ಸಿನಿಮಾ ಸುದ್ದಿ

ಮುಂದಿನ ವಾರ ಹಾಲಿವುಡ್ ಸ್ಟಂಟ್ ಮ್ಯಾನ್ ಲಾರ್ನೆಲ್ ಸ್ಟೊವಾಲ್ ಭಾರತಕ್ಕೆ ಆಗಮನ

ಕಿಚ್ಚ ಸುದೀಪ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಪೈಲ್ವಾನ್ ಚಿತ್ರಕ್ಕಾಗಿ ನಿರ್ದೇಶಕ ಎಸ್. ಕೃಷ್ಣ ಹಾಲಿವುಡ್ ನಿಂದ ಸ್ಟಂಟ್ ಮ್ಯಾನ್ ಲಾರ್ನೆಲ್ ಸ್ಟೊವಾಲ್ ಅವರನ್ನು ಕರೆಯಿಸುತ್ತಿದ್ದಾರೆ.

ಮುಂದಿನ ವಾರ ಹಾಲಿವುಡ್ ಸ್ಟಂಟ್ ಮ್ಯಾನ್ ಲಾರ್ನೆಲ್ ಸ್ಟೊವಾಲ್ ಭಾರತಕ್ಕೆ ಆಗಮನ
ಸುದೀಪ್
Published On :

ಕಿಚ್ಚ ಸುದೀಪ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಪೈಲ್ವಾನ್ ಚಿತ್ರಕ್ಕಾಗಿ ನಿರ್ದೇಶಕ ಎಸ್. ಕೃಷ್ಣ  ಹಾಲಿವುಡ್ ನಿಂದ ಸ್ಟಂಟ್ ಮ್ಯಾನ್ ಲಾರ್ನೆಲ್ ಸ್ಟೊವಾಲ್ ಅವರನ್ನು  ಕರೆಯಿಸುತ್ತಿದ್ದಾರೆ.

ಸಾಹಸ ನಿರ್ದೇಶಕ ಲಾರ್ನೆಲ್ ಸ್ಟೊವಾಲ್  ಮುಂದಿನ ವಾರ ಭಾರತಕ್ಕೆ ಆಗಮಿಸಲಿದ್ದಾರೆ ಎಂಬುದು ಇತ್ತೀಚಿನ ಮಾಹಿತಿಯಿಂದ ತಿಳಿದುಬಂದಿದೆ.

ಈ ಚಿತ್ರದಲ್ಲಿ ಸುದೀಪ್ ಕುಸ್ತಿಪಟು ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರಿಗೆ ಲಾರ್ನೆಲ್ ಸ್ಟೊವಾಲ್  ಬಾಕ್ಸಿಂಗ್ ಪಟುಗಳನ್ನು ಹೇಳಿಕೊಡಲಿದ್ದಾರೆ.  ನೈಜ ರೀತಿಯಲ್ಲಿ ಸಾಹಸ ತೋರಿಸುವ ನಿಟ್ಟಿನಲ್ಲಿ ಅಲ್ಪಾವಧಿಯ ತರಬೇತಿ ಕಾರ್ಯಕ್ರಮವನ್ನು ಯೋಜಿಸುವ ಬಗ್ಗೆ ನಿರ್ದೇಶಕರು ಚಿಂತಿಸಿದ್ದಾರೆ.

ಮೂಲಗಳ ಪ್ರಕಾರ ಶೇ. 75 ರಷ್ಟು ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಡಿಸೆಂಬರ್ ತಿಂಗಳಲ್ಲಿ ಚಿತ್ರ ಪೂರ್ಣಗೊಳಿಸಲು ಕೃಷ್ಣ ಸಿದ್ಧತೆ ನಡೆಸಿದ್ದಾರೆ.

ಪೈಲ್ವಾನ ಚಿತ್ರದಲ್ಲಿ ಆಕಾಂಕ್ಷ ಸಿಂಗ್ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದು, ಅರ್ಜುನ ಜನ್ಯ ಸಂಗೀತ ಸಂಯೋಜನೆ ಹಾಗೂ ಕರುಣಾಕರ್ ಅವರ  ಛಾಯಾಗ್ರಹಣ ಇರಲಿದೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ , ರವಿಶಂಕರ್, ಕಬೀರ್ ದುಹಾನ್ ಸಿಂಗ್, ಸುಶಾಂತ್ ಸಿಂಗ್, ಶರತ್ ಲೊಹಿತ್ವಾಶ್ವಾರ ಮತ್ತಿತರರ ತಾರಾಗಣವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.