ಸಿನಿಮಾ ಸುದ್ದಿ

ಕೊಚ್ಚಾಡಿಯನ್ ಮಾರಾಟ ಹಕ್ಕು ವಿವಾದ: 6.20 ಕೋಟಿ ರೂ. ಪಾವತಿಸುವಂತೆ ರಜನಿ ಪತ್ನಿಗೆ ಸುಪ್ರೀಂ ಆದೇಶ

ಕೊಚ್ಚಾಡಿಯನ್ ಚಿತ್ರದ ಮಾರಾಟ ಹಕ್ಕಿಗೆ ಸಂಬಂಧಿಸಿದಂತೆ ಜಾಹಿರಾತು ಕಂಪನಿಗೆ 6.20 ಕೋಟಿ ರೂ. ಪಾವತಿಸುವಂತೆ ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರಿಗೆ ಸುಪ್ರೀಂಕೋರ್ಟ್ ಆದೇಶಿಸಿದೆ.

ಕೊಚ್ಚಾಡಿಯನ್ ಮಾರಾಟ ಹಕ್ಕು ವಿವಾದ: 6.20 ಕೋಟಿ ರೂ. ಪಾವತಿಸುವಂತೆ ರಜನಿ ಪತ್ನಿಗೆ ಸುಪ್ರೀಂ ಆದೇಶ
ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರ ಚಿತ್ರ
Published On :

ಚೆನ್ನೈ: ಕೊಚ್ಚಾಡಿಯನ್  ಚಿತ್ರದ ಮಾರಾಟ ಹಕ್ಕು  ವಿವಾದ ಸೂಪರ್ ಸ್ಟಾರ್ ರಜನಿಕಾಂತ್ ಕುಟುಂಬವನ್ನು ಇನ್ನೂ ಬಿಟ್ಟಿಲ್ಲ. 6.20 ಕೋಟಿ ರೂ. ಪಾವತಿಸುವಂತೆ ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರಿಗೆ ಸುಪ್ರೀಂಕೋರ್ಟ್ ಆದೇಶಿಸಿದೆ.

12 ತಿಂಗಳೊಳಗೆ ಈ ಮೊತ್ತವನ್ನು ಜಾಹಿರಾತು ಕಂಪನಿಗೆ ನೀಡುವಂತೆ ಸುಪ್ರೀಂಕೋರ್ಟ್  ತಿಳಿಸಿದೆ.

ಕೊಚ್ಚಾಡಿಯನ್ ಚಿತ್ರದ ಮಾರಾಟದ ಹಕ್ಕಿಗೆ ಸಂಬಂಧಿಸಿದಂತೆ ಜಾಹೀರಾತು ಬ್ಯೂರೋ ಹಾಗೂ ಲತಾ ರಜನಿಕಾಂತ್ ಅವರ ನಡುವೆ 2016ರ ಹಿಂದಿನಿಂದಲೂ ವಿವಾದ ಏರ್ಪಟ್ಟಿದೆ.

ಕೊಚ್ಚಾಡಿಯನ್ ಸಿನಿಮಾದ ಪೋಸ್ಟ್ ನಿರ್ಮಾಣಕ್ಕಾಗಿ ತಮ್ಮ ಕಂಪನಿಯ ನೆರವು ಪೆಡೆದಿದ್ದು, 10 ಕೋಟಿ  ರೂ. ಸಾಲದಿಂದ ಸಿನಿಮಾ ಪೂರ್ಣಗೊಳಿಸಲಾಗಿದೆ. ಆದರೆ, ಅಂತ್ಯದಲ್ಲಿ ತಮ್ಮ ಒಪ್ಪಿಗೆ ಇಲ್ಲದೆ ಬೇರೊಂದು ಕಂಪನಿಗೆ ಮಾರಾಟ ಮಾಡಲಾಗಿದೆ ಎಂದು ಜಾಹೀರಾತು ಕಂಪನಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

 ಈ ಪ್ರಕರಣ ಸಂಬಂಧ 2016 ಜುಲೈ8 ರಂದು ಲತಾ ರಜನಿಕಾಂತ್ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿತ್ತು. ರಜನಿಕಾಂತ್ ತಮಿಳುನಾಡಿನ ರಾಜಕೀಯಕ್ಕೆ ಪ್ರವೇಶಿಸಿದ್ದ ಸಂದರ್ಭದಲ್ಲಿ ಮತ್ತೊಮ್ಮೆ ಸುಪ್ರಿಂಕೋರ್ಟ್ ರಜನಿ ಪತ್ನಿಗೆ ನೋಟಿಸ್ ಜಾರಿಗೊಳಿಸಿರುವುದು, ಸಾರ್ವಜನಿಕರಲ್ಲಿ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.