ಕಿರುತೆರೆ ಪಯಣ ಮುಂದುವರಿಸಿದ ಗುಳಿಕೆನ್ನೆ ಬೆಡಗಿ: ಮಜಾ ಭಾರತದಲ್ಲಿ ರಚಿತಾ ರಾಮ್
ಕಿರುತೆರೆಯಿಂದ ಬೆಳ್ಳಿ ಪರದೆಗೆ ಕಾಲಿರಿಸಿದ ರಚಿತಾ ರಾಮ್ ಸ್ಯಾಂಡಲ್ ವುಡ್ ನಲ್ಲಿ ಅತ್ಯಂತ ಯಶಸ್ಸು ಕಂಡ ನಟಿ. ...

Published On :
ಬೆಂಗಳೂರು: ಹಲವು ಸಿನಿಮಾ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಿರುವ ನಟಿ ರಚಿತಾ ರಾಮ್, ಕಿರುತೆರೆಯಲ್ಲಿನ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ, ಕಿರುತೆರೆಯಿಂದ ಬೆಳ್ಳಿ ಪರದೆಗೆ ಕಾಲಿರಿಸಿದ ರಚಿತಾ ರಾಮ್ ಸ್ಯಾಂಡಲ್ ವುಡ್ ನಲ್ಲಿ ಅತ್ಯಂತ ಯಶಸ್ಸು ಕಂಡ ನಟಿ. ನಟಿ ಸೃಜನ್ ಲೋಕೇಶ್ ಜೊತೆ ಕಾಮಿಡಿ ಟಾಕೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಚಿತಾ ಕಿರುತೆರೆಯಲ್ಲಿ ತಮ್ಮ ನಗುವನ್ನು ಮುಂದುವರಿಸಲಿದ್ದಾರೆ.
ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರಸಾರವಾಗುವ ಮಜಾ ಭಾರತ ಕಾರ್ಯಕ್ರಮದ ಜಡ್ಜ್ ಆಗಿ ಕೆಲಸ ಮಾಡಲಿದ್ದಾರೆ. ಈ ಮೊದಲು ನಡೆದಿದ್ದ ಮಜಾ ಭಾರತ ಆವೃತ್ತಿಯಲ್ಲಿ ಎಸ್. ನಾರಾಯಣ, ಶೃತಿ ಜಡ್ಜ್ ಆಗಿದ್ದರು, ಆದರೆ ಈ ವರ್ಷ ಬುಲ್ ಬುಲ್ ಹಿರೋಯಿನ್ ಕಾಲಿಟ್ಟಿದ್ದಾಳೆ, ರಚಿತಾ ಜತೆ ಸಂಗೀತ ನಿರ್ದೇಶಕ ಗುರು ಕಿರಣ್ ಭಾಗವಹಿಸಲಿದ್ದಾರೆ, ಬಿಗ್ ಬಾಸ್ ಖ್ಯಾತಿಯ ನಿರಂಜನ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.
ಸೀತಾರಾಮ ಕಲ್ಯಾಣ, ನಟ ಸಾರ್ವಭೌಮ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾರೆ, ಕಾಮಿಡಿ ಪ್ರಾಜೆಕ್ಟ್ ಗಳಲ್ಲಿ ಭಾಗವಹಿಸಲು ರಚಿತಾಗೆ ಇಷ್ಟವಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


