ಸಿನಿಮಾ ಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ "ಎಕ್ಸ್ ಕ್ಯೂಸ್ ಮಿ" ಖ್ಯಾತಿಯ ಸುನೀಲ್ ರಾವ್

ಸ್ಯಾಂಡಲ್‍ವುಡ್ ನಟ ಎಕ್ಸ್ ಕ್ಯೂಸ್ ಮಿ ಖ್ಯಾತಿಯ ಸುನೀಲ್ ರಾವ್ ದಾಂಪತ್ಯ ಜೀವನಕೆ ಕಾಲಿಟ್ಟಿದ್ದಾ

ದಾಂಪತ್ಯ ಜೀವನಕ್ಕೆ ಕಾಲಿಟ್ಟ "ಎಕ್ಸ್ ಕ್ಯೂಸ್ ಮಿ" ಖ್ಯಾತಿಯ ಸುನೀಲ್ ರಾವ್
ದಾಂಪತ್ಯ ಜೀವನಕ್ಕೆ ಕಾಲಿಟ್ಟ "ಎಕ್ಸ್ ಕ್ಯೂಸ್ ಮಿ" ಖ್ಯಾತಿಯ ಸುನೀಲ್ ರಾವ್
Published On :
ಬೆಂಗಳೂರು: ಸ್ಯಾಂಡಲ್‍ವುಡ್ ನಟ ಎಕ್ಸ್ ಕ್ಯೂಸ್ ಮಿ ಖ್ಯಾತಿಯ ಸುನೀಲ್ ರಾವ್ ದಾಂಪತ್ಯ ಜೀವನಕೆ ಕಾಲಿಟ್ಟಿದ್ದಾರೆ.  ಖ್ಯಾತ ಗಾಯಕಿ ಬಿ.ಕೆ ಸುಮಿತ್ರ ಅವರ ಪುತ್ರ ಸುನೀಲ್ ತನ್ನ ಗೆಳತಿ, ಪ್ರೇಯಸಿಯೂ ಆದ ಶ್ರೇಯಾ ಐಯ್ಯರ್ ಅವರನ್ನು ವಿವಾಹವಾಗಿದ್ದಾರೆ.
ಕಾಸ್ಟ್ಯೂಮ್ ಡಿಸೈನರ್ ಆಗಿರುವ ಶ್ರೇಯಾ ಸುನೀಲ್ ಅಭಿನಯದ ವೆಬ್ ಸೀರಿಸ್‍ಗೆ ಡಿಸೈನರ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಅವರ ಮುಂದಿನ ಟಕ್ಕರ್’ ಚಿತ್ರಕ್ಕೆ ಸಹ ಇವರೇ ವಸ್ತ್ರ ವಿನ್ಯಾಸ ಮಾಡಲಿದ್ದಾರೆ.
ಚಿತ್ರೀಕರಣ ವೇಳೆ ಪರಿಚಯವಾಗಿದ್ದ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಹಸೆಮಣೆ ಏರಿದ್ದಾರೆ. ಇಂದು ಬೆಂಗಳೂರಿನ ಜೆಪಿ ನಗರದಲ್ಲಿ ಆಪ್ತರ ಸಮ್ಮುಖದಲ್ಲಿ ಅವರ ಮದುವೆ ಕಾರ್ಯಕ್ರಮ ನಡೆದಿದೆ.
ಸರಳವಾಗಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಅನುಪಮ ಗೌಡ ಹಾಗೂ ರಘುಶಾಸ್ತ್ರಿ ಸೇರಿದಂತೆ, ಚಿತ್ರರಂಗದ ನಟ್  ನಟಿಯರು ಭಾಗವಹಿಸಿದ್ದರು.
’ಎಕ್ಸ್ ಕ್ಯೂಸ್ ಮಿ’ ನಟ ಸುನೀಲ್ ಇದೀಗ ‘ತುರ್ತು ನಿರ್ಗಮನ’ ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್‍ವುಡ್ ಗೆ ರೀ ಎಂಟ್ರಿ ಕೊಡಲು ಸಿದ್ದವಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.