'ಪಾರ್ವತಮ್ಮನ ಮಗಳು' ಹರಿಪ್ರಿಯಾ ಫರ್ಸ್ಟ್ ಲುಕ್
ದುವರೆಗೆ ಗ್ಲ್ಯಾಮರ್ ಬೆಡಗಿ, ಹಳ್ಳಿ ಹುಡುಗಿ, ಸಾಂಪ್ರದಾಯಿಕ ಮನಸ್ಥಿತಿಯ ಮುಗ್ಧ ಹುಡುಗಿ ಹೀಗೆ ಹಲವು ಪಾತ್ರಗಳಿಂದ ಬೆಳ್ಳಿಪರದೆಯ ಮೇಲೆ ಮಿಂಚಿದ್ದ ಹರಿಪ್ರಿಯಾ ...

Published On :
ಬೆಂಗಳೂರು: ಇದುವರೆಗೆ ಗ್ಲ್ಯಾಮರ್ ಬೆಡಗಿ, ಹಳ್ಳಿ ಹುಡುಗಿ, ಸಾಂಪ್ರದಾಯಿಕ ಮನಸ್ಥಿತಿಯ ಮುಗ್ಧ ಹುಡುಗಿ ಹೀಗೆ ಹಲವು ಪಾತ್ರಗಳಿಂದ ಬೆಳ್ಳಿಪರದೆಯ ಮೇಲೆ ಮಿಂಚಿದ್ದ ಹರಿಪ್ರಿಯಾ ತಮ್ಮ 25ನೇ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
‘d/o ಪಾರ್ವತಮ್ಮ’ದಲ್ಲಿ ಸುಮಲತಾ ಅಂಬರೀಶ್ ಅವರ ಜತೆ ನಟಿಸುತ್ತಿರುವುದು ಈಗಾಗಲೇ ಸುದ್ದಿಯಾಗಿತ್ತು. ಅದರಲ್ಲಿ ಅವರು ತನಿಖಾ ಅಧಿಕಾರಿಯಾಗಿ ನಟಿಸುತ್ತಿದ್ದು, ಇದೀಗ ಚಿತ್ರತಂಡ ಹರಿಪ್ರಿಯಾ ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಮೇ 29ರಂದು ಬಿಡುಗಡೆಯಾದ ಫಸ್ಟ್ ಲುಕ್‌ನ ಚಿತ್ರದಲ್ಲಿ ಖಡಕ್ ಲುಕ್‌ನಲ್ಲಿ ಅವರು ಮಿಂಚುತ್ತಿದ್ದಾರೆ. ಈಗಾಗಲೇ 15 ದಿನದ ಶೂಟಿಂಗ್ ಪೂರ್ಣಗೊಂಡಿದೆ.
ಈ ಚಿತ್ರದಲ್ಲಿ ಅವರ ಪಾತ್ರದ ಹೆಸರು ವೈದೇಹಿ ಎರಡು ಶೇಡ್ ಗಳಲ್ಲಿ ಹರಿಪ್ರಿಯ ಕಾಣಿಸಿಕೊಳ್ಳಲಿದ್ದಾರೆ, .
ಹರಿಪ್ರಿಯಾ ಅವರಿಗೆ ನಿರ್ದೇಶಕ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ವೈದೇಹಿ ಪಾತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಹರಿಪ್ರಿಯಾ ಅವರೇ ಈ ಚಿತ್ರದಲ್ಲಿ ಅವರನ್ನು ಬಳಸಿಕೊಳ್ಳುವಂತೆ ಸೂಚಿಸಿದರಂತೆ.
ಒಂದು ಪ್ರಕರಣದ ತನಿಖೆಯ ಸುತ್ತಲೇ ಈ ಸಿನಿಮಾ ಹೆಣೆಯಲ್ಪಟ್ಟಿದ್ದರೂ ತಾಯಿ ಮಗಳ ನಡುವಿನ ಬಾಂಧವ್ಯಕ್ಕೂ ಸಾಕಷ್ಟು ಅವಕಾಶ ಇದೆಯಂತೆ. ಹೊಸ ನಿರ್ದೇಶಕ ಶಂಕರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಈಗಾಗಲೇ ಹದಿನೈದು ದಿನದ ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇಂದಿನಿಂದ ಎರಡನೇ ಶೆಡ್ಯೂಲ್ ಚಿತ್ರೀಕರಣ ಆರಂಭಿಸಲಿದೆ. ನಾಲ್ಕು ನಿರ್ಮಾಪಕರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


