ಭೈರದೇವಿಯಲ್ಲಿ ಒಂದಾಗಲಿರುವ ರಾಧಿಕಾ ಕುಮಾರಸ್ವಾಮಿ, ರಮೇಶ್ ಅರವಿಂದ್
ರಾಧಿಕಾ ಕುಮಾರಸ್ವಾಮಿ ಮತ್ತೆ ಸಿನಿಮಾ ನಿರ್ಮಾಣದತ್ತ ಒಲವು ತೋರಿದ್ದಾರೆ. ತಮ್ಮ ಶಮಿಕಾ ಬ್ಯಾನರ್ ...

ರಾಧಿಕಾ ಕುಮಾರಸ್ವಾಮಿ ಮತ್ತೆ ಸಿನಿಮಾ ನಿರ್ಮಾಣದತ್ತ ಒಲವು ತೋರಿದ್ದಾರೆ. ತಮ್ಮ ಶಮಿಕಾ ಬ್ಯಾನರ್ ನಡಿಯಲ್ಲಿ ಸಿನಿಮಾವೊಂದನ್ನು ನಿರ್ಮಿಸುತ್ತಿದ್ದು ಈ ತಿಂಗಳಾಂತ್ಯದಲ್ಲಿ ಕೆಲಸ ಆರಂಭವಾಗವ ಲಕ್ಷಣವಿದೆ.
ಭೈರದೇವಿ ಎಂದು ಚಿತ್ರದ ಹೆಸರಾಗಿದ್ದು ಇದರಲ್ಲಿ ರಾಧಿಕಾ ಕುಮಾರಸ್ವಾಮಿ ನಿರ್ಮಾಣ ಮಾಡುವುದರ ಜೊತೆಗೆ ನಟಿಸಲಿದ್ದಾರೆ ಕೂಡ. ಚಿತ್ರದ ಮುಹೂರ್ತ ನಿನ್ನೆ ನಡೆಯಿತು. ಶ್ರೀಜೈ ನಿರ್ದೇಶನದಲ್ಲಿ ಚಿತ್ರ ಮೂಡಿಬರಲಿದೆ. ಅವರು ಈಗಾಗಲೇ ದುನಿಯಾ ವಿಜಯ್ ಅವರ ಆರ್ ಎಕ್ಸ್ ಸೂರಿ ಚಿತ್ರ ನಿರ್ದೇಶಿಸಿದ್ದಾರೆ.
ಲಕ್ಕಿ ಮತ್ತು ಸ್ವೀಟಿ ನನ್ನ ಜೋಡಿ ಸಿನಿಮಾ ನಿರ್ಮಿಸಿದ್ದ ರಾಧಿಕಾ ಭೈರದೇವಿಯನ್ನು ಬೇರೆ ಭಾಷೆಗಳಲ್ಲಿ ಕೂಡ ನಿರ್ಮಿಸುವ ಒಲವು ತೋರಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಭೈರದೇವಿಯನ್ನು ನಿರ್ಮಿಸುತ್ತಿದ್ದಾರೆ.
ಭೈರದೇವಿಯಲ್ಲಿ ನಟ ರಮೇಶ್ ಅರವಿಂದ್ ರಾಧಿಕಾ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಸ್ಕಂದ ಅಶೋಕ್, ಅನು ಪ್ರಭಾಕರ್ ಚಿತ್ರದಲ್ಲಿದ್ದಾರೆ.
ಕ್ವೀನ್ ಚಿತ್ರದ ರಿಮೇಕ್ ನಲ್ಲಿ ಬ್ಯುಸಿಯಾಗಿರುವ ನಟ ರಮೇಶ್ ಅರವಿಂದ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಚಿರಪರಿಚಿತರು.ಭೈರದೇವಿಯ ಫೋಟೋ ಶೂಟ್ ನಡೆದ ನಂತರ ರಾಧಿಕಾ ಕುಮಾರಸ್ವಾಮಿ ಚಿತ್ರದ ಬಗ್ಗೆ ಹೆಚ್ಚಿನ ವಿವರ ನೀಡಲಿದ್ದಾರೆ. ಆಪ್ತಮಿತ್ರದ ಛಾಯೆ ಭೈರದೇವಿಯಲ್ಲಿ ಕಾಣಬಹುದು ಎನ್ನುತ್ತಾರೆ ರಾಧಿಕಾ ಕುಮಾರಸ್ವಾಮಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


