ಪುನೀತ್ ರಾಜ್ ಕುಮಾರ್ ಸಿನಿಮಾದಲ್ಲಿ ಪ್ರಿಯಾಂಕಾ ಬದಲು ರಚಿತಾ ರಾಮ್?
ಪುನೀತ್ ರಾಜ್ ಕುಮಾರ್ ಅವರ ಇನ್ನೂ ಹೆಸರಿಡದ ಚಿತ್ರದ ಮೊದಲ ಆಯ್ಕೆಯ ನಟಿ ಪ್ರಾಜೆಕ್ಟ್ ನಿಂದ....

ಪುನೀತ್ ರಾಜ್ ಕುಮಾರ್ ಅವರ ಇನ್ನೂ ಹೆಸರಿಡದ ಚಿತ್ರದ ಮೊದಲ ಆಯ್ಕೆಯ ನಟಿ ಪ್ರಾಜೆಕ್ಟ್ ನಿಂದ ಹೊರಬಂದಿದ್ದು ಅಲ್ಲಿಗೆ ರಚಿತಾ ರಾಮ್ ಪ್ರವೇಶವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಪವನ್ ಒಡೆಯರ್ ನಿರ್ದೇಶನದ ಚಿತ್ರದಲ್ಲಿ ಆರಂಭದಲ್ಲಿ ನಾಯಕಿಯಾಗಿ ಪ್ರಿಯಾಂಕ ಜವಲ್ಕರ್ ಆಯ್ಕೆಯಾಗಿದ್ದಾರೆ. ಇದೀಗ ಆಕೆ ಹೊರಬಂದಿದ್ದು ಕನ್ನಡದ ನಟಿ ರಚಿತಾ ರಾಮ್ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮೊನ್ನೆ ಭಾನುವಾರ ಆರಂಭಗೊಂಡ ಶೂಟಿಂಗ್ ನಲ್ಲಿ ಪ್ರಿಯಾಂಕಾ ಇದ್ದರು. ಆದರೆ ಇದೀಗ ನಾಯಕಿ ಬದಲಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ನಿರ್ದೇಶಕರಾಗಲಿ, ನಿರ್ಮಾಣ ತಂಡವಾಗಲಿ ದೃಢಪಡಿಸಿಲ್ಲ.
ಆದರೆ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ರಚಿತಾ ರಾಮ್ ಈಗಾಗಲೇ ಚಿತ್ರತಂಡದ ಜೊತೆ ಸೇರಿ ಶೂಟಿಂಗ್ ಆರಂಭಿಸಿದ್ದಾರೆ. ಯಾವ ಕಾರಣಕ್ಕೆ ನಾಯಕಿ ಬದಲಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲವಾದರೂ ಬೇರೆ ಚಿತ್ರಗಳಲ್ಲಿ ಪ್ರಿಯಾಂಕ ಅವರು ಬ್ಯುಸಿಯಾಗಿರುವುದರಿಂದ ಅವರಿಗೆ ಈ ಚಿತ್ರಕ್ಕೆ ಸಂಪೂರ್ಣ ಸಮಯವನ್ನು ನೀಡಲಾಗುತ್ತಿಲ್ಲ ಎನ್ನಲಾಗುತ್ತಿದೆ. ಅಲ್ಲದೆ ನಿರ್ದೇಶಕರು ಕನ್ನಡ ಭಾಷೆ ಗೊತ್ತಿರುವ ನಾಯಕಿಯನ್ನೆ ಹಾಕಿಕೊಂಡರೆ ಉತ್ತಮ ಎಂದು ಅಂತಿಮ ಕ್ಷಣದಲ್ಲಿ ಮನಸ್ಸು ಬದಲಾಯಿಸಿದರು ಎನ್ನಲಾಗುತ್ತಿದೆ.
ಪುನೀತ್ ಅವರ ಚಕ್ರವ್ಯೂಹದಲ್ಲಿ ಕೂಡ ಇದೇ ರೀತಿಯಾಗಿತ್ತು. ನಿರ್ದೇಶಕ ಸರ್ವನನ್ ಆರಂಭದಲ್ಲಿ ಪೂನಂ ಬಾಜ್ವಾ ನಂತರ ಪಲ್ಲವಿ ಜೋಷಿಯವರನ್ನು ಆರಿಸಿದ್ದರು. ನಂತರ ಅಂತಿಮ ಕ್ಷಣದಲ್ಲಿ ರಚಿತಾ ರಾಮ್ ಬಂದಿದ್ದರು.
ರಚಿತಾ ರಾಮ್ ಪ್ರಸ್ತುತ ಜಾನಿ ಜಾನಿ ಯಸ್ ಪಪ್ಪಾ, ಅಯೋಗ್ಯ ಹಾಗೂ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷ ಇದು ಅವರ ನಾಲ್ಕನೇ ಸಿನಿಮಾ. ಪುನೀತ್ ಅವರ ಇತ್ತೀಚಿನ ಚಿತ್ರ ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ತಯಾರಾಗುತ್ತಿದ್ದು ಅದಕ್ಕೆ ಡಿ ಇಮ್ಮಮ್ ಅವರ ಸಂಗೀತ ಮತ್ತು ವೈದ್ಯ ಅವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


