ಅಭಿಶೇಕ್ ಪಾದಾರ್ಪಣೆ ಚಿತ್ರದಿಂದ ಪವನ್ ಔಟ್, ಚೇತನ್ ಇನ್!
ಕನ್ನಡ ಚಿತ್ರರಂಗದ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಶೇಕ್ ಗೌಡ ಪಾದಾರ್ಪಣೆ ಚಿತ್ರಕ್ಕೆ ಬಾರಿ ಕಸರತ್ತು ನಡೆಯುತ್ತಿದೆ. ಸಂದೇಶ್ ಪ್ರೋಡೆಕ್ಷನ್ ನಿರ್ಮಾಣದಲ್ಲಿ ತಯಾರಾಗುತ್ತಿದ್ದು...

Published On :
ಕನ್ನಡ ಚಿತ್ರರಂಗದ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಶೇಕ್ ಗೌಡ ಪಾದಾರ್ಪಣೆ ಚಿತ್ರಕ್ಕೆ ಬಾರಿ ಕಸರತ್ತು ನಡೆಯುತ್ತಿದೆ. ಸಂದೇಶ್ ಪ್ರೋಡೆಕ್ಷನ್ ನಿರ್ಮಾಣದಲ್ಲಿ ತಯಾರಾಗುತ್ತಿದ್ದು ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಈ ಹಿಂದೆ ಕೇಳಿದ್ದೀರಿ. ಆದರೆ ಹೊಸ ಬೆಳವಣಿಗೆಯಲ್ಲಿ ಚಿತ್ರದ ನಿರ್ದೇಶಕರು ಬದಲಾಗಿದ್ದು ಚಿತ್ರವನ್ನು ಪವನ್ ಒಡೆಯರ್ ಬದಲಿಗೆ ಚೇತನ್ ನಿರ್ದೇಶಸಲಿದ್ದಾರೆ.
ಪವನ್ ಒಡೆಯರ್ ಅವರು ಮತ್ತೊಂದು ಚಿತ್ರದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದು ಇದರಿಂದಾಗಿ ಡೇಟ್ಸ್ ಗಳು ಸಾಧ್ಯವಾಗದ ಕಾರಣ ಪವನ್ ಒಡೆಯರ್ ಬದಲಿಗೆ ಚೇತನ್ ಕುಮಾರ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ಈ ಸಂಗತಿಯನ್ನು ಸಂದೇಶ್ ಪ್ರೊಡೆಕ್ಷನ್ ಸ್ಪಷ್ಟಪಡಿಸಿದ್ದು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದೆ. ಇನ್ನು ಚೇತನ್ ಕುಮಾರ್ ಅವರ ಚಿತ್ರಕಥೆಯನ್ನೇ ಬಳಸಲಾಗುತ್ತಿದ್ದು ಇದು ಅಭಿಶೇಕ್ ಪಾದಾರ್ಪಣೆ ಚಿತ್ರಕ್ಕೆ ಸೂಕ್ತವಾಗಿರುತ್ತದೆ ಎಂದು ಚಿತ್ರ ನಿರ್ಮಾಪಕರು ಪರಿಗಣಿಸಿದ್ದು ಕಥೆಯ ಕುರಿತು ಕೆಲಸಗಳು ನಡೆಯುತ್ತಿವೆ.
ಹಲವು ಚಿತ್ರಗಳಿಗೆ ಸಂಭಾಷಣೆ, ಸಾಹಿತ್ಯ ಜತೆಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಚೇತನ್ ಕುಮಾರ್ ನಂತರ ಸೂಪರ್ ಹಿಟ್ ಬಹದ್ದೂರ್ ಮತ್ತು ಭರ್ಜರಿ ಚಿತ್ರಗಳನ್ನು ನಿರ್ದೇಶಿದ್ದರು. ಇನ್ನು ದರ್ಶನ್ ಅಭಿನಯದ 51ನೇ ಚಿತ್ರಕ್ಕೆ ಚೇತನ್ ಸಂಭಾಷಣೆ ಬರೆಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sandalwoodಪವನ್ ಒಡೆಯರ್ಚೇತನ್ಸ್ಯಾಂಡಲ್ವುಡ್Pavan WadeyarChethanAbhishek GowdaSandesh Productionsಅಭಿಶೇಕ್ ಗೌಡಸಂದೇಶ್ ಪ್ರೊಡೆಕ್ಷನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


