ಗ್ಲಾಡಿಯೇಟರ್ ಸರಣಿ ನಿರ್ಮಾಣಕ್ಕೆ ನಿರ್ದೇಶಕ ರಿಡ್ಲೆ ಸ್ಕಾಟ್ ಮುಂದು
ತಮ್ಮ ಆಸ್ಕರ್ ಪ್ರಶಸ್ತಿ ವಿಜೇತ ಸಿನಿಮಾ ಗ್ಲಾಡಿಯೇಟರ್ ನ ಸರಣಿಯನ್ನು ತಯಾರಿಸಲು ...

ತಮ್ಮ ಆಸ್ಕರ್ ಪ್ರಶಸ್ತಿ ವಿಜೇತ ಸಿನಿಮಾ ಗ್ಲಾಡಿಯೇಟರ್ ನ ಸರಣಿಯನ್ನು ತಯಾರಿಸಲು ಹಿರಿಯ ನಿರ್ದೇಶಕ ರಿಡ್ಲೆ ಸ್ಕಾಟ್ ಮುಂದಾಗಿದ್ದಾರೆ.
ಗ್ಲಾಡಿಯರ್ ಸಿನಿಮಾ 2000ನೇ ಇಸವಿಯಲ್ಲಿ ಬಿಡುಗಡೆಯಾಗಿತ್ತು. ಅದರಲ್ಲಿ ನಟರಾದ ರಸ್ಸೆಲ್ ಕ್ರೋವ್, ಜೋಕ್ವಿನ್ ಫೀನಿಕ್ಸ್ ಮತ್ತು ಕೋನಿ ನೀಲ್ಸೆನ್ ನಟಿಸಿದ್ದರು.
ಪಾರಾಮೌಂಟ್ ಚಿತ್ರ ನಿರ್ಮಾಣ ಸಂಸ್ಥೆಯಡಿ ನಿರ್ದೇಶಕರು ಸರಣಿಯನ್ನು ನಿರ್ಮಾಣ ಮಾಡಲು ಮುಂದಾಗಿದ್ದು ಇದಕ್ಕೆ ಪೀಟರ್ ಕ್ರೈಗ್ ಕಥೆ ಬರೆಯಲಿದ್ದಾರೆ.
ಬೆನ್ ಅಫ್ಲೆಕ್ನ ರ "ದಿ ಟೌನ್" ಮತ್ತು "ಹಂಗರ್ ಗೇಮ್ಸ್: ಮೋಕಿಂಗ್ಜಿ" ಚಿತ್ರಗಳಿಗೆ ಪೀಟರ್ ಈ ಮೊದಲು ಕಥೆ ಬರೆದಿದ್ದರು. ಪ್ರಸ್ತುತ ಅವರು, ಟಾಮ್ ಕ್ರೂಸ್ ಅಭಿನಯದ "ಟಾಪ್ ಗನ್: ಮಾವೆರಿಕ್" ನಲ್ಲಿ ಕೆಲಸ ಮಾಡುತ್ತಿದ್ದು ನಂತರ "ಗ್ಲಾಡಿಯೇಟರ್ ಕೈಗೆತ್ತಿಕೊಳ್ಳಲಿದ್ದಾರೆ.
ಗ್ಲಾಡಿಯೇಟರ್ ಚಿತ್ರದ ಸರಣಿಯಲ್ಲಿ ಲೂಸಿಲ್ಲಾ ಅವರ ಪುತ್ರ ಲೂಸಿಯಸ್ ಮತ್ತು ಕಮ್ಮೊಡಸ್ ನ ಅಳಿಯನ ಮೇಲೆ ಚಿತ್ರ ಕೇಂದ್ರೀಕೃತವಾಗಿರುತ್ತದೆ.
2001ರ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಗ್ಲಾಡಿಯೇಟರ್ 5 ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಕ್ರೋವ್ ಗೆ ಉತ್ತನ ನಟ ಹಾಗೂ ಗ್ಲಾಡಿಯೇಟರ್ ಗೆ ಉತ್ತಮ ಚಿತ್ರ ಪ್ರಶಸ್ತಿ ಸಿಕ್ಕಿತ್ತು.
80 ವರ್ಷದ ಹಾಲಿವುಡ್ ನಿರ್ದೇಶಕ ರಿಡ್ಲೆ ಸ್ಕಾಟ್ ಆಲ್ ದ ಮನಿ ಇನ್ ದ ವರ್ಲ್ಡ್ ಚಿತ್ರ ನಿರ್ದೇಶಿಸಿದ್ದರು. ಪ್ರಸ್ತುತ ರೈಸ್ ಡ್ ಬೈ ವೊಲ್ವ್ಸ್ ಎಂಬ ಟಿವಿ ಧಾರವಾಹಿಯೊಂದನ್ನು ನಿರ್ದೇಶಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


