ಸಿನಿಮಾ ಸುದ್ದಿ

ಹಾರರ್-ಕಾಮಿಡಿ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್: ಚಿತ್ರೀಕರಣ ಇಂದಿನಿಂದ ಆರಂಭ

ಕಚಗುಳಿ ಇಡುವ ಸಂಭಾಷಣೆಗಳನ್ನು ನೀಡುವ ಮೂಲ ಅಭಿಮಾನಿಗಳನ್ನು ರಂಜಿಸುತ್ತಿದ್ದ ಸ್ಯಾಂಡಲ್'ವುಡ್'ನ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಾಗಣ್ಣ ನಿರ್ದೇಶನದ ಹಾರರ್-ಕಾಮಿಡಿ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆಂಬುದು ಹಳೆಯ ಸುದ್ದಿಯಾಗಿದ್ದು...

ಹಾರರ್-ಕಾಮಿಡಿ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್: ಚಿತ್ರೀಕರಣ ಇಂದಿನಿಂದ ಆರಂಭ
ನಟ ಗಣೇಶ್
Published On :
ಕಚಗುಳಿ ಇಡುವ ಸಂಭಾಷಣೆಗಳನ್ನು ನೀಡುವ ಮೂಲ ಅಭಿಮಾನಿಗಳನ್ನು ರಂಜಿಸುತ್ತಿದ್ದ ಸ್ಯಾಂಡಲ್'ವುಡ್'ನ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಾಗಣ್ಣ ನಿರ್ದೇಶನದ ಹಾರರ್-ಕಾಮಿಡಿ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆಂಬುದು ಹಳೆಯ ಸುದ್ದಿಯಾಗಿದ್ದು, ಇದೀಗ ಚಿತ್ರದ ಚಿತ್ರೀಕರಣ ಸೋಮವಾರದಿಂದ ಆರಂಭವಾಗಲಿದೆ. 
ಗಣೇಶ್ ಅವರು ಅಭಿನಯಿಸುತ್ತಿರುವ ಹಾರರ್ ಚಿತ್ರಕ್ಕೆ ನಾಯಕಿಯಾಗಿ ಪಂಜಾಬಿ ನಟಿ ರೋನಿಕಾ ಸಿಂಗ್ ಎಂಬುವವರನ್ನು ಕನ್ನಡಕ್ಕೆ ಪರಿಚಯಿಸಲಾಗುತ್ತಿದೆ. ಈಗಾಗಲೇ ರಾಮ್ತಾ ಜೋಗಿ ಶೀರ್ಷಿಕೆಯ ಪಂಜಾಬಿ ಸಿನಿಮಾ ಮಾಡಿದ್ದ ರೋನಿಕಾ, ಗಣೇಶ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ಸ್ಯಾಂಡಲ್'ವುಡ್'ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 
ಚಿತ್ರದ ಶೀರ್ಷಿಕೆ ಇನ್ನೂ ಅಂತಿವಾಗ ಹಿನ್ನಲೆಯಲ್ಲಿ ಈ ಚಿತ್ರದಲ್ಲಿ ರೋನಿಕಾ ಕೂಡ ಪಾಲ್ಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ. 
ಆದರೆ, ಚಿತ್ರ ನಾಯಕಿ ರೋನಿಕಾ ಅವರೇ ಎಂದು ಚಿತ್ರದ ತಂಡ ಎಲ್ಲಿಯೂ ಬಹಿರಂಗಪಡಿಸಿಲ್ಲ. ಚಿತ್ರದಲ್ಲಿ ಸುಂದರ್ ರಾಜ್, ಶೋಭರಾಜ್, ಸಾಧು ಕೋಕಿಲಾ ಮತ್ತು ಗುರು ದತ್ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ. 
ಚಿತ್ರದ ಶೀರ್ಷಿಕೆಗಾಗಿ ಚಿತ್ರ ಚಿಂತನೆಗಳನ್ನು ನಡೆಸುತ್ತಿದ್ದು, ನಂಜುಂಡ ಅವರು ಚಿತ್ರಕ್ಕೆ ಸಂಭಾಷಣೆಗಳನ್ನು ಬರೆದಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದರೆ, ವಿಘ್ನೇಶ್ ಅವರು ಛಾಯಾಗ್ರಾಹಕರಾಗಿ ತಮ್ಮ ಕೈಚಳಕ ತೋರಿಸಲಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.