ಸಿನಿಮಾ ಸುದ್ದಿ

'ಅಮರ'ನಾದ ಅಮರನಾಥ್: ನಟ, ಮಾಜಿ ಸಚಿವ ಅಂಬಿಯ ಬದುಕು ಹೀಗಿತ್ತು

ನ್ನಡ ಚಿತ್ರ ರಂಗದ ದಿಗ್ಗಜ ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾಗಿದ್ದಾರೆ. ತೀವ್ರ ಉಸಿರಾಟದ ತೊಂದರೆ ಹಾಗೂ ಎದೆ ನೋವಿನಿಂದ ಅವರು ಸಾವನ್ನಪ್ಪಿದ್ದಾರೆ.

'ಅಮರ'ನಾದ ಅಮರನಾಥ್: ನಟ, ಮಾಜಿ ಸಚಿವ ಅಂಬಿಯ ಬದುಕು ಹೀಗಿತ್ತು
ಅಂಬರೀಶ್
Published On :
ಕನ್ನಡ ಚಿತ್ರ ರಂಗದ ದಿಗ್ಗಜ ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾಗಿದ್ದಾರೆ. ತೀವ್ರ ಉಸಿರಾಟದ ತೊಂದರೆ ಹಾಗೂ ಎದೆ ನೋವಿನಿಂದ ಅವರು ಸಾವನ್ನಪ್ಪಿದ್ದಾರೆ.
1952 ಮೇ 29ರಂದು ಮಂಡ್ಯ ಜೆಲ್ಲೆ ಮದ್ದೂರು ತಾಲೂಕಿನ ದೊಡ್ಡರಸನ ಕೆರೆಗ್ರಾಮದಲ್ಲಿ ಹುಚ್ಚೇಗೌಡ, ಪದ್ಮಮ್ಮ ದಂಪತಿಗೆ 6ನೇ ಮಗನಾಗಿ  ಜನಿಸಿದ್ದ ಅಂಬರಿಶ್ ಮೊದಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್. ಖ್ಯಾತ ಪಿಟೀಲು ವಾದಕ ಟಿ.ಚೌಡಯ್ಯರವರ ಮೊಮ್ಮಗನಾಗಿದ್ದ ಅಂಬರೀಶ್ ಮಂಡ್ಯದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದರು.
ಮೈಸೂರಿನಲ್ಲಿ ಪದವಿ ಶಿಕ್ಷಣ ಮಾಡಿದ್ದ ಅಂಬರೀಶ್ 1991ರಲ್ಲಿ ಕನ್ನಡದ ಮೇರು ನಟಿ ಸುಮಲತಾ ಅವರನ್ನು ವಿವಾಹವಾಗಿದ್ದರು. ಅಭಿಷೇಕ್ ಅವರ ಏಕೈಕ ಪುತ್ರ
1972ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ನಾಗರಹಾವು" ಚಿತ್ರ ಅಂಬರೀಶ್ ಅವರ ಪ್ರಥಮ ಚಿತ್ರವಾಗಿತ್ತು. ಇದರಲ್ಲಿ ಅವರು ಮಾಡಿದ್ದ "ಜಲೀಲ" ಪಾತ್ರ ಇಂದಿಗೆ ಸಹ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.
ಅಂತ, ಪಡುವಾರಳ್ಳಿ ಪಾಂಡವರು, ಮಸಣದ ಹೂವು, ಶುಭಮಂಗಳ, ರಂಗನಾಯಕಿ, ಶುಭಮಂಗಳ, ಸೇರಿ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.
