ಮಾಧುರಿ ದೀಕ್ಷಿತ್ ಅವರಿಗೆ ಯಾರೂ ಸರಿಸಾಟಿಯಿಲ್ಲ: ಜಾಕ್ವೆಲಿನ್ ಫರ್ನಾಂಡಿಸ್
ಏಕ್ ದೋ ತೀನ್ ಹಾಡಿಗೆ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ಸದಾ ರಂಜಿಸಿದ್ದ ಮಾಧುರಿ ದೀಕ್ಷಿತ್ ಅವರ ಹತ್ತಿರಕ್ಕೆ ಬರಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಟಿ...

Published On :
ಮುಂಬಯಿ: ಏಕ್ ದೋ ತೀನ್ ಹಾಡಿಗೆ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ಸದಾ ರಂಜಿಸಿದ್ದ ಮಾಧುರಿ ದೀಕ್ಷಿತ್ ಅವರ ಹತ್ತಿರಕ್ಕೆ ಬರಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೇಳಿದ್ದಾರೆ.
ಭಾಗಿ-2 ಸಿನಿಮಾದಲ್ಲಿ ಎಕ್ ದೋ ತೀನ್ ಹಾಡಿಗೆ ಮತ್ತೆ ಜಾಕ್ವೆಲಿನ್ ಫರ್ನಾಂಡಿಸ್ ಡ್ಯಾನ್ಸ್ ಮಾಡಿದ್ದಾರೆ. ಮಾಧುರಿ ಮೇಡಮ್ ನಾನು ನಟಿಸಿರುವ ಈ ಹಾಡನ್ನು ನೋಡುತ್ತಾರೆ ಎಂಬ ಖುಷಿಯನ್ನು ನನಗೆ ತಡೆದುಕೊಳ್ಳಲಾಗುತ್ತಿಲ್ಲ, ಮೂಲ ಹಾಡಿಗೆ ಯಾವುದು ಸರಿಸಾಟಿಯಲ್ಲ. ಯಾರೋಬ್ಬರು ಅವರ ಹತ್ತಿರಕ್ಕೂ ಬರಲು ಸಾಧ್ಯವಿಲ್ಲ.
1988 ರಲ್ಲಿ ತೆರೆಗೆ ಬಂದ ತೇಜಾಬ್ ಸಿನಿಮಾದಲ್ಲಿ ಏಕ್ ದೋ ತೀನ್ ಹಾಡಿಗೆ ಮಾಧುರಿ ಡ್ಯಾನ್ಸ್ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದರು. ಜಾಕ್ವೆಲಿನ್ ನಟನೆಯ ಈ ಹಾಡಿಗೆ ಸರೋಜ್ ಖಾನ್, ಗಣೇಶ್ ಆಚಾರ್ಯ ಮತ್ತು ಅಹ್ಮದ್ ಖಾನ್ ನೃತ್ಯ ಸಂಯೋಜನೆ ಮಾಡಿದ್ದಾರೆ.
ಅಹ್ಮದ್ ಸಿನಿಮಾ ನಿರ್ದೇಶನ ಮಾಡಿದ್ದಾರೆ, ಮಾಧುರಿ ದೀಕ್ಷಿತ್ ಧರಿಸಿದ್ದ ಪಿಂಕ್ ಬಣ್ಣದ ಔಟ್ ಫಿಟ್ಅನ್ನು ಮನೀಶ್ ಮಲ್ಹೋತ್ರಾ ಜಾಕ್ವೆಲಿನ್ ಗಾಗಿ ವಿನ್ಯಾಸ ಮಾಡಿದ್ದಾರೆ. ಏಕ್ ದೋ ತೀನ್ ಮೂಲ ಹಾಡಿಗೆ ಸರೋಜ್ ಖಾನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಭಾಗಿ-2 ಸಿನಿಮಾದಲ್ಲಿ ಟೈಗರ್ ಶ್ರಾಫ್ , ದಿಶಾ ಪಟಾಣಿ ಸೇರಿದಂತೆ ಹಲವರು ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Madhuri DixitJacqueline Fernandezಮಾಧುರಿ ದೀಕ್ಷಿತ್ಜಾಕ್ವೆಲಿನ್ ಫರ್ನಾಂಡೀಸ್Ek do teenBaaghi 2ಏಕ್ ದೋ ತೀನ್ಭಾಗಿ-2
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


