ಸಿನಿಮಾ ಸುದ್ದಿ

ಯಶ್ ಅಭಿನಯದ 'ಕೆಜಿಎಫ್' ಟ್ರೈಲರ್ ನೋಡಿದ ವಿದೇಶಿಗರು ಹೇಳಿದ್ದೇನು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಟ್ರೈಲರ್ ಬಿಡುಗಡೆಯಾಗಿ, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿರುವಂತೆಯೇ ಅತ್ತ ವಿದೇಶಿಗರೂ ಕೂಡ ಟ್ರೈಲರ್ ಗೆ ಫುಲ್ ಫಿದಾ ಆಗಿದ್ದಾರೆ.

ಯಶ್ ಅಭಿನಯದ 'ಕೆಜಿಎಫ್' ಟ್ರೈಲರ್ ನೋಡಿದ ವಿದೇಶಿಗರು ಹೇಳಿದ್ದೇನು?
ಕೆಜಿಎಫ್ ಟ್ರೈಲರ್ ವೀಕ್ಷಿಸಿದ ವಿದೇಶಿಗರು
Published On :
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಟ್ರೈಲರ್ ಬಿಡುಗಡೆಯಾಗಿ, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿರುವಂತೆಯೇ ಅತ್ತ ವಿದೇಶಿಗರೂ ಕೂಡ ಟ್ರೈಲರ್ ಗೆ ಫುಲ್ ಫಿದಾ ಆಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಸಿನಿಮಾಗಳ ಟ್ರೈಲರ್ ರಿವ್ಯೂ ಮಾಡುವ ಕೆಲ ವಿದೇಶಿಗರು ಕನ್ನಡದ ಕೆಜಿಎಫ್ ಟ್ರೈಲರ್ ವೀಕ್ಷಿಸಿದ್ದು, ಚಿತ್ರದ ತಾಂತ್ರಿಕ ವಿಭಾಗವೂ ಸೇರಿದಂತೆ ಇಡೀ ಚಿತ್ರತಂಡದ ಪರಿಶ್ರಮಕ್ಕೆ ಶಹಬ್ಬಾಸ್ ನೀಡಿದ್ದಾರೆ. ಅಂತೆಯೇ ಚಿತ್ರದಲ್ಲಿ ನಟ ಯಶ್ ಅಭಿನಯಕ್ಕೆ ಫಿದಾ ಆಗಿರುವ ಅವರು, ಟ್ರೈಲರ್ ನಲ್ಲಿ ನಟ ಯಶ್ ಸುತ್ತಿಗೆಯನ್ನು ಹಿಡಿದು ವಿರೋಧಿಗಳನ್ನು ಚಚ್ಚುವ ದೃಶ್ಯವನ್ನು ಹಾಲಿವುಡ್ ನ ಥಾರ್ ಚಿತ್ರಕ್ಕೆ ಹೋಲಿಕೆ ಮಾಡಿದ್ದಾರೆ.
ಅಂತೆಯೇ ಚಿತ್ರದ ಛಾಯಾಗ್ರಹಣ ವಿಭಾಗಕ್ಕೆ ವಿದೇಶಿಗರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಅಲ್ಲದೆ ಚಿತ್ರಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಟ್ರೈಲರ್ ನೋಡಿದ ಅವರ ಅನುಭವ ಇಲ್ಲಿದೆ ನೋಡಿ...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.