ಸಿನಿಮಾ ಸುದ್ದಿ

'ದಿ ವಿಲ್ಲನ್' ಕೊನೆಯ ಹಾಡಿನ ಶೂಟಿಂಗ್ ಗಾಗಿ ಬೆಂಗಳೂರಿಗೆ ಆ್ಯಮಿ ಜಾಕ್ಸನ್!

ಬಹು ದಿನಗಳಿಂದ ಪೆಂಡಿಂಗ್ ಇಟ್ಟಿದ್ದ ಹಾಡಿನ ಶೂಟಿಂಗ್ ಗಾಗಿ ನಟಿ ಆ್ಯಮಿ ಜಾಕ್ಸನ್ ಬೆಂಗಳೂರಿಗೆ ಆಗಮಿಸಿದ್ದಾರೆ.

'ದಿ ವಿಲ್ಲನ್' ಕೊನೆಯ ಹಾಡಿನ ಶೂಟಿಂಗ್ ಗಾಗಿ  ಬೆಂಗಳೂರಿಗೆ ಆ್ಯಮಿ ಜಾಕ್ಸನ್!
ಆ್ಯಮಿ ಜಾಕ್ಸನ್
Published On :
ಬೆಂಗಳೂರು: ನಿರ್ದೇಶಕ ಪ್ರೇಮ್ ಕೊನೆಗು ನಿಟ್ಟುಸಿರು ಬಿಟ್ಟಿದ್ದಾರೆ, ಕಾರಣ ಏನು ಗೊತ್ತೆ, ಬಹು ದಿನಗಳಿಂದ ಪೆಂಡಿಂಗ್ ಇಟ್ಟಿದ್ದ ಹಾಡಿನ ಶೂಟಿಂಗ್ ಗಾಗಿ ನಟಿ  ಆ್ಯಮಿ ಜಾಕ್ಸನ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಈ ಹಾಡಿನೊಂದಿಗೆ ವಿಲ್ಲನ್ ಸಿನಿಮಾ ಶೂಟಿಂಗ್ ಕೊನೆಗೊಳ್ಳುತ್ತದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡಿಗೆ ಸುದೀಪ್ ಮತ್ತು ಆ್ಯಮಿ ಜಾಕ್ಸನ್ ಡ್ಯಾನ್ಸ್ ಮಾಡಲಿದ್ದು ನಾಲ್ಕು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.
ಈ ಹಾಡಿನ ಶೂಟಿಂಗ್ ಗಗಿ ಕಾಯಲಾಗಿತ್ತು, ಇದು ಮುಗಿದ ನಂತರಸಿನಿಮಾದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭಿಸಿ, ಶೀಘ್ರದಲ್ಲೆ ನಿರ್ದೇಶಕ ಪ್ರೇಮ್ ಕುಂಬಳಕಾಯಿ ಒಡೆಯಲಿದ್ದಾರೆ, ಇದು ಸಾಮಾನ್ಯವಾದ ಹಾಡಲ್ಲ ಕಂಪ್ಯೂಟರ್ ಗ್ರಾಫಿಕ್ ಬಳಸಬೇಕಾಗುತ್ತದೆ ಎಂದು ಪ್ರೇಮ್ ಹೇಳಿದ್ದಾರೆ.
ಸಮಯ ಉಳಿತಾಯ ಮಾಡುವ ಸಲುವಾಗಿ ಗ್ರಾಫಿಕ್ಸ್ ತಂತ್ರಜ್ಞರನ್ನು ಸೆಟ್ ಗೆ ಕರೆತರಲಾಗಿದೆ,. ಐದು ಕಂಪನಿಗಳ ಅನುಭವಿ ತಜ್ಞರು,  ಭಾಗವಹಿಸಲಿದ್ದು, ಕೆಲಸ ಬೇಗನೆ ಮುಗಿಸುವ ಸಲುವಾಗಿ ತಂಡ ಸದಸ್ಯರು, ಕೆಲಸ ಹಂಚಿಕೊಂಡು ಮಾಡುತ್ತಿದ್ದಾರೆ,  ಆಗಸ್ಟ್ 24ಕ್ಕೆ ಸಿನಿಮಾ  ರಿಲೀಸ್ ಮಾಡಲು ನಿರ್ದರಿಸಿದ್ದು, ಡೆಡ್ ಲೈನ್ ತಲುಪಲು ಎಲ್ಲಾ ರೀತಿಯ ಪ್ರಯತ್ನ ಪಡುತ್ತಿರುವುದಾಗಿ ತಿಳಿಸಿದ್ದಾರೆ, ಈ ತಿಂಗಳ ಅಂತ್ಯದಲ್ಲಿ ನಾರ್ಮಲ್ ಕಾಪಿಯನ್ನು ಸೆನ್ಸಾರ್ ಬೋರ್ಡ್ ಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.