ಕ್ರೈಮ್ ಆಧಾರಿತ ಚಿತ್ರದಲ್ಲಿ ಗುರು-ಶಿಷ್ಯ ರಮೇಶ್ ಅರವಿಂದ್-ಆಕಾಶ್ ಶ್ರೀವತ್ಸ ಒಂದು
ರಮೇಶ್ ಅರವಿಂದ್ ಜೊತೆಗೆ ಕೆಲಸ ಮಾಡಬೇಕೆಂಬುದು ಪ್ರತಿಯೊಬ್ಬ ನಿರ್ದೇಶಕನ ಕನಸಾಗಿರುತ್ತದೆ...

ರಮೇಶ್ ಅರವಿಂದ್ ಜೊತೆಗೆ ಕೆಲಸ ಮಾಡಬೇಕೆಂಬುದು ಪ್ರತಿಯೊಬ್ಬ ನಿರ್ದೇಶಕನ ಕನಸಾಗಿರುತ್ತದೆ. ಈ ಹಿರಿಯ ನಟನಿಗೆ ಅನುಭವಿ ಪಾತ್ರಗಳು ಸಿಗುತ್ತಿಲ್ಲವೆಂದಲ್ಲ. ಆದರೆ ಅವರ ವಯಸ್ಸಿಗೆ ತಕ್ಕ ಪಾತ್ರಗಳು ಸಿಗುತ್ತಿಲ್ಲ ಎಂಬುದು ಕೊರತೆಯಾಗಿದೆ.
ಕನ್ನಡ ಕೋಟ್ಯಧಿಪತಿ ರಿಯಾಲಿಟಿ ಶೋವನ್ನು ನಡೆಸಲು ಸಜ್ಜಾಗಿರುವ ರಮೇಶ್ ಅರವಿಂದ್ ಆಕಾಶ್ ಶ್ರೀವತ್ಸ ಜೊತೆಗೆ ಮತ್ತೊಂದು ಪ್ರಾಜೆಕ್ಟ್ ಗೆ ಕೈಹಾಕಿದ್ದಾರೆ.
ಇದರಲ್ಲಿನ ಪಾತ್ರ ಅವರಿಗೆ ಇಷ್ಟವಾಗಿದೆಯಂತೆ. ನನಗೆ ಸಿನಿಮಾಗಳಲ್ಲಿ ಬರುತ್ತಿರುವ ಪಾತ್ರಗಳು ಪ್ರೀತಿ, ಹೊಂದಾಣಿಕೆ, ಕಾಮಿಡಿ ಪ್ರಧಾನ ಪಾತ್ರಗಳೇ ಆಗಿವೆ. ಈ ಚಿತ್ರದಲ್ಲಿ ವಿಭಿನ್ನ ಪಾತ್ರವಿದೆ. ಅದಕ್ಕಾಗಿ ನಾನು ಈ ಚಿತ್ರ ಒಪ್ಪಿಕೊಂಡೆ. ಇದರಲ್ಲಿ ಶರ್ಲಾಕ್ ಹೋಮ್ಸ್ ಅಥವಾ ಎಸಿಪಿ ಅಥವಾ ಡಿಸಿಪಿಯಂತಹ ಪಾತ್ರವನ್ನು ಮಾಡುತ್ತಿದ್ದೇನೆ. ತುಂಬಾ ಆಸಕ್ತಿಕರವಾದ ನನ್ನ ವಯಸ್ಸಿಗೆ ತಕ್ಕ ಪಾತ್ರವಿದು ಎನ್ನುತ್ತಾರೆ ರಮೇಶ್.
ಆಕಾಶ್ ಶ್ರೀವತ್ಸ ಈ ಹಿಂದೆ ರಮೇಶ್ ಅರವಿಂದ್ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದವರು. ತಮ್ಮ ಗುರುಗಳಿಗಾಗಿ ಚಿತ್ರ ಮಾಡುತ್ತಿರುವುದು ಖುಷಿಯಾಗುತ್ತಿದೆ ಎನ್ನುತ್ತಿದ್ದಾರೆ ಆಕಾಶ್ ಶ್ರೀವತ್ಸ.
ಭೈರದೇವಿ ಚಿತ್ರದ 8 ದಿನಗಳ ಶೂಟಿಂಗ್ ಮಾತ್ರ ಬಾಕಿಯಿದ್ದು, ಇದನ್ನು ರಾಧಿಕಾ ಕುಮಾರಸ್ವಾಮಿ ನಿರ್ಮಿಸುತ್ತಿದ್ದಾರೆ. ಅದರಲ್ಲಿ ಕೂಡ ಪೊಲೀಸ್ ಅಧಿಕಾರಿಯ ಪಾತ್ರ.
ತಮ್ಮ ನಿರ್ದೇಶನದ ಕ್ವೀನ್ ಚಿತ್ರದ ಮುಂದಿನ ಶೂಟಿಂಗ್ ಶೆಡ್ಯೂಲ್ ನಲ್ಲಿ ಭಾಗವಹಿಸಲಿರುವ ರಮೇಶ್ ಅರವಿಂದ್ ತಮಿಳಿನಲ್ಲಿ ಕಾಜಲ್ ಅಗರ್ ವಾಲ್ ಪಾತ್ರದ ಶೂಟಿಂಗ್ ನಲ್ಲಿ ತೊಡಗಲಿದ್ದಾರೆ. ಜೂನ್ ವೇಳೆಗೆ ಈ ಚಿತ್ರ ತೆರೆಗೆ ಬರಲು ಸಜ್ಜಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


