ಚಿತ್ರರಂಗಕ್ಕೆ ಆದಿತ್ಯ ಶಶಿಕುಮಾರ್ ಎಂಟ್ರಿ, ತಂದೆಯಂತೆ ಮಿಂಚ್ತಾರಾ ಆದಿತ್ಯ!
ಸ್ಯಾಂಡಲ್ವುಡ್ ನ ಸ್ಟಾರ್ ನಟರಾದ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ...

Published On :
ಸ್ಯಾಂಡಲ್ವುಡ್ ನ ಸ್ಟಾರ್ ನಟರಾದ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
90ರ ದಶಕದಲ್ಲಿ ಯಶಸ್ವಿಯ ಉತ್ತುಂಗದಲ್ಲಿದ್ದ ಶಶಿಕುಮಾರ್ ಕನ್ನಡ, ತಮಿಳು ಮತ್ತು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದು ಸೈ ಎನಿಸಿಕೊಂಡಿದ್ದರು. ಇದೀಗ ಅವರ ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದು ತಂದೆಯಂತೆ ಆದಿತ್ಯ ಸ್ಯಾಂಡಲ್ವುಡ್ ನಲ್ಲಿ ತಮ್ಮ ಮಿಂಚು ಹರಿಸುತ್ತಾರೆ ಕಾದು ನೋಡಬೇಕು.
23 ವರ್ಷದ ಆದಿತ್ಯ ಕಳೆದ ಮೂರು ತಿಂಗಳಿನಿಂದ ಫೈಟ್, ಡ್ಯಾನ್ಸ್ ಮತ್ತು ನಟನೆಯ ತರಬೇತಿ ಪಡೆಯುತ್ತಿದ್ದಾರೆ. ಇನ್ನು ನವ ನಿರ್ದೇಶಕ ಸಿದ್ದಾರ್ಥ್ ಮರದೇಪ ಎಂಬುವರು ಆದಿತ್ಯರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದು ಇದು ಅವರ ಮೊದಲ ಚಿತ್ರವಾಗಿದೆ.
ಜೂಲೈ ಎರಡನೇ ವಾರದಲ್ಲಿ ಚಿತ್ರದ ಮುಹೂರ್ತ ನಡೆಯಲಿದ್ದು ಪ್ರೀ-ಪ್ರೊಡೆಕ್ಷನ್ ಕೆಲಸಗಳು ಭರದಿಂದ ಸಾಗಿದೆ. ಇದೇ ವಾರದಲ್ಲಿ ಫೋಟೋ ಶೂಟ್ ಮಾಡಲಿದ್ದು ನಂತರ ಚಿತ್ರದ ಶೀರ್ಷಿಕೆ, ತಂತ್ರಜ್ಞರು ಮತ್ತು ಚಿತ್ರತಂಡವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ.
ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅಪೂರ್ವ ಎಂಬುವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಆದಿತ್ಯಗೆ ಜೋಡಿಯಾಗಿ ಅಪೂರ್ವ ನಟಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sandalwoodapoorvaಅಪೂರ್ವಸ್ಯಾಂಡಲ್ವುಡ್Shashikumarಶಶಿಕುಮಾರ್Adityaa ShashikumarSiddharth Maradeppaaಆದಿತ್ಯ ಶಶಿಕುಮಾರ್ಸಿದ್ದಾರ್ಥ್ ಮರಡೆಪ್ಪ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


