ಯೋಗರಾಜ್ ಭಟ್ ಚಿತ್ರದ ಮೂಲಕ ತುಳು ನಟಿ ಸೋನಾಲ್ ಮೊಂತೆಯಿರೋಗೆ ಸಿಗುತ್ತಾ ಬ್ರೇಕ್!
ನಿರ್ದೇಶಕ ಯೋಗರಾಜ್ ಭಟ್ ಕೈಗೆತ್ತಿಕೊಂಡಿರುವ ಹೆಸರಿಡದ ಚಿತ್ರದಲ್ಲಿ ವಿಹಾನ್ ನಾಯಕನಟನಾಗಿ ಅಭಿನಯಿಸುತ್ತಿದ್ದು ವಿಹಾನ್ ಗೆ ಜೋಡಿಯಾಗಿ ಸೋನಾಲ್ ಮೊಂತೆಯಿರೋ...

Published On :
ನಿರ್ದೇಶಕ ಯೋಗರಾಜ್ ಭಟ್ ಕೈಗೆತ್ತಿಕೊಂಡಿರುವ ಹೆಸರಿಡದ ಚಿತ್ರದಲ್ಲಿ ವಿಹಾನ್ ನಾಯಕ ನಟನಾಗಿ ಅಭಿನಯಿಸುತ್ತಿದ್ದು ವಿಹಾನ್ ಗೆ ಜೋಡಿಯಾಗಿ ಸೋನಾಲ್ ಮೊಂತೆಯಿರೋ ಆಯ್ಕೆಯಾಗಿದ್ದಾರೆ.
ಚಿತ್ರದ ತಾರಾಗಣ ಆಯ್ಕೆಯಲ್ಲಿ ತೊಡಗಿರುವ ಯೋಗರಾಜ್ ಭಟ್ ಅವರು ಈ ಹಿಂದೆ ತಮ್ಮ ಚಿತ್ರದ ನಾಯಕನಟನಾಗಿ ವಿಹಾನ್ ಎಂಬುವರನ್ನು ಆಯ್ಕೆ ಮಾಡಿದ್ದರು. ಬಳಿಕ ಅಕ್ಷರ ಗೌಡ ಎಂಬುವರನ್ನು ಆಯ್ಕೆ ಮಾಡಿದ್ದ ಯೋಗರಾಜ್ ಭಟ್ ಅವರು ಇದೀಗ ಸೋನಾಲ್ ಮೊಂತೆಯಿರೋರನ್ನು ಆಯ್ಕೆ ಮಾಡಿದ್ದಾರೆ.
ಸೋನಾಲ್ ಮೊಂತೆಯಿರೋ ಇದಾಗಲೇ ತುಳುವಿನಲ್ಲಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಎಕ್ಕಾ ಸಕ್ಕಾ, ಪಿಲಿಬೈಲ್ ಯಮುನಕ್ಕ ಮತ್ತು ಜೈ ತುಳುನಾಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಯೋಗರಾಜ್ ಭಟ್ ಅವರ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.
ಸದ್ಯ ಸೋನಾಲ್ ಮೊಂತೆಯಿರೋ ಪ್ರಥಮ್ ಅಭಿನಯದ ಎಂಎಲ್ಎ ಮತ್ತು ಕನ್ನಡದ ಮತ್ತೊಂದು ಚಿತ್ರ ಅಭಿಸಾರಿಕೆ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಯೋಗರಾಜ್ ಭಟ್ ಅವರ ಚಿತ್ರದಲ್ಲಿ ನಟನೆ ಜತೆಗೆ ನಟಿಯರಿಗೆ ದೊಡ್ಡ ಬ್ರೇಕ್ ಸಿಗುತ್ತವೆ. ಮಾಡೆಲ್ ಮತ್ತು ಸಿಂಗರ್ ಆಗಿರುವ ಸೋನಾಲ್ ಸಹ ದೊಡ್ಡ ಬ್ರೇಕ್ ನ ನಿರೀಕ್ಷೆಯಲ್ಲಿದ್ದಾರೆ.
ಇನ್ನು ಬಾಲಿವುಡ್ ನಲ್ಲಿ ಪಾದಾರ್ಪಣೆ ಮಾಡಿರುವ ಸೋನಾಲ್ ಮೊಂತೆಯಿರೋ ರಿತೇಶ್ ದೇಶ್ ಮುಖ್ ಅವರ ಜತೆ ನಟಿಸುತ್ತಿದ್ದು ಎರಡು ಶೆಡ್ಯೂಲ್ ಗಳನ್ನು ಮುಗಿಸಿದ್ದಾರೆ.
ಯೋಗರಾಜ್ ಭಟ್ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ಹೊಸ ಮುಖಗಳ ಆಯ್ಕೆಯಲ್ಲಿ ತೊಡಗಿದ್ದರು. ಅಂತೆ ಸೋನಾಲ್ ಚಿತ್ರದಲ್ಲಿ ನಾಯಕಿ ನಟಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರದಲ್ಲಿ ಸೋನಾಲ್ ಪಕ್ಕದ ಮನೆಯ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದು ಸ್ವಲ್ಪ ಗ್ಲಾಮರೆಸ್ ಆಗಿ ಕಾಣಿಸಿಕೊಳ್ಳಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


