ಬರುತ್ತಿದೆ ನೈಜ್ಯ ಘಟನೆ ಆಧಾರಿತ ಚಿತ್ರ 'ರಾಂಚಿ'
ಒಂದು ಸಿನಿಮಾ ಮಾಡಲು ನಿರ್ದೇಶಕನೊಬ್ಬ ಪಡುವ ಸಂಕಷ್ಟಗಳು, ಕೆಲವೊಮ್ಮೆ ಆ ಪ್ರಯತ್ನ ಆತನ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಗಳಿರುತ್ತವೆ. ಇಂತಹ ಪರಿಸ್ಥಿತಿಯಿಂದ ಆತ ಹೇಗೆ ಹೊರಬರುತ್ತಾನೆ?...

Published On :
ಬೆಂಗಳೂರು: ಒಂದು ಸಿನಿಮಾ ಮಾಡಲು ನಿರ್ದೇಶಕನೊಬ್ಬ ಪಡುವ ಸಂಕಷ್ಟಗಳು, ಕೆಲವೊಮ್ಮೆ ಆ ಪ್ರಯತ್ನ ಆತನ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಗಳಿರುತ್ತವೆ. ಇಂತಹ ಪರಿಸ್ಥಿತಿಯಿಂದ ಆತ ಹೇಗೆ ಹೊರಬರುತ್ತಾನೆ? ಯಾವೆಲ್ಲಾ ಕಷ್ಟಪಡುತ್ತಾನೆಂಬ ವಿವರ ಇಟ್ಟುಕೊಂಡು ನಿರ್ದೇಶಕ ಶಶಿಕಾಂತ್ ಅವರು ಸಿನಿಮಾ ಮಾಡಲು ಮುಂದಾಗಿದ್ದಾರೆ.
ಇದು ಕಟ್ಟುಕಥೆಯಲ್ಲ. ನಿರ್ದೇಶರೊಬ್ಬರು ತಾವು ಅನುಭವಿಸಿದ ಅಸಲಿ ಕಷ್ಟಗಳನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಸಿದ್ಧಪಡಿಸುತ್ತಿದ್ದಾರೆ. ಈ ಚಿತ್ರಕ್ಕೆ 'ರಾಂಚಿ' ಎಂದು ನಾಮಕರಣವನ್ನೂ ಮಾಡಲಾಗಿದೆ.
ಚಿತ್ರಕ್ಕೂ ರಾಂಚಿಗೂ ಏನು ಸಂಬಂಧ? ಅದಕ್ಕೂ ಉತ್ತರವಿದೆ. 2009ರಲ್ಲಿ ರಾಂಚಿಯಲ್ಲಿ ನಡೆದ ಘಟನೆಯೇ ಈ ಚಿತ್ರದ ಕಥೆಯಾಗಿದೆ. ಹೀಗಾಗಿಯೇ ಚಿತ್ರಕ್ಕೆ ರಾಂಚಿ ಎಂದೇ ಹೆಸರಿಡಲಾಗಿದೆ. ಚಿತ್ರದ ಬಹುತೇಕ ಚಿತ್ರೀಕರಣ ಕೂಡ ರಾಂಚಿಯಲ್ಲಿಯೇ ನಡೆಯಲಿದೆ. ಚಿತ್ರದಲ್ಲಿ ಊರ್ವಿ ಖ್ಯಾತಿಯ ಪ್ರಭು ನಾಯಕರಾಗಿ ನಟಿಸುತ್ತಿದ್ದು, ತೆರೆಮೇಲೆ ನಿರ್ದೇಶಕನ ಪಾತ್ರ ಮಾಡಲಿದ್ದಾರೆ.
2009ರಲ್ಲಿ ನಿರ್ದೇಶಕ ಶಶಿಕಾಂತ್ ಅವರಿಗೆ ರಾಂಚಿಯಿಂದ ಕರೆಯೊಂದು ಬಂದಿದೆ. ತಾನು ಸರ್ಕಾರದ ಪರವಾಗಿ ಕರೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಮಾತುಕತೆ ವೇಳೆ ಸಾಕ್ಷ್ಯಚಿತ್ರವನ್ನು ಮಾಡುವ ಕುರಿತು ವ್ಯಕ್ತಿ ಆಸಕ್ತಿ ತೋರಿದ್ದಾನೆ. ವ್ಯಕ್ತಿಯ ಮಾತು ಕೇಳಿದ ನಿರ್ದೇಶಕ ಶಶಿಕಾಂತ್ ಅವರು ರಾಂಚಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರಿಗೆ ಆಘಾತವಾಗಿದೆ. ಕರೆ ಮಾಡಿದ್ದ ವ್ಯಕ್ತಿ ದರೋಡೆಕೋರರು ಎಂಬುದು ತಿಳಿದುಬಂದಿದೆ. ಬಳಿಕ ಹೇಗೋ ಪ್ರಾಣ ಉಳಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಸರ್ಕಾರ ಹಾಗೂ ಪೊಲೀಸರಿಗೆ ಸಹಾಯ ಮಾಡಿ ದರೋಡೆಕೋರರ ಗುಂಪು ಬಂಧಿಸಲು ಸಹಾಯ ಮಾಡಿದ್ದಾರೆ. ಇದೇ ಕಥೆಯನ್ನೇ ಇದೀಗ ನಿರ್ದೇಶಕ ಶಶಿಕಾಂತ್ ಅವರು ದೊಡ್ಡ ತೆರೆಗೆ ತರಲು ನಿರ್ಧರಿಸಿದ್ದಾರೆ.
ಚಿತ್ರದ ಮುಹೂರ್ತ ಇದೇ ನ.18 ರಂದು ರಾಂಚಿಯಲ್ಲಿಯೇ ನಡೆಯಲಿದೆ. ಮೂಹೂರ್ತ ಸಮಾರಂಭಕ್ಕೆ ಜಾರ್ಖಾಂಡ್ ಮುಖ್ಯಮಂತ್ರಿ ಹಾಜರಾಗಲಿದ್ದಾರೆ. ಚಿತ್ರದ ಮುಹೂರ್ತ ನಡೆಯುತ್ತಿರುವ ಸ್ಥಳ ನಕ್ಸಲ್ ಪೀಡಿತ ಪ್ರದೇಶವಾಗಿದ್ದು, ಬಿಗಿ ಭದ್ರತೆಯೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಬಂಗಾಲಿ ಹಾಗೂ ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ತೋತಾ ರಾಯ್ ಚೌಧರಿ ಕೂಡ ಪ್ರಭು ಜೊತೆಗೆ ನಟಿಸಿಲಿದ್ದಾರೆ. ನಾಯಕಿಯಾಗಿ ಸಿಂಧೂ ಮೂರ್ತಿಯವರು ಅಭಿನಯಿಸುತ್ತಿದ್ದಾರೆ. ರಾಂಚಿಗೆ ಸಂಗೀತ ನೀಡುವ ಜವಾಬ್ದಾರಿ ಸಂದೀಪ್ ಚೌಟ ಅವರ ಮೇಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


