ಯಜಮಾನ ಚಿತ್ರದಲ್ಲಿ ದರ್ಶನ್ ಜತೆ ಕುಣಿದ ಸ್ಟಾರ್ ನಟರು!
ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಮಲ್ಟಿಸ್ಟಾರರ್ ಚಿತ್ರವಲ್ಲ. ಆದರೆ ಚಿತ್ರದ ಒಂದು ಹಾಡಿನಲ್ಲಿ ದರ್ಶನ್ ಜತೆ ಸಹ ನಟರು ಹೆಜ್ಜೆ ಹಾಕಿದ್ದಾರೆ....

Published On :
ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಮಲ್ಟಿಸ್ಟಾರರ್ ಚಿತ್ರವಲ್ಲ. ಆದರೆ ಚಿತ್ರದ ಒಂದು ಹಾಡಿನಲ್ಲಿ ದರ್ಶನ್ ಜತೆ ಸಹ ನಟರು ಹೆಜ್ಜೆ ಹಾಕಿದ್ದಾರೆ.
ಯಜಮಾನ ಚಿತ್ರದ ಹಾಡೊಂದರಲ್ಲಿ ನೆನಪಿರಲಿ ಪ್ರೇಮ್, ವಿನೋದ್ ಪ್ರಭಾಕರ್, ಪ್ರಜ್ವತ್ ದೇವರಾಜ್ ಸೇರಿದಂತೆ ಮುಂತಾದವರು ಹೆಜ್ಜೆ ಹಾಕಿದ್ದಾರೆ. ಮೈಸೂರಿನಲ್ಲಿ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದ್ದು ಈ ಎಲ್ಲಾ ಕಲಾವಿದರೂ ಭಾಗವಹಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಹಿಂದೆ ಅನೇಕ ನಟರ ಚಿತ್ರಗಳಲ್ಲಿ ದರ್ಶನ್ ಅತಿಥಿ ಪಾತ್ರ ನಿಭಾಯಿಸುವ ಮೂಲಕ ಆ ಚಿತ್ರಗಳ ಮೆರುಗು ಹೆಚ್ಚಿಸಿದ್ದರು. ಪ್ರೇಮ್, ಪ್ರಜ್ವಲ್ ಒಟ್ಟಾಗಿ ನಟಿಸಿದ್ದ ಚೌಕ ಚಿತ್ರದಲ್ಲಿ ದರ್ಶನ್ ರಾರ್ಬಟ್ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಈಗ ಯಜಮಾನ ಚಿತ್ರಕ್ಕಾಗಿ ಪ್ರಜ್ವಲ್ ಹಾಗೂ ಪ್ರೇಮ್ ಹೆಜ್ಜೆ ಹಾಕಿದ್ದಾರೆ.
ಯಜಮಾನ ಚಿತ್ರದ ಯಾವ ಹಾಡಿನಲ್ಲಿ ನಟರು ಹೆಜ್ಜೆ ಹಾಕಿದ್ದಾರೆ ಎಂಬ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಹಾಗಾಗಿ ಅಭಿಮಾನಿಗಳವಲಯದಲ್ಲಿ ಸಹಜವಾಗಿಯೇ ಕುತೂಹಲ ಗರಿಗೆದರಿದೆ.
ಯಾಜಮಾನ ದರ್ಶನ್ ಅಭಿನಯದ 51ನೇ ಚಿತ್ರವಾಗಿದ್ದು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಶೈಲಜಾ ನಾಗ್ ಮತ್ತು ಬಿ ಸುರೇಶ್ ಬಂಡವಾಳ ಹೂಡುತ್ತಿದ್ದು ಪಿ. ಕುಮಾರ್ ಚಿತ್ರವನ್ನು ನಿರ್ದೇಶಿಸುತ್ತಿದ್ದು ವಿ. ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


