ಸಿನಿಮಾ ಸುದ್ದಿ

ಶ್ರದ್ಧಾ ಶ್ರೀನಾಥ್-ರಿಶಿ ಮತ್ತೆ ಒಟ್ಟಿಗೆ ಅಭಿನಯ?

ಆಪರೇಶನ್ ಅಲಮೇಲಮ್ಮ ಚಿತ್ರದ ಹಿಟ್ ಜೋಡಿ ಶ್ರದ್ಧಾ ಶ್ರೀನಾಥ್ ಮತ್ತು ರಿಶಿ ಮತ್ತೆ ಇನ್ನೊಂದು ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಲಿದ್ದಾರಂತೆ...

ಶ್ರದ್ಧಾ ಶ್ರೀನಾಥ್-ರಿಶಿ ಮತ್ತೆ ಒಟ್ಟಿಗೆ ಅಭಿನಯ?
ಶ್ರದ್ಧಾ ಶ್ರೀನಾಥ್
Published On :
ಆಪರೇಶನ್ ಅಲಮೇಲಮ್ಮ ಚಿತ್ರದ ಹಿಟ್ ಜೋಡಿ ಶ್ರದ್ಧಾ ಶ್ರೀನಾಥ್ ಮತ್ತು ರಿಶಿ ಮತ್ತೆ ಇನ್ನೊಂದು ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಲಿದ್ದಾರಂತೆ. ಧನುಷ್ ನಿರ್ಮಾಣ ಸಂಸ್ಥೆಯಾದ ವಂಡರ್ ಬಾರ್ ಫಿಲ್ಮ್ಸ್ ನಡಿ ಚಿತ್ರ ನಿರ್ಮಾಣವಾಗಲಿದ್ದು ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಚಿತ್ರ ನಿರ್ಮಿಸುವ ಉತ್ಸುಕತೆಯಲ್ಲಿ ನಿರ್ಮಾಣ ಸಂಸ್ಥೆಯಿದೆ. ಇದಕ್ಕೆ ನಿರ್ದೇಶಕ ಹಾಗೂ ನಿರ್ಮಾಪಕ ಜಾಕಬ್ ವರ್ಗೀಸ್ ಕೈ ಜೋಡಿಸುತ್ತಿದ್ದಾರೆ. ಚೊಚ್ಚಲ ನಿರ್ದೇಶಕ ಇಸ್ಲಹುದ್ದೀನ್ ಆಕ್ಷನ್-ಕಟ್ ಹೇಳಲಿದ್ದಾರೆ.
2017ನೇ ಇಸವಿ ಶ್ರದ್ಧಾ ಶ್ರೀನಾಥ್ ಗೆ ಉತ್ತಮವೆಂದೇ ಹೇಳಬಹುದು. ಯು-ಟರ್ನ್ ಖ್ಯಾತಿಯ ಶ್ರದ್ಧಾಳ ಅಭಿನಯವನ್ನು ಆಪರೇಶನ್ ಅಲಮೇಲಮ್ಮ ಚಿತ್ರದಲ್ಲಿ ಜನ ಮೆಚ್ಚಿಕೊಂಡಿದ್ದರು. ತಮಿಳಿನಲ್ಲಿ ಕೂಡ ಹಲವು ಅವಕಾಶ ಗಿಟ್ಟಿಸಿಕೊಂಡ ಶ್ರದ್ಧಾರ ಕಟ್ರು ವೆಲಿಯಿಡೈ, ಇವನ್ ತಂತಿರನ್, ವಿಕ್ರಮ್ ವೇದ ಮತ್ತು ರಿಚಿಗಳು ಬಿಡುಗಡೆಯಾದವು. ತೆಲುಗು ಚಿತ್ರೋದ್ಯಮದಲ್ಲಿ ಕೂಡ ನಟನೆಗೆ ಶ್ರದ್ಧಾ ಶ್ರೀನಾಥ್ ಹೋಗಿದ್ದಾರೆ.
ಇನ್ನು ಕನ್ನಡದಲ್ಲಿ ನಂದೀಶ್ ನಿರ್ದೇಶನದ ಗೋದ್ರಾ ಚಿತ್ರದ ಶೂಟಿಂಗ್ ಮುಗಿಸಿರುವ ಶ್ರದ್ಧಾ ನಂತರ ಯಾವುದೇ ಕನ್ನಡ ಚಿತ್ರಗಳಿಗೆ ಸಹಿ ಹಾಕಿರಲಿಲ್ಲ.
ಉತ್ತಮ ಕಥೆಗಾಗಿ ಕಾಯುತ್ತಿದ್ದ ಶ್ರದ್ಧಾಗೆ ಇನ್ನೂ ಹೆಸರಿಡದ ಈ ಚಿತ್ರ ಇಷ್ಟವಾಗಿದ್ದು ಈ ವರ್ಷ ಕನ್ನಡದಲ್ಲಿ ಮತ್ತೆ ರಿಶಿ ಜೊತೆ ಅಭಿನಯಿಸುವ ಸಾಧ್ಯತೆಯಿದೆ.ಚಿತ್ರಕ್ಕೆ ಈಗಾಗಲೇ ತಯಾರಿ ನಡೆಯುತ್ತಿದೆ.
Story image
ನಿರ್ಮಾಣ ಸಂಸ್ಥೆಯಿಂದ ಅಧಿಕೃತ ಮಾಹಿತಿ ಹೊರಬಂದ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ. ಕವಲು ದಾರಿ ಚಿತ್ರದಲ್ಲಿ ಅಭಿನಯಿಸುತ್ತಿರುವ ರಿಶಿಗೆ ಇದು ಮುಂದಿನ ಪ್ರಾಜೆಕ್ಟ್ ಆಗಿದೆ. ಯೋಜನೆಯಂತೆ ಎಲ್ಲವೂ ನಡೆದರೆ ಫೆಬ್ರವರಿಯಲ್ಲಿ ಶೂಟಿಂಗ್ ಆರಂಭವಾಗಲಿದೆ. ಶ್ರದ್ಧಾ ಮತ್ತು ಶ್ರೀನಾಥ್ ಜೊತೆಗೆ ಧನುಷ್ ಹಾಗೂ ಜಾಕೊಬ್ ಈ ಚಿತ್ರಕ್ಕೆ ಒಂದಾಗಲಿದ್ದು ವೀಕ್ಷಕರಲ್ಲಿ ಕುತೂಹಲ ಉಂಟಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.