ತಮಿಳುನಾಡಿನಲ್ಲಿ ನಾಗರಹಾವು ಚಿತ್ರ ಸಮಸ್ಯೆ ಎದುರಿಸಿದ್ದಾಗ ಪ್ರಕಾಶ್ ರೈ ಎಲ್ಲಿದ್ದರು?: ಸಾರಾ ಗೋವಿಂದು ಆಕ್ರೋಶ
ಕಾವೇರಿ ವಿವಾದ ಸಂಬಂಧ ಕಾಳಾ ಚಿತ್ರ ಬಿಡುಗಡೆಗೆ ನಿಷೇಧ ಹೇರುವುದು ಸರಿಯಲ್ಲ ಎಂದು ಹೇಳಿದ್ದ ನಟ ಪ್ರಕಾಶ್ ರೈ ಟ್ವೀಟ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಖಾರವಾಗಿ ತಿರುಗೇಟು ನೀಡಿದ್ದಾರೆ.

Published On :
ಬೆಂಗಳೂರು: ಕಾವೇರಿ ವಿವಾದ ಸಂಬಂಧ ಕಾಳಾ ಚಿತ್ರ ಬಿಡುಗಡೆಗೆ ನಿಷೇಧ ಹೇರುವುದು ಸರಿಯಲ್ಲ ಎಂದು ಹೇಳಿದ್ದ ನಟ ಪ್ರಕಾಶ್ ರೈ ಟ್ವೀಟ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಖಾರವಾಗಿ ತಿರುಗೇಟು ನೀಡಿದ್ದಾರೆ.
ನಟ ಪ್ರಕಾಶ್ ರೈ ಟ್ವೀಟ್ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, 2016ರಲ್ಲಿ ಇದೇ ಕಾವೇರಿ ವಿವಾದ ಉಂಟಾದಾಗ ತಮಿಳುನಾಡಿನಲ್ಲಿ ನಾಗರಹಾವು ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತವಾಗಿತ್ತು. ಆಗ ಪ್ರಕಾಶ್ ರೈ ಎಲ್ಲಿ ಹೋಗಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕಾಶ್ ರೈ ಆಗಲಿ, ರಜನಿಕಾಂತ್ ಆಗಲಿ ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಹೇಳಿಕೆ ನೀಡುವಾಗ ಯೋಚಿಸಿ ಮಾತನಾಡಬೇಕು. ರಜನಿಕಾಂತ್ ಪ್ರೀತಿಯಿಂದ ಮಾತನಾಡಬೇಕಿತ್ತು. ಆಗ ಕನ್ನಡಿಗರು ಅದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಕಾವೇರಿ ನದಿ ನೀರು ಎರಡೂ ರಾಜ್ಯದವರಿಗೆ ಅನಿವಾರ್ಯ. ಹಾಗಾಗಿ ಪ್ರಕಾಶ್ ರೈ ಮತ್ತು ರಜನಿಕಾಂತ್ ಇಬ್ಬರೂ ಸೌಜನ್ಯದಿಂದ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ಹೇಳಬೇಕಿತ್ತು ಎಂದು ಸಾ.ರಾ. ಗೋವಿಂದು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ನಿನ್ನೆಯಷ್ಟೇ ರಜನಿಕಾಂತ್ ಅಭಿನಯದ ಕಾಳಾ ಚಿತ್ರಕ್ಕೆ ತಡೆಯೊಡ್ಡುವುದು ಸರಿಯಲ್ಲ ಎಂದು ಹೇಳಿದ್ದ ನಟ ಪ್ರಕಾಶ್ ರೈ, ಕಾವೇರಿ ವಿವಾದಕ್ಕೂ ಕಾಳಾ ಚಿತ್ರಕ್ಕೂ ಏನು ಸಂಬಂಧ.. ರಜನಿಕಾಂತ್ ಒಬ್ಬರ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಕಾಳಾ ಚಿತ್ರದ ಬಿಡುಗಡೆಗೆ ತಡೆಯೊಡ್ಡುವುದು ಎಷ್ಟು ಸರಿ ಎಂದು ಪ್ರಕಾಶ್ ರೈ ಸುಧೀರ್ಘ ಟ್ವೀಟ್ ಮಾಡಿ ಪ್ರಶ್ನಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sandalwoodಸ್ಯಾಂಡಲ್ ವುಡ್ಪ್ರಕಾಶ್ ರೈCauveryಕಾವೇರಿಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿKarnataka film chambersara Govinduಸಾರಾ ಗೋವಿಂದುKaala RowPraksh Raiಕಾಳಾ ವಿವಾದ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


