರದ ಹವಾ ಎಷ್ಟರ ಮಟ್ಟಿಗಿದೆ ಅಂದ್ರೆ, ಖ್ಯಾತ ಸಿನಿಮಾ ರೇಟಿಂಗ್ ವೆಬ್ ಸೈಟ್ ಐಎಂಡಿಬಿಯ ಮೋಸ್ಟ್‌ ಆ್ಯಂಟಿಸಿಪೇಟೆಡ್‌ ಗ್ಲೋಬಲ್‌ ಮೂವಿಸ್ ಹಾಗೂ ಟಿವಿ ಟ್ರೆಂಡಿಂಗ್‌ ನ ಹಲವು ಭಾಷೆಗಳ ಚಿತ್ರಗಳ ಲಿಸ್ಟ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಬಾಲಿವುಡ್‌ ಬಾದ್ ಷಾ ಶಾರುಖ್ ಖಾನ್ ಅಭಿನಯದ ಝೀರೋ ಚಿತ್ರ ಎರಡನೇ ಸ್ಥಾನದಲ್ಲಿದೆ.
ಇನ್ನು ಪಟ್ಟಿಯಲ್ಲಿ ಯಶ್ ಅಭಿನಯದ ಕೆಜಿಎಫ್ ಚಿತ್ರ 56.8 ರೇಟಿಂಗ್ಸ್ ನೊಂದಿಗೆ ಮೊದಲ ಸ್ಥಾನದಲ್ಲಿದ್ದು ಶಾರುಖ್ ಅಭಿನಯದ ಝೀರೋ ಶೇ.19.4ರಷ್ಟು ರೇಟಿಂಗ್ಸ್ ನೊಂದಿಗೆ ಎರಡನೇ ಸ್ಥಾನದಲ್ಲಿದೆ.
ಉಳಿದಂತೆ ಐಎಂಡಿಬಿಯ ಭಾರತದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಕ್ರಮವಾಗಿ ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಅಭಿನಯದ ಒಡಿಯಾನ್, ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೇದಾರನಾಥ್, ರಣವೀರ್ ಸಿಂಗ್ ಅಭಿನಯದ ಸಿಂಬ ಚಿತ್ರಗಳು ಟಾಪ್ 10 ಪಟ್ಟಿಯಲ್ಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.