’ಲೈಫ್ ಜೊತೆ ಒಂದ್ ಸೆಲ್ಫೀ’ ತಂಡದಿಂಡ ಅದ್ದೂರಿ ಆಡಿಯೋ ಲಾಂಚ್ ಗೆ ತಯಾರಿ
ನಿರ್ದೇಶಕ ದಿನಕರ ತೂಗುದೀಪ್ ತಮ್ಮ ’ಲೈಫ್ ಜೊತೆ ಒಂದ್ ಸೆಲ್ಫೀ’ ಚಿತ್ರದ ಆಡಿಯೋ ಬಿಡುಗಡೆಗೆ ಭಾರೀ ತಯಾರಿ ನಡೆಸಿದ್ದಾರೆ.

Published On :
ಬೆಂಗಳೂರು: ನಿರ್ದೇಶಕ ದಿನಕರ ತೂಗುದೀಪ್ ತಮ್ಮ ’ಲೈಫ್ ಜೊತೆ ಒಂದ್ ಸೆಲ್ಫೀ’ ಚಿತ್ರದ ಆಡಿಯೋ ಬಿಡುಗಡೆಗೆ ಭಾರೀ ತಯಾರಿ ನಡೆಸಿದ್ದಾರೆ. ಜೂನ್ 15ರಂದು ಈ ಕಾರ್ಯಕ್ರಮ ಆಯೋಜಿಸಲು ಮುಂದಾಗಿರುವ ಚಿತ್ರತಂಡ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ದರ್ಶನ್ ತೂಗುದೀಪ್ ಅವರುಗಳನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲು ತೀರ್ಮಾನಿಸಿದೆ.
ದಿನಕರ್ ಅವರ ಪತ್ನಿ ಮಾನಸ ಚಿತ್ರದ ಕಥೆ ತಯಾರಿಸಿದ್ದು ಇದು ಮೂವರು ಗೆಳೆಯರ ಜೀವನವನ್ನು ಒಳಗೊಂಡಿದೆ. ಚಿತ್ರದಲ್ಲಿ ಪ್ರೇಮ್, ಪ್ರಜ್ವಲ್ ದೇವರಾಜ್ ಹಾಗೂ ಹರಿಪ್ರಿಯಾ ಮುಖ್ಯ ತಾರಾಂಗಣದಲ್ಲಿದ್ದಾರೆ.
ಚಿತ್ರದ ಹಾಡುಗಳೆಲ್ಲ ಕೇವಲ ಕಮರ್ಷಿಯಲ್ ದೃಷ್ಟಿಕೋನವುಳ್ಳವಾಗಿ ಇಲ್ಲ, ಬದಲಿಗೆ ಚಿತ್ರದ ಕಥೆ, ಸನ್ನಿವೇಶಕ್ಕೆ ತಕ್ಕಂತೆ ಹಾಡಿನ ಸಂಯೋಜನೆ ನಡೆದಿದೆ ಎನ್ನುವ ನಿರ್ದೇಶಕ ದಿನಕರ್ "ಹರಿಕೃಷ್ಣ ಸಂಗೀತವಿರುವ ಈ ಆಲ್ಬಮ್ ನಲ್ಲಿ ಒಂದು ಪಾರ್ಟಿ ಹಾಡು, ಒಂದು ಭಾವನಾತ್ಮಕ ಗೀತೆ ಮತ್ತು ಎರಡು ವರ್ಣರಂಜಿತ, ವೈವಿದ್ಯಮಯ ಹಾಡುಗಳಿದೆ ಎಂದರು.
"ಈ ಚಿತ್ರಕ್ಕಾಗಿ ಗೀತರಚನೆಕಾರರಾದ ಕವಿರಾಜ್ ಇದೇ ಮೊದಲ ಬಾರಿಗೆ ಚಿತ್ರ ಶಿರ್ಷಿಕೆ ಗೀತೆಯನ್ನು ರಚಿಸಿದ್ದಾರೆ. ಈ ಹಾಡು ಲೈಫ್ ಜೊತೆ ಒಂದ್ ಸೆಲ್ಫೀ ಚಿತ್ರದ ಟೈಟಲ್ ಜತೆಗೆ ಪ್ರಾರಂಭವಾಗುತ್ತದೆ. ಇದಲ್ಲದೆ ಕವಿರಾಜ್ ನಮ್ಮ ಚಿತ್ರಕ್ಕಾಗಿ ಇನ್ನೆರಡು ಗೀತೆಗಳನ್ನು ಸಹ ಬರೆದು ಕೊಟ್ಟಿದ್ದಾರೆ. ಇನ್ನು ಯೋಗರಾಜ್ ಭಟ ಸಹ ಒಂದು ಸುಂದರ ಕವಿತೆಯನ್ನು ನೀಡಿದ್ದಾರೆ. ನಾಗೇಂದ್ರ ಪ್ರಸಾದ್ ಸಹ ಎರಡು ಕವಿತೆಗಳನ್ನು ಬರೆದಿದ್ದು ಇದರಲ್ಲಿ ಒಂದು ತಾಯಿ-ಮಗನ ಸಂಬಂಧದ ಭಾವನಾತ್ಮಕತೆಯನ್ನು ಸಾರುತ್ತದೆ" ದಿನಕರ್ ಹೇಳಿದ್ದಾರೆ.
ಲೈಫ್ ಜೊತೆ ಒಂದ್ ಸೆಲ್ಫೀ ಚಿತ್ರದ ಆಡಿಯೋ ಈ ವಾರ ಬಿಡುಗಡೆಯಾಗುತ್ತಿದ್ದು ಚಿತ್ರವು ಆಗಸ್ಟ್ ಮೊದಲ ವಾರ ತೆರೆಗೆ ಬರುವ ನಿರೀಕ್ಷೆ ಇದೆ. ನಿರಂಜನ್ ಬಾಬು ಛಾಯಾಗ್ರಹಣವಿರುವ ಈ ಚಿತ್ರವನ್ನು ಸಮೃದ್ದಿ ಕ್ರಿಯೇಷನ್ಸ್ ನಿರ್ಮಾಣ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Audio LaunchV Harikrishnaವಿ ಹರಿಕೃಷ್ಣDinakar ThoogudeepaLife Jothe Ondh Selfieಆಡಿಯೋ ಲಾಂಚ್ಲೈಫ್ ಜೊತೆ ಓಂದ್ ಸೆಲ್ಫೀದಿನಕರ ಥೂಗೂದೀಪ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


