ಸಿನಿಮಾ ಸುದ್ದಿ

ಬಹು ನಿರೀಕ್ಷಿತ ವಿಲ್ಲನ್ ಸಿನಿಮಾ ರಿಲೀಸ್ ಗೆ ಡೇಟ್ ಪಿಕ್ಸ್!

ಸ್ಯಾಂಡಲ್ ವುಡ್ ನಲ್ಲಿ ತೀವ್ರ ಕುತೂಹಲ ಮೂಡಿಸಿರುವ ಶಿವರಾಜ್ ಕುಮಾರ್ ಮತ್ತು ಸುದೀಪ್ ನಟನೆಯ ದಿ ವಿಲ್ಲನ್ ಸಿನಿಮಾ ರಿಲೀಸ್ ಮಾಡಲು ನಿರ್ದೇಶಕ ...

ಬಹು ನಿರೀಕ್ಷಿತ ವಿಲ್ಲನ್ ಸಿನಿಮಾ ರಿಲೀಸ್ ಗೆ ಡೇಟ್ ಪಿಕ್ಸ್!
ವಿಲ್ಲನ್ ಪೋಸ್ಟರ್
Published On :
ಬೆಂಗಳೂರು:  ಸ್ಯಾಂಡಲ್ ವುಡ್ ನಲ್ಲಿ ತೀವ್ರ ಕುತೂಹಲ ಮೂಡಿಸಿರುವ ಶಿವರಾಜ್ ಕುಮಾರ್ ಮತ್ತು ಸುದೀಪ್ ನಟನೆಯ  ದಿ ವಿಲ್ಲನ್ ಸಿನಿಮಾ ರಿಲೀಸ್ ಮಾಡಲು ನಿರ್ದೇಶಕ ಪ್ರೇಮ್ ದಿನಾಂಕ ನಿಗದಿ ಮಾಡಿದ್ದಾರೆ.
ಆಗಸ್ಟ್ 24 ರಂದು ವರಮಹಾಲಕ್ಷ್ನಿ ದಿನ ಹಬ್ಬದಂದು ವಿಲ್ಲನ್ ಸಿನಿಮಾ ರಿಲೀಸ್ ಆಗಲಿದ್ದು ಅಲ್ಲಿಯವರೆಗೂ ಅಭಿಮಾನಿಗಳು ಕಾಯಬೇಕಾಗಿದೆ.
ರಾಜ್ಯ ವಿಧಾನಸಭೆ ಚುನಾವಣೆ ಮತ್ತು ಐಪಿಎಲ್ ಪಂದ್ಯಾವಳಿಗಳು ಮುಗಿದ ನಂತರ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಿಲಾಗಿದೆ.ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ, ವಿಲ್ಲನ್ ಗಾಗಿ ಡಬ್ಬಿಂಗ್ ಆರಂಭವಾಗಿದೆ. ಬಾಲಾಜಿ ಮತ್ತು ಆಕಾಶ್ ಸ್ಟುಡಿಯೋದಲ್ಲಿ ಡಬ್ಬಿಂಗ್ ನಡೆಯುತ್ತಿದ್ದು ಹಲವು  ಕಲಾವಿದರು ಡಬ್ಬಿಂಗ್ ಆರಂಭಿಸಿದ್ದಾರೆ. ಶೀಘ್ರವೇ ಶಿವರಾಜ್ ಕುಮಾರ್ ಕೂಡ ಡಬ್ಬಿಂಗ್ ನಲ್ಲಿ ಕಾರ್ಯ ಮುಗಿಸಲಿದ್ದಾರೆ, ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸ ಶೀಘ್ರವೇ ಮುಗಿಯಲಿದ್ದು, ಜೂನ್ ತಿಂಗಳಲ್ಲಿ ಆಡಿಯೋ ರೀಲಿಸ್ ಆಗಲಿದೆ. 
ವಿಲ್ಲನ್ ಸಿನಿಮಾವನ್ನು ತಾನ್ವಿ ಪ್ರೊಡಕ್ಷನ್ ಅಡಿಯಲ್ಲಿ ಸಿಆರ್ ಮನೋಹರ್ ನಿರ್ಮಾಣ ಮಾಡುತ್ತಿದ್ದಾರೆ, ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಹಾಗಬ ತೆಲುಗಿನ ಶ್ರೀಕಾಂತ್ ಕೂಡ ಅಭಿನಯಿಸಿದ್ದಾರೆ, ರಚಿತಾ ರಾಮ್, ಶ್ರದ್ಧ ಶ್ರೀನಾಥ್,ಮುಂತಾದವರು ನಟಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.