ಸಿನಿಮಾ ಸುದ್ದಿ

ಪದ್ಮಾವತಿ ಚಿತ್ರ ಜನವರಿ 25 ಕ್ಕೆ ಬಿಡುಗಡೆ, ಹೆಸರು ಬದಲಾವಣೆ!

ಹಲವಾರು ಅಡೆತಡೆಗಳ ನಂತರ ಕೊನೆಗೂ ಪದ್ಮಾವತಿ(ಪದ್ಮಾವತ್) ಚಿತ್ರ ಬಿಡುಗಡೆಯಾಗಲಿದ್ದು, ಜ.25 ರಂದು ದಿನಾಂಕ ನಿಗದಿಯಾಗಿದೆ.

ಪದ್ಮಾವತಿ ಚಿತ್ರ ಜನವರಿ 25 ಕ್ಕೆ ಬಿಡುಗಡೆ, ಹೆಸರು ಬದಲಾವಣೆ!
ಪದ್ಮಾವತಿ
Published On :
ಮುಂಬೈ: ಹಲವಾರು ಅಡೆತಡೆಗಳ ನಂತರ ಕೊನೆಗೂ ಪದ್ಮಾವತಿ(ಪದ್ಮಾವತ್) ಚಿತ್ರ ಬಿಡುಗಡೆಯಾಗಲಿದ್ದು, ಜ.25 ರಂದು ದಿನಾಂಕ ನಿಗದಿಯಾಗಿದೆ. 
ವಯಾಕಾಮ್ 18 ಮೋಷನ್ ಪಿಕ್ಚರ್ಸ್ ಮೂಲಗಳ ಮಾಹಿತಿಯ ಪ್ರಕಾರ ಪದ್ಮಾವತಿ ಚಿತ್ರ ಪದ್ಮಾವತ್ ಹೆಸರಿನಲ್ಲಿ ಜ.25 ರಂದು ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. 
ವಿವಾದಕ್ಕೀಡಾಗಿದ್ದ ಪದ್ಮಾವತಿ ಚಿತ್ರಕ್ಕೆ ಸೆನ್ಸಾರ್ ಮಂಡಳಿ (ಸಿಬಿಎಫ್ ಸಿ)ಯಿಂದ ಪ್ರಮಾಣಪತ್ರ ಸಿಕ್ಕಿದ್ದು, ಚಿತ್ರದ ಶೀರ್ಶಿಕೆ ಹಾಗೂ ಕೆಲವು ಬದಲಾವಣೆಗಳನ್ನು ಮಾಡುವಂತೆ ಸೂಚಿಸಿದೆ. 
ಈ ಹಿಂದೆ ಡಿ.1 ರಂದು ಪದ್ಮಾವತಿ ಚಿತ್ರ ಬಿಡುಗಡೆಯಾಗಬೇಕಿತ್ತು. ಈಗ ಜ.25 ರಂದು ಚಿತ್ರ ಬಿಡುಗಡೆಯಾವುದರ ಬಗ್ಗೆ ನಿರ್ದೇಶಕ ಬನ್ಸಾಲಿ ಅಥವಾ ಚಿತ್ರ ತಂಡದಿಂದ ಅಧಿಕೃತ ಹೇಳಿಕೆ ಇನ್ನಷ್ಟೇ ಬರಬೇಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.