ಸಿನಿಮಾ ಸುದ್ದಿ

ಶ್ರೀಮುರಳಿ 'ಭರಾಟೆ' ಚಿತ್ರೀಕರಣ ಮೂರನೇ ಹಂತಕ್ಕೆ

ಚೇತನ್ ಕುಮಾರ್ ನಿರ್ದೇಶನದ ಶ್ರೀಮುರಳಿ ನಾಯಕನಾಗಿರುವ "ಭರಾಟೆ" ತಂಡ ಇದೇ ಶುಕ್ರವಾರದಿಂದ ಮೂರನೇ ಹಂತದ ಚಿತ್ರೀಕರಣ ಪ್ರಾರಂಭಿಸಲಿದೆ.

ಶ್ರೀಮುರಳಿ 'ಭರಾಟೆ' ಚಿತ್ರೀಕರಣ ಮೂರನೇ ಹಂತಕ್ಕೆ
ಶ್ರೀಮುರಳಿ
Published On :
ಬೆಂಗಳೂರು: ಚೇತನ್ ಕುಮಾರ್ ನಿರ್ದೇಶನದ ಶ್ರೀಮುರಳಿ ನಾಯಕನಾಗಿರುವ "ಭರಾಟೆ" ತಂಡ ಇದೇ ಶುಕ್ರವಾರದಿಂದ ಮೂರನೇ ಹಂತದ ಚಿತ್ರೀಕರಣ ಪ್ರಾರಂಭಿಸಲಿದೆ. ವಿಶೇಷವೆಂದರೆ ಚಿಒತ್ರದ ಕಥೆಯನ್ನಾಗಲಿ, ಅದರ ಪಾತ್ರಚಿತ್ರಣ, ಗುಣಲಕ್ಷಣಗಳನ್ನಾಗಲಿ ನಿರ್ದೇಶಕ ಚೇತನ್ ಇದುವರೆಗೆ ಎಲ್ಲಿಯೂ ಬಹಿರಂಗಪಡಿಸಿಲ್ಲ.
ರಾಜಸ್ಥಾನದಲ್ಲಿ ಒಂದು ಹಾಡಿನ ಚಿತ್ರೀಕರಣ, ಮಂಡ್ಯದಲ್ಲಿ ಕೆಲ ಫೈಟಿಂಗ್ ದೃಶ್ಯಗಳನ್ನು ಮುಗಿಸಿರುವ ಚಿತ್ರತಂಡ ಮೈಸೂರು ಹಾಗೂ ಸುತ್ತಮುತ್ತಲ ಊರುಗಳಲ್ಲಿ ಚಿತ್ರಕ್ಕೆ ಸಂಬಂಧಿಸಿ ಕೆಲ ಕೌಟುಂಬಿಕ ಸನ್ನಿವೇಶಗಳ ಸೃಷ್ಟಿಗೆ ಮುಂದಾಗಿದೆ.
ನಿರ್ಮಾಪಕ ಸುಪ್ರೀತ್ ಪಾಲಿಗೆ ಈ ಚಿತ್ರ ಚೊಚ್ಚಲ ನಿರ್ಮಾಣದ ಚಿತ್ರವಾಗಿದ್ದು "ಭರಾಟೆ" ಶಬ್ದಾರ್ಥ ಸಾಮಾನ್ಯವಾಗಿ ಸದ್ದನ್ನುಂಟುಮಾಡುವುದು ಎಂದಾಗುತ್ತದೆ,ಶ್ರೀಲೀಲ ನಾಯಕಿಯಾಗಿರುವ ಈ ಚಿತ್ರದಲಿಕನಿಷ್ಟ ಒಂಬತ್ತು ಮಂದಿ ಖಳನಟರಿದ್ದಾರೆ.
ಅರ್ಜುನ್ ಜನ್ಯ ಸಂಗೀತ, ಗಿರೀಶ್ ಗೌಡ ಛಾಯಾಗ್ರಹಣ ಈ ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.