ಸುದೀಪ್'ರ ಕೋಟಿಗೊಬ್ಬ 3 ಚಿತ್ರದಲ್ಲಿ 'ಪ್ರೇಮಂ' ನಟಿ ಮಡೋನಾ ಸೆಬಾಸ್ಟಿಯನ್!
ಸ್ಯಾಂಡಲ್ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ಮೂಲಕ ಮಲಯಾಳಂನ ಸೂಪರ್ ಹಿಟ್ ಚಿತ್ರ ಪ್ರೇಮಂ ಚಿತ್ರದ ನಟಿ ಮಡೋನಾ...

Published On :
ಸ್ಯಾಂಡಲ್ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರದ ಮೂಲಕ ಮಲಯಾಳಂನ ಸೂಪರ್ ಹಿಟ್ ಚಿತ್ರ ಪ್ರೇಮಂ ಚಿತ್ರದ ನಟಿ ಮಡೋನಾ ಸೆಬಾಸ್ಟಿಯನ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಸದ್ಯ ಕಿಚ್ಚ ಸುದೀಪ್ ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ದ ವಿಲನ್ ಚಿತ್ರದ ನಂತರ ಇದೀಗ ಅಂಬಿ ನಿಂಗ್ ವಯಸ್ಸಾಯೋ ಚಿತ್ರದ ಶೂಟಿಂಗ್ ಮುಗಿಸಿದ್ದು ಪೈಲ್ವಾನ್ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಇದೀಗ ಕೋಟಿಗೊಬ್ಬ 3 ಚಿತ್ರದ ಕೆಲಸಗಳಲ್ಲಿ ಸುದೀಪ್ ತೊಡಗಿಕೊಂಡಿದ್ದಾರೆ. ಇದೀಗ ಚಿತ್ರದ ನಾಯಕಿ ಆಯ್ಕೆ ಅಂತಿಮಗೊಂಡಿದ್ದು ಮಲಯಾಳಂ ನಟಿ ಮಡೋನಾ ಸೆಬಾಸ್ಟಿಯನ್ ಸುದೀಪ್ ಗೆ ಜೋಡಿಯಾಗಿ ನಟಿಸಲಿದ್ದಾರೆ.
ವಿಶೇಷವೆನೆಂದರೆ ಸುದೀಪ್ ನಟನೆಯ ಇತ್ತೀಚಿನ ಮೂರು ಚಿತ್ರಗಳಲ್ಲಿ ಹೊಸ ನಾಯಕಿಯರು ಕನ್ನಡಕ್ಕೆ ಪರಿಚಯವಾಗಿದ್ದಾರೆ. ಹೆಬ್ಬುಲಿ ಮೂಲಕ ಅಮಲಾ ಪೌಲ್, ಪೈಲ್ವಾನ್ ನಲ್ಲಿ ಅಕಾಂಕ್ಷಾ ಸಿಂಗ್ ಹಾಗೂ ಇದೀಗ ಕೋಟಿಗೊಬ್ಬ ಚಿತ್ರದ ಮೂಲಕ ಮಡೋನಾ ಸೆಬಾಸ್ಟಿಯನ್ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಕೋಟಿಗೊಬ್ಬ 3 ಚಿತ್ರವನ್ನು ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿದ್ದು ಚಿತ್ರವನ್ನು ಶಿವಕಾರ್ತಿಕ್ ಎಂಬುವರು ನಿರ್ದೇಶನ ಮಾಡುತ್ತಿದ್ದದಾರೆ. ಈ ಚಿತ್ರಕ್ಕೆ ಸುದೀಪ್ ಕಥೆ ಬರೆದಿರುವುದು ವಿಶೇಷ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


