ಸಿನಿಮಾ ಸುದ್ದಿ

ಅರಮನೆಗಳ ನಗರಿ ಮೈಸೂರಿನಲ್ಲಿ ಸೌತ್ ಇಂಡಿಯನ್ 'ಕ್ವೀನ್ಸ್' ದರ್ಬಾರ್!

ಸಾಂಸ್ಕೃತಿಕ ನಗರಿ ಮೈಸೂರು ಇತ್ತೀಚೆಗೆ ನಾಯಕಿಯರ ಅಚ್ಚು ಮೆಚ್ಚಿನ ಸ್ಥಳವಾಗಿದೆ. ದಕ್ಷಿಣ ಭಾರತದ ಪ್ರಮುಖ ನಾಯಕಿಯರುಗಳಾದ...

ಅರಮನೆಗಳ ನಗರಿ ಮೈಸೂರಿನಲ್ಲಿ ಸೌತ್ ಇಂಡಿಯನ್ 'ಕ್ವೀನ್ಸ್' ದರ್ಬಾರ್!
ಕ್ವೀನ್ಸ್ ಚಿತ್ರದ ನಟಿಯರು
Published On :
ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರು ಇತ್ತೀಚೆಗೆ ನಾಯಕಿಯರ  ಅಚ್ಚು ಮೆಚ್ಚಿನ ಸ್ಥಳವಾಗಿದೆ. ದಕ್ಷಿಣ ಭಾರತದ ಪ್ರಮುಖ ನಾಯಕಿಯರುಗಳಾದ, ತಮನ್ನಾ ಭಾಟಿಯಾ, ಕಾಜಲ್ ಅಗರ್ ವಾಲ್,ಪಾರುಲ್ ಯಾದವ್ ಮೈಸೂರಿನಲ್ಲಿ ಬೀಡುಬಿಟ್ಟಿದ್ದಾರೆ.
ರಮೇಶ್ ಅರವಿಂದ್ ನಿರ್ದೇಶನದ ಕ್ವೀನ್ ಚಿತ್ರದ ಕನ್ನಡ ವರ್ಸನ್ ನಲ್ಲಿ ಪಾರುಲ್ ಯಾದವ್, ತಮಿಳಿನಲ್ಲಿ ಕಾಜಲ್ ಅಗರ್ ವಾಲ್ ಹಾಗೂ ತೆಲುಗಿನಲ್ಲಿ ತಮನ್ನಾ ಭಾಟಿಯಾ ಅಭಿನಯಿಸುತ್ತಿದ್ದಾರೆ, ಕನ್ನಡದಲ್ಲಿ ಬಟರ್ ಫ್ಲೈ, ತಮಿಳಿನಲ್ಲಿ ಪ್ಯಾರಿಸ್ ಪ್ಯಾರಿಸ್ ಟೈಟಲ್ ಇಡಲಾಗಿದೆ.ಮಲಯಾಳಂ ಭಾಷೆಯಲ್ಲಿ ಮಂಜಿಮಾ ಮೋಹನ್ ಅಭಿನಯಿಸುತ್ತಿದ್ದಾರೆ.
ಸದ್ಯ ಮೈಸೂರಿನಲ್ಲಿ ಶೂಟಿಂಗ್ ಮಾಡುತ್ತಿರುವ ರಮೇಶ್ ಅರವಿಂದ್  ವಿಮಾನ ನಿಲ್ದಾಣವನ್ನು ಕಲರ್ ಫುಲ್ ಆಗಿಸಿದ್ದಾರೆ. ಒಂದು ಕಡೆ ಪಾರುಲ್ ಯಾದವ್ ಪಾತ್ರದ ಶೂಟಿಂಗ್ ಮತ್ತೊಂದೆಡೆ ಕಾಜಲ್ ಅಗರ್ ವಾಲ್ ಪಾತ್ರದ ಶೂಟಿಂಗ್ ನಡೆಯುತ್ತಿದೆ, ತಮನ್ನಾ ಭಾಟಿಯಾ ಅವರ ಭಾಗದ ಚಿತ್ರವನ್ನು ಮತ್ತೊಬ್ಬ ನಿರ್ದೇಶಕರು ಚಿತ್ರೀಕರಿಸುತ್ತಿದ್ದಾರೆ. ಸ್ಥಳದಲ್ಲಿ ಬಹುದೊಡ್ಡ ಸೆಟ್ ನಿರ್ಮಾಣ ಮಾಡಲಾಗಿದ್ದು, ಬೇರೆ ಬೇರೆ ನಾಯಕಿಯರು ನಟಿಸಿರುವ ಒಂದೇ ಕಥೆಯ ನಾಲ್ಕು ಭಾಷೆಯ ಚಿತ್ರೀಕರಣ ನಡೆಯುತ್ತಿದೆ ಎಂದು ರಮೇಶ್ ಹೇಳಿದ್ದಾರೆ.
ಕಡಿಮೆ ಸಂಚಾರ ದಟ್ಟಣೆ ಇರುವ ಮೈಸೂರು ಇತ್ತೀಚೆಗೆ ನಿರ್ದೇಶಕರುಗಳ ಬಹು ಮೆಚ್ಚಿನ ಶೂಟಿಂಗ್ ಸ್ಪಾಟ್ ಆಗಿದೆ.  ಹಿತಕರ ವಾತಾವರಣ, ಪಾರಂಪರಿಕ ಕಟ್ಟಡಗಳು ಮೈಸೂರನ್ನು ಶೂಟಿಂಗ್ ಹಬ್ ಆಗಿ ಪರಿವರ್ತಿಸಿವೆ ಎಂದು ರಮೇಶ್ ಅಭಿಪ್ರಾಯ ಪಟ್ಟಿದ್ದಾರೆ. 
ಶಾಟ್ ಗಳ ನಡುವಿನ ಬ್ರೇಕ್ ನಲ್ಲಿ ಸೆಲ್ಫಿ ಕಾರ್ಯಕ್ರಮ ಕೂಡ ನಡೆಯುತ್ತಿದೆ. ಪರಿಸ್ಥಿತಿ ಕೈ ಮೀರದಂತೆ ತಡೆಯಲು ನಟಿಯರ ನಡುವೆ ಬೌನ್ಸರ್ ಗಳಿದ್ದು ಅವರನ್ನು ಸುತ್ತುವರಿದಿರುತ್ತಾರೆ ಎಂದು ತಿಳಿಸಿದ್ದಾರೆ.
ಈ ಭಾಗದ ಶೂಟಿಂಗ್ ನಂತರ ರಮೇಶ್ ತಮ್ಮ ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋಗಾಗಿ ಕೆಲವು ಎಪಿಸೋಡ್ ಚಿತ್ರೀಕರಿಸಲಿದ್ದಾರೆ, ನಂತರ ಕನ್ನಡ ಮತ್ತು ತಮಿಳು ಭಾಗ ಶೂಟಿಂಗ್ ಗಾಗಿ ಪ್ಯಾರಿಸ್ ಗೆ ತೆರಳಲಿದ್ದಾರೆ, ಜುಲೈ 5 ರೊಳಗೆ ಸಿನಿಮಾದ ಸಂಪೂರ್ಣ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.