ಸುಮಲತಾ ನನ್ನ ನೆಚ್ಚಿನ ಆನ್ ಸ್ಕ್ರೀನ್ ಅಮ್ಮ: ಹರಿಪ್ರಿಯಾ
ಜೆ ಶಂಕರ್ ನಿರ್ದೇಶನದ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ನಟಿ ಹರಿಪ್ರಿಯಾ ತನಿಖಾಧಿಕಾರಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಹರಿಪ್ರಿಯಾಗೆ ತಾಯಿಯಾಗಿ ಹಿರಿಯ ನಟಿ ಸುಮಲತ ನಟಿಸುತ್ತಿದ್ದಾರೆ...

Published On :
ಜೆ ಶಂಕರ್ ನಿರ್ದೇಶನದ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ನಟಿ ಹರಿಪ್ರಿಯಾ ತನಿಖಾಧಿಕಾರಿ ಪಾತ್ರದಲ್ಲಿ ಅಭಿನಯಿಸುತ್ತಿದ್ದು ಹರಿಪ್ರಿಯಾಗೆ ತಾಯಿಯಾಗಿ ಹಿರಿಯ ನಟಿ ಸುಮಲತ ನಟಿಸುತ್ತಿದ್ದಾರೆ.
ಚಿತ್ರದ ಕುರಿತಂತೆ ಮಾತನಾಡಿರುವ ಹರಿಪ್ರಿಯಾ ಅವರು ಸುಮಲತ ಅವರೊಂದಿಗೆ ನಟಿಸುವುದಕ್ಕೆ ತುಂಬಾ ಖುಷಿಯಾಗಿದೆ. ಅವರ ಜೊತೆ ಕೆಲಸ ಮಾಡಲು ತುಂಬಾ ಹಿತಕರವಾಗಿತ್ತು. ಸುಮಲತ ಅವರು ನನ್ನ ನೆಚ್ಚಿನ ಆನ್ ಸ್ಕ್ರೀನ್ ಅಮ್ಮ ಎಂದು ಹೇಳಿದ್ದಾರೆ.
ಕಥೆ ಕೇಳಬೇಕಾದರೆ ನನ್ನ ತಾಯಿಯ ಪಾತ್ರವನ್ನು ಸುಮಲತ ಅವರು ಮಾಡಿದರೆ ಚನ್ನಾಗಿರುತ್ತೆ ಅಂದುಕೊಂಡಿದ್ದೆ. ಅದೃಷ್ಟವಶಾತ್ ಸುಮಲತ ಅವರು ಈ ಪಾತ್ರವನ್ನು ಮಾಡಲು ಒಪ್ಪಕೊಂಡಿದ್ದು ನಿಜಕ್ಕೂ ಸಂತೋಷದ ವಿಷಯವಾಗಿತ್ತು. ಶೂಟಿಂಗ್ ಬಿಡುವಿನಲ್ಲಿ ಅವರು ಎಲ್ಲರ ಜೊತೆ ಬೆರೆಯುವುದು, ಅವರ ನಡೆ ನುಡಿ ನನಗೆ ದೊಡ್ಡ ಸ್ಫೂರ್ತಿ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


