ಸಿನಿಮಾ ಸುದ್ದಿ

ದುನಿಯ ವಿಜಯ್ ಮನೆಗೆ ಹೋಗದಂತೆ ನಾಗರತ್ನಗೆ ಕೋರ್ಟ್ ನಿರ್ಬಂಧ

ನಟ ದುನಿಯಾ ವಿಜಯ್ ಅವರ ಪತ್ನಿಯರ ಜಗಳ ಕೋರ್ಟ್ ಮೆಟ್ಟಿಲೇರಿದ್ದು, ವಿಜಿ ಮನೆಗೆ ತೆರಳದಂತೆ ಮೊದಲ ಪತ್ನಿ ನಾಗರತ್ನಗೆ ಕೋರ್ಟ್ ನಿರ್ಬಂಧ ಹೇರಿದೆ...

ದುನಿಯ ವಿಜಯ್ ಮನೆಗೆ ಹೋಗದಂತೆ ನಾಗರತ್ನಗೆ ಕೋರ್ಟ್ ನಿರ್ಬಂಧ
ಪತ್ನಿಯರೊಂದಿಗೆ ದುನಿಯಾ ವಿಜಯ್
Published On :
ಬೆಂಗಳೂರು: ನಟ ದುನಿಯಾ ವಿಜಯ್ ಅವರ ಪತ್ನಿಯರ ಜಗಳ ಕೋರ್ಟ್ ಮೆಟ್ಟಿಲೇರಿದ್ದು, ವಿಜಿ ಮನೆಗೆ ತೆರಳದಂತೆ ಮೊದಲ ಪತ್ನಿ ನಾಗರತ್ನಗೆ ಕೋರ್ಟ್ ನಿರ್ಬಂಧ ಹೇರಿದೆ.
ವಿಜಯ್ ಮನೆಗೆ ಹೋಗದಂತೆ ನಾಗರತ್ನಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಮಧ್ಯಂತರ ಆದೇಶ ನೀಡುವುದರ ಜೊತೆಗೆ ವಿಜಯ್ ವಿರುದ್ಧ ಮಾಧ್ಯಮಗಳಿಗೆ ಸಂದರ್ಶನ ನೀಡುವಂತಿಲ್ಲ. ದುನಿಯಾ ವಿಜಿ ಆಗಲಿ ಅವರ ಕುಟುಂಬಸ್ಥರ ವಿರುದ್ಧವೂ ಬಹಿರಂಗವಾಗಿ ಹೇಳಿಕೆ ನೀಡುವಂತಿಲ್ಲ ಎಂದು ಕೋರ್ಟ್ ಸೂಚಿಸಿದೆ.
ಇತ್ತೀಚೆಗಷ್ಟೆ ವಿಜಿ ಮನೆಗೆ ಹೋಗಿದ್ದ ನಾಗರತ್ನ ಎರಡನೇ ಪತ್ನಿ ಕೀರ್ತಿ ಮೇಲೆ ಹಲ್ಲೆ ನಡೆಸಿದ್ದರು. ಅದಾದ ನಂತರ ವಿಚ್ಛೇದನ ಕೋರಿ ವಿಜಯ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 
ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್‌ ನಾಗರತ್ನ ಅವರು ವಿಜಯ್‌ ಮನೆಗೆ ತೆರಳದಂತೆ ನಿರ್ಬಂಧ ಹೇರಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.