ಸಿನಿಮಾ ಸುದ್ದಿ

ಯೋಗರಾಜ್ ಭಟ್ 'ಪಂಚತಂತ್ರ'ಕ್ಕೆ ವಿಹಾನ್, ಸೋನಾಲ್ ಹಾಗೂ ಅಕ್ಷರಾ ಆಯ್ಕೆ?

ಕನ್ನಡದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾದ ಯೋಗರಾಜ್ ಭಟ್ ನಿರ್ದೇಶನದ ಮುಂದಿನ ಚಿತ್ರಕ್ಕೆ ನಾಯಕ, ನಾಯಕಿಯರ ಆಯ್ಕೆ ನಡೆದಿದೆ.

ಯೋಗರಾಜ್ ಭಟ್ 'ಪಂಚತಂತ್ರ'ಕ್ಕೆ ವಿಹಾನ್, ಸೋನಾಲ್ ಹಾಗೂ ಅಕ್ಷರಾ ಆಯ್ಕೆ?
ಅಕ್ಷರಾ ಗೌಡ
Published On :
ಬೆಂಗಳೂರು: ಕನ್ನಡದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾದ ಯೋಗರಾಜ್ ಭಟ್ ನಿರ್ದೇಶನದ ಮುಂದಿನ ಚಿತ್ರಕ್ಕೆ ನಾಯಕ, ನಾಯಕಿಯರ ಆಯ್ಕೆ ನಡೆದಿದೆ. ಈ ನಡುವೆ ರೊಮ್ಯಾಂಟಿಕ್, ಕಾಮಿಡಿ ಚಿತ್ರಕಥೆ ಹೊಂದಿರುವ ಚಿತ್ರದಲ್ಲಿ ವಿಹಾನ್ ಗೌಡ  ನಾಯಕನಾಗಿ ನಟಿಸುತ್ತಿದ್ದು ಸೋನಲ್ ಮಾಂತೆರೋ ಮತ್ತು ಅಕ್ಷರಾ ಗೌಡ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿದೆ
Story image
"ಪ್ರತಿಯೊಬ್ಬ ನಟನೂ ತಮ್ಮ ಪಾತ್ರಗಳ ಕಾಸ್ಟ್ಯೂಮ್ ಮತ್ತು ಮೇಕಪ್ ಗೆ ಸರಿಯಾಗಿ ಹೊಂದುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಪರೀಕ್ಷಿಸುವುದರ ಮೂಲಕ ಚಿತ್ರೀಕರಣಕ್ಕೆ ತೊಡಗುವ ಮುನ್ನ ತೆರೆ ಮೇಲೆ ಪಾತ್ರಗಳು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ತಿಳಿಯಲು ಇದು ನಮಗೆ ಸಹಕಾರಿಯಾಗುತ್ತದೆ. ಬೇರೆಲ್ಲಾ ಚಿತ್ರಗಳಂತೆ ಕೇವಲ ನಾಯಕ, ನಾಯಕಿ ಪಾತ್ರಕ್ಕೆ ಮಾತ್ರವೇ ನಾವು ಈ ಪರೀಕ್ಷೆ ನಡೆಸದೆ ಚಿತ್ರದ ಎಲ್ಲಾ ಪಾತ್ರಗಳಿಗೆ ಸಹ ನಡೆಸುವವರಿದ್ದೇವೆ." ಚಿತ್ರ ನಿರ್ಮಾಣ ತಂಡದದ ಸದಸ್ಯರೊಬ್ಬರು ಹೇಳಿದ್ದಾರೆ.
Story image
ಕಂಠೀರವ ಸ್ಟುಡಿಯೊದಲ್ಲಿ ದೊಡ್ಡ ಸೆಟ್ ಒಂದನ್ನು ರಚಿಸಲಾಗುತ್ತಿದ್ದು, ಅಲ್ಲಿ ಸುಮಾರು ಇಪ್ಪತ್ತೈದು ದಿನಗಳ ಕಾಲ ಚಿತ್ರೀಕರಣವು ನಡೆಯುತ್ತದೆ ಎನ್ನಲಾಗಿದೆ. "ಸುಮಾರು 25 ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಅವರಲ್ಲಿ 10 ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಶಶಿಧರ್ ಅಡಪ ನಿರ್ಮಾಣ ಮತ್ತು ಕ್ಯಾಮರಾಮನ್ ಆಗಿ ಸುಗಾನ್ ಕೆಲಸ ಮಾಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.