ಸಿನಿಮಾ ಸುದ್ದಿ

ಶಿವಣ್ಣ ಜೊತೆಗಿನ ನಟನೆ ದೊಡ್ಡ ಮೈಲುಗಲ್ಲಾಗಲಿದೆ: ಚುಕ್ಕಿ ಚೆಲುವೆ ನಟಿ ಮಯೂರಿ

ಸ್ಯಾಂಡಲ್ ವುಡ್ ಚುಕ್ಕಿ ಚೆಲುವೆ ಮಯೂರಿ ಈಗಂತೂ ಸಖತ್ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಚಿತ್ರಗಳನ್ನು ತಮ್ಮ ಕೈನಲ್ಲಿಟ್ಟುಕೊಂಡಿರುವ ಮಯೂರಿಯವರಿಗೆ ಬೇಡಿಕೆ ಕೂಡ ಹೆಚ್ಚಾಗಿದ್ದು, ಪ್ರಸ್ತುತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್...

ಶಿವಣ್ಣ ಜೊತೆಗಿನ ನಟನೆ ದೊಡ್ಡ ಮೈಲುಗಲ್ಲಾಗಲಿದೆ: ಚುಕ್ಕಿ ಚೆಲುವೆ ನಟಿ ಮಯೂರಿ
ಚುಕ್ಕಿ ಚೆಲುವೆ ಮಯೂರಿ
Published On :
ಸ್ಯಾಂಡಲ್ ವುಡ್ ಚುಕ್ಕಿ ಚೆಲುವೆ ಮಯೂರಿ ಈಗಂತೂ ಸಖತ್ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಚಿತ್ರಗಳನ್ನು ತಮ್ಮ ಕೈನಲ್ಲಿಟ್ಟುಕೊಂಡಿರುವ ಮಯೂರಿಯವರಿಗೆ ಬೇಡಿಕೆ ಕೂಡ ಹೆಚ್ಚಾಗಿದ್ದು, ಪ್ರಸ್ತುತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೊಂದಿಗೆ ನಟಿಸುವ ಅವಕಾಶ ಕೂಡ ಪಡೆದುಕೊಂಡಿದ್ದಾರೆ. 
ದಕ್ಷಿಣ ಭಾರತದಲ್ಲಿ ಗ್ರೇಟ್ ಸ್ಟಂಟ್ ಡೈರೆಕ್ಟರ್ ಎನಿಸಿಕೊಂಡಿರುವ ರವಿವರ್ಮ ಅವರು ನಿರ್ದೇಶನದತ್ತ ಮುಖ ಮಾಡಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗಾಗಿ ರುಸ್ತುಂ ಎನ್ನುವ ರಗಡ್ ಕಥೆ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಚಿತ್ರದಲ್ಲಿ ಶಿವಣ್ಣ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿ ಮಯೂರಿಯವರು ಕಾಣಿಸಿಕೊಳ್ಳಲಿದ್ದಾರೆ. 
ತಮ್ಮ ಪಾತ್ರದ ಕುರಿತಂತೆ ಮಾತನಾಡಿರುವ ಮಯೂರಿಯವರು, ಚಿತ್ರದ ಹೀರೋ ಆಗಿರುವ ಶಿವಣ್ಣ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ನಡೆಸುತ್ತಿದ್ದೇನೆಂದು ಹೇಳಿದ್ದಾರೆ. 
ಚಿತ್ರದ ಕುರಿತಂತೆ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸದಂತೆ ತಿಳಿಸಲಾಗಿದೆ. ಆದರೆ, ಸತ್ಯ ಹೇಳಬೇಕೆಂದರೆ ಈ ದೊಡ್ಡ ಬ್ಯಾನ್ ನಲ್ಲಿ ಕೆಲಸ ಮಾಡುವ ನನ್ನ ಕನಸು ನನಸಾಗಿದೆ. ಚಿತ್ರದಲ್ಲಿ ಶಿವಣ್ಣ ಅವರ ಜೊತೆಗಿನ ಕೆಲಸ ದೊಡ್ಡ ಮೈಲುಗಲ್ಲಾಗಲಿದೆ ಎಂದು ಹೇಳಿದ್ದಾರೆ. 
ನನ್ನ ವ್ಯಕ್ತಿತ್ವವನ್ನು ಇಟ್ಟುಕೊಟ್ಟು ನಿರ್ದೇಶಕರು ಪಾತ್ರವನ್ನು ರಚನೆ ಮಾಡಿರುವ ವಿಚಾರ ತಿಳಿದಾಗ ಬಹಳಷ್ಟು ಸಂತೋಷವಾಯಿತು. ಇನ್ನಾವುದೇ ಆಯ್ಕೆಗಳನ್ನು ನೋಡದೇ ಇರುವುದನ್ನು ತಿಳಿದು ನನಗೆ ಅತ್ಯಂತ ಗೌರವ ಎನಿಸಿತು. ನನ್ನ ಮೇಲೆ ಸಾಕಷ್ಟು ನಿರೀಕ್ಷೆಗಳಿರುತ್ತದೆ ಎಂಬುದೂ ಕೂಡ ನನಗೆ ಅರ್ಥವಾಯಿತು. ನನ್ನಿಂದ ಸಾಧ್ಯವಾದಷ್ಟು ಉತ್ತಮವಾದ ಕೆಲಸ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 
ಪ್ರಸ್ತುತ ಮಯೂರಿಯವರು ನಟ ಜಗ್ಗೇಶ್ ಅವರ ನಟಿಸುತ್ತಿರುವ 8ಎಂಎಂ ಚಿತ್ರದ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದು, ಚಿತ್ರದ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಈಗಾಗಲೇ ಸಂಚಾರಿ ವಿಜಯ್ ಅವರೊಂದಿಗೆ ಆಟಕ್ಕುಂಟು ಲೆಕ್ಕಲಿಲ್ಲ ಚಿತ್ರದಲ್ಲಿ ನಟಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.