ಬೀದಿ ನಾಯಿಗೆ ಬಂತು ಬಂಪರ್ ಬೆಲೆ: ರಜನಿಯ ಕಾಲಾ ಚಿತ್ರದಲ್ಲಿ ನಟಿಸಿದ ’ಮಣಿ'ಗೆ 2 ಕೋಟಿ ರು.!
Every dog has his own day ಎನ್ನುವ ಮಾತು ಇದೀಗ ನಿಜವಾಗಿದೆ ಎನಿಸುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ಜತೆ ’ಕಾಲ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಬೀದಿ ನಾಯಿಗೆ ಇಂದು 2 ಕೋಟಿ ರೂ. ಬೆಲೆ ಬಂದಿದೆ!

Published On :
ಚೆನ್ನೈ: Every dog has his own day ಎನ್ನುವ ಮಾತು ಇದೀಗ ನಿಜವಾಗಿದೆ ಎನಿಸುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ಜತೆ ’ಕಾಲ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಬೀದಿ ನಾಯಿಗೆ ಇಂದು 2 ಕೋಟಿ ರೂ. ಬೆಲೆ ಬಂದಿದೆ!
’ಮಣಿ’ ಹೆಸರಿನ ಈ ಬೀದಿ ನಾಯಿಗೆ ಅದರ ಮಾಲಿಕ ಸೈಮನ್ ವಿಶೇಷ ತರಬೇತಿ ನೀಡಿದ್ದ ಸಂಬಂಧ ವೀಡಿಯೋ ಇದೀಗ ಲಭ್ಯವಾಗಿದೆ. ಎಕ್ಸ್ ಪ್ರೆಸ್ ಈ ವೀಡಿಯೋವನ್ನು ಪ್ರಕಟಿಸಿದ್ದು ಇದರಲ್ಲಿ ಚಿತ್ರ ನಿರ್ದೇಶಕ ಪ.ರಂಜಿತ್ ಮಣಿಯನ್ನು ಈ ಪಾತ್ರಕ್ಕೆ ಅಂತಿಮ ಗೊಳಿಸುವ ಮುನ್ನ ಸುಮಾರು 30 ಬೀದಿನಾಯಿಗಳ ಆಡಿಷನ್ ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ.
"ಈ ನಾಯಿಯನ್ನು ಕಾಲಾ ಚಿತ್ರದ ಸೆಟ್ ನಲ್ಲಿ ಎಲ್ಲರೂ ’ಬಿಸ್ಕೆಟ್ ಮಣಿ’ ಎಂದೇ ಕರೆಯುತ್ತಿದ್ದರು. ಮಣಿ ತಲೈವ ರಜನಿಕಾಂತ್ ನೀಡುತ್ತಿದ್ದ ಬಿಸ್ಕೆಟ್ ಗಳಿಗೆ ಅದೆಷ್ಟು ಒಗ್ಗಿ ಹೋಗಿದ್ದ!" ಮಣಿಯ ತರಬೇತುದಾರ ಸೈಮನ್ ಹೇಳಿದ್ದಾರೆ.
ಸೈಮನ್ ಗೆ ಮಣಿಯನ್ನು ಮಾರಾಟ ಮಾಡುವುದಕ್ಕೆ ಇಷ್ಟವಿಲ್ಲ "ಮಣಿ ಬೀದಿಯಲ್ಲಿ ಸಿಕ್ಕಾಗ ನಾಯಿ ಅವರನ್ನು ಕಂಡು ಹೆದರಿತ್ತು, ಕಚ್ಚಲು ಸಹ ಮುಂದಾಗಿತ್ತು. ಆದರೆ ಈಗ ನನಗೆ ಒಳ್ಳೆಯ ಸ್ನೇಹಿತನಾಗಿದ್ದಾನೆ. ಮಣಿ ನನ್ನ ಕುಟುಂಬ ಸದಸ್ಯನಂತಿದ್ದಾನೆ.ಹಣ ನನಗೆ ಮುಖ್ಯವಲ್ಲ. ನಾನು ಬೆಳಿಗ್ಗೆ ಎದ್ದ ತಕ್ಷಣ ಮಣಿಯ ಮುಖ ನೊಡುತ್ತೇನೆ. ಹೀಗಿರಲು ನಾನು ಅವನನ್ನು ಬಿಟ್ಟಿರುವುದಾದರೂ ಹೇಗೆ?" ಸೈಮನ್ ಹೇಳಿದ್ದಾರೆ.
ರಜನಿಯ ಕಾಲ ಮಣಿಯ ಜೀವನದಲ್ಲಿ ಪ್ರಮುಖ ತಿರುವನ್ನು ತಂದಿದೆ.
ಕಬಾಲಿ ಬಳಿಕ ರಜನಿಕಾಂತ್ ಅಭಿನಯದ ಮಹತ್ವದ ಚಿತ್ರ ಕಾಲ. ಜೂನ್ 7ರಂದು ದೇಶದಾದ್ಯಂತ ಈ ಚಿತ್ರ ತೆರೆಕಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