ನಾಯಕನಾಗಿ ಅನೇಕ ಚ್ವಿತ್ರಗಳಲ್ಲಿ ಅಭಿನಯಿಸಿದ್ದ ಅಂಬರೀಶ್ ದಿಗ್ಗಜರು, ಬುಲ್ ಬುಲ್ ಸೇರಿ ಅನೇಕ ಚಿತ್ರಗಳಲ್ಲಿ ವಿಭಿನ್ನ ಶೈಲಿಯ ಫಾತ್ರಗಳಿಂದ ಮನಸೋರೆಗೊಂಡಿದ್ದರು.ಚಿತ್ರರಂಗಕ್ಕೆ ಇವರು ನೀಡಿದ್ದ ಸೇವೆಯನ್ನು ಗ್ಗುರುತಿಸಿ ಅವರಿಗೆ 2013 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿತ್ತು.
ಇನ್ನು ಅಂಬರೀಶ್ ಚಿತ್ರರಸಿಕರ ಮನ ತಣಿಸಿದ್ದಷ್ಟೇ ಅಲ್ಲದೆ ರಾಜಕೀಯ ರಂಗದಲ್ಲಿ ಸಹ ಯಶಸ್ವಿ ನಾಯಕರೆನಿಸಿದ್ದರು.ಜನತಾದಳದ ಮೂಲಕ ರಾಜಕೀಯ ರಂಗ ಪ್ರವೇಶಿಸಿದ್ದ ಅಂಬರೀಶ್ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಶಾಸಕ, ಸಂಸದ, ರಾಜ್ಯ, ಕೇಂದ್ರದಲ್ಲಿ ಸಚಿವರಾಗಿ ಅಧಿಕಾರ ನಿರ್ವಹಿಸಿದ್ದರು. ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದ ಅಂಬರೀಶ್ ಅವರಿಗೆ ರಾಜಕೀಯದಲ್ಲಿ ಸಹ ಒಳ್ಳೆಯ ಗೌರವವಿತ್ತು. 
1998ರಿಂದ ೨೦೦೯ರವರೀಗೆ ಲೋಕಸಭಾ ಸದಸ್ಯರಾಗಿದ್ದ ಅವರು 2006-08ರಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿ ಸೇವೆ ಸಲ್ಲಿಸಿದ್ದರು.ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ,  ಕರ್ನಾಟಕ ರಾಜ್ಯ ವಸತಿ ಸಚಿವರಾಗಿ ಸಹ ಅಂಬರೀಶ್ ಕಾರ್ಯ ನಿರ್ವಹಿಸಿದ್ದರು.
ಚಿತ್ರಜೀವನದಲ್ಲಿ ಇವರ ಯಶಸ್ವಿ ಅಭಿನಯಕ್ಕಾಗಿ ಫಿಲ್ಮ್ ಫೇರ್, ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಅಂಬರೀಶ್ ಮುಡಿಗೇರಿದ್ದವು. ಅಲ್ಲದೆ ಎನ್.ಟಿ.ಆರ್ ನ್ಯಾಷನಲ್ ಪ್ರಶಸ್ತಿ, ಜೀವಮಾನ ಸಾಧನೆ ಫಿಲ್ಮ್ ಫೇರ್, ಆಂಧ್ರ ಸರ್ಕಾರದ ನಂದಿ ಪುರಸ್ಕಾರ, ಕರ್ನಾಟಕ ಸರ್ಕಾರದ ವಿಷ್ಣುವರ್ಧನ್ ಪ್ರಶಸ್ತಿ,ಗಳು ಸಹ ಇವರಿಗೆ ಸಂದಿದ.
ಮಂಡ್ಯ ಬಸ್ ದುರಂತಕ್ಕೆ ಸಂತಾಪ ಸೂಚಿಸಿದ್ರು!
ತಾವು ನಿಧನರಾಗುವ ಕೆಲ ಗಂಟೆಗಳ ಮುನ್ನ ಅಂಬರೀಶ್ ಇಂದು ಬೆಳಿಗ್ಗೆ ಮಂಡ್ಯ ಪಾಂಡವಪುರದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಮಡಿದವರ ಪರ ಸಂತಾಪ ಸೂಚಿಸಿದ್ದರು. ಖಾಸಗಿ ವಾಹಿನಿಗಳಲಿ  ಅವರ ಸಂತಾಪ ಸೂಚಕ ಮಾತುಗಳು ಪ್ರಸಾರವಾಗಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.