ವಿಷ್ಣುವರ್ಧನ್ ಅಭಿನಯದ 'ನಾಗರಹಾವು' ಜುಲೈ 20ಕ್ಕೆ ಮರು ಬಿಡುಗಡೆ
ಡಾ. ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ ನಾಗರಹಾವು ಸಿನಿಮಾ ಜುಲೈ 20ರಂದು ಮರು ...

Published On :
ಬೆಂಗಳೂರು: ಡಾ. ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ ನಾಗರಹಾವು ಸಿನಿಮಾ ಜುಲೈ 20ರಂದು ಮರು ಬಿಡುಗಡೆಯಾಗಲಿದೆ.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರವನ್ನು ರವಿಚಂದ್ರನ್ ತಂದೆ ಎನ್. ವೀರಾಸ್ವಾಮಿ ನಿರ್ಮಾಣ ಮಾಡಿದ್ದರು. ನಾಗರಹಾವು ಸಿನಿಮಾ ಈಗ ಸರೌಂಡ್ ಸೌಂಡ್ 7.1 ಹಾಗೂ ಡಿಜಿಟಲ್ ಇಮೇಜಿಂಗ್ ಜೊತೆಗೆ 2ಕೆ ರೆಸ್ಲ್ಯೂಷನ್ನಲ್ಲಿ ಮರುನಿರ್ಮಾಣಗೊಂಡಿದ್ದು, ವಿಷ್ಣು ಅಭಿಮಾನಿಗಳಿಗೆ ಮತ್ತೆ ರಾಮಾಚಾರಿಯನ್ನ‘ ಹೊಸ ರೂಪದಲ್ಲಿ ತೋರಿಸಲಾಗುತ್ತಿದೆ.
1973ರಲ್ಲಿ ಈ ಸಿನಿಮಾ ನಿರ್ಮಾಣವಾಗಿತ್ತು ಆರತಿ, ಕೆ.ಎಸ್ ಅಶ್ವತ್, ಮತ್ತಿತರರು ಸಿನಿಮಾದಲ್ಲಿ ನಟಿಸಿದ್ದರು ವಿಜಯ್ ಭಾಸ್ಕರ್ ಸಂಗೀತ್ ನಿರ್ದೇಶಿಸಿದ್ದು, ಚಿಟ್ಟಿಬಾಬು ಸಿನಿಮಾಟೋಗ್ರಾಫ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Dr Vishnuvardhanಮರು ಬಿಡುಗಡೆPuttanna Kanagalಪುಟ್ಟಣ್ಣ ಕಣಗಾಲ್ನಾಗರಹಾವುNaagarahavuRe releseಡಾ. ವಿಷ್ಣುವರ್ದನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


