ಸಿನಿಮಾ ಸುದ್ದಿ

ಚಿಲ್ಲಂ ಚಿತ್ರದಲ್ಲಿ ನಟಿಸಲು ನಾನಾ ಪಾಟೇಕರ್ ಗ್ರೀನ್ ಸಿಗ್ನಲ್

ಯಕ್ಷ ಚಿತ್ರದ ನಂತರ ಬಾಲಿವುಡ್ ನಟ ನಾನಾ ಪಾಟೇಕರ್ ಮತ್ತೆ ಸ್ಯಾಂಡಲ್ ವುಡ್ ಗೆ ಆಗಮಿಸುತ್ತಿದ್ದಾರೆ.

ಚಿಲ್ಲಂ ಚಿತ್ರದಲ್ಲಿ  ನಟಿಸಲು  ನಾನಾ ಪಾಟೇಕರ್ ಗ್ರೀನ್ ಸಿಗ್ನಲ್
ನಾನಾ ಪಾಟೇಕರ್ ಹಾಗೂ ರಾಘವೇಂದ್ರ ರಾಜ್ ಕುಮಾರ್
Published On :

ಯಕ್ಷ  ಚಿತ್ರದ ನಂತರ ಬಾಲಿವುಡ್ ನಟ ನಾನಾ ಪಾಟೇಕರ್ ಮತ್ತೆ ಸ್ಯಾಂಡಲ್ ವುಡ್ ಗೆ ಆಗಮಿಸುತ್ತಿದ್ದಾರೆ.  

 ನಾಯಕ ನಟ ಮನೋರಂಜನ್ ಅಭಿನಯದ  ಚಂದ್ರಕಲಾ ನಿರ್ದೇಶನದ ಚಿಲ್ಲಂ  ಚಿತ್ರದಲ್ಲಿ ಅವರು  ಅಭಿಯಿಸುತ್ತಿದ್ದಾರೆ. ಈ ಚಿತ್ರದಲ್ಲಿನ ಅಭಿನಯಿಸುವಂತೆ ಚಿತ್ರತಂಡ ನಾನಾ ಪಾಟೇಕರ್ ಬಳಿ ಕೆಲ  ತಿಂಗಳ ಹಿಂದೆ ಕೇಳಿಕೊಂಡಿತ್ತು. ಅದಕ್ಕೆ  ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ  ಎಂಬಂತಹ ಮಾಹಿತಿ ತಿಳಿದುಬಂದಿದೆ.

 ಚಿಲ್ಲಂ ಮೂಲಕ ಡಾ. ರಾಜ್ ಕುಮಾರ್ ಪುತ್ರ ರಾಘವೇಂದ್ರ ಕುಮಾರ್ ಧೀರ್ಘ  ಕಾಲದ ನಂತರ ಮತ್ತೆ  ಬಣ್ಣ ಹಚ್ಚುತ್ತಿದ್ದಾರೆ.  ಈ ಚಿತ್ರದಲ್ಲಿ ಅವರು ವಿಲನ್ ಆಗಿ ಅಭಿನಯಿಸುತ್ತಿದ್ದಾರೆ. ಈ ಮೂಲಕ  ಅಭಿಮಾನಿಗಳಿಗೆ   ತೆರೆಯ ಮೇಲೆ ಭಿನ್ನ ಪ್ರತಿಭೆ  ವೀಕ್ಷಿಸುವ ಅವಕಾಶ ಕಲ್ಪಿಸುತ್ತಿದ್ದಾರೆ.

ಪ್ರಿಯಾಂಕ ತಿಮ್ಮೇಶ್ ನಟಿಯಾಗಿದ್ದು, ಬಿಗ್ ಬಾಸ್ ಖ್ಯಾತಿಯ ದಿವಾಕರ್, ಸಂದೀಪ್ ರಾಗ,  ವಿ. ನಾಥ್, ಹಾಗೂ ನಿರ್ದೇಶಕರ ಮಗ ಭರತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 ಚಿಲ್ಲಂ ನಿರ್ಮಾಣ ಪೂರ್ವ ಹಂತದಲ್ಲಿದ್ದು, ಮೇ 16 ರಿಂದ ಚಿತ್ರೀಕರಣ ಆರಂಭವಾಗಲಿದೆ. ನೊಬಿನ್ ಪೌಲ್ ಅವರು ಸಂಗೀತ ಸಂಯೋಜಿಸಿದ್ದು, ನವೀನ್ ಕುಮಾರ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.