ಸಿನಿಮಾ ಸುದ್ದಿ

ಪವರ್ ಸ್ಟಾರ್ ಪುನೀತ್ ಗೆ ಅಭಿಮಾನಿಯಿಂದ ವಾಲ್ಮೀಕಿ ರಾಮಾಯಣ ಉಡುಗೊರೆ

ಕನ್ನಡ ವರನಟ ರಾಜ್ ಕುಮಾರ್ ಅವರ ಕಿಇರಿಯ ಪುತ್ರ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಅವರ ಅಭಿಮಾನಿಗಳೊಬ್ಬರು ವಾಲ್ಮೀಕಿ ರಾಮಾಯಣ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಪವರ್ ಸ್ಟಾರ್ ಪುನೀತ್ ಗೆ ಅಭಿಮಾನಿಯಿಂದ ವಾಲ್ಮೀಕಿ ರಾಮಾಯಣ ಉಡುಗೊರೆ
ಪವರ್ ಸ್ಟಾರ್ ಪುನೀತ್ ಗೆ ಅಭಿಮಾನಿಯಿಂದ ವಾಲ್ಮೀಕಿ ರಾಮಾಯಣ ಉಡುಗೊರೆ
Published On :
ಬೆಂಗಳೂರು: ಕನ್ನಡ ವರನಟ ರಾಜ್ ಕುಮಾರ್ ಅವರ ಕಿಇರಿಯ ಪುತ್ರ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಅವರ ಅಭಿಮಾನಿಗಳೊಬ್ಬರು ವಾಲ್ಮೀಕಿ ರಾಮಾಯಣ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.
ನಟ ಪುನೀತ್ ಈ ಪುಸ್ತಕ ಹಿಡಿದಿರುವ ಚಿತ್ರವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದು 'ಬೆಟ್ಟದ ಹೂವು ಸಿನಿಮಾದಲ್ಲಿ ಎಷ್ಟೇ ದುಡ್ಡು ಸೇವ್ ಮಾಡಿದ್ರೂ ತಗೊಳ್ಳೋಕೆ ಆಗಿರಲಿಲ್ಲ. Finally a fan gifted it.'  ಎಂದು ಬರೆದುಕೊಂಡಿದ್ದಾರೆ. ಪುನೀತ್ ಅವರ ಈ ಚಿತ್ರ ಹಾಗೂ ಬರಹಕ್ಕೆ ಅಭಿಮಾನಿಗಳು ಫಿದಾ ಆಗಿದ್ದು ಸಾಕಷ್ಟು ಜನರಿಂದ ಮೆಚ್ಚುಗೆ ಸುರಿಮಳೆಯಾಗಿದೆ.
'ಬೆಟ್ಟದ ಹೂವು' ಚಿತ್ರದಲ್ಲಿ "ಬಿಸಿಲೇ ಇರಲಿ, ಮಳೆಯೇ ಬರಲಿ" ಹಾಡಿನಲ್ಲಿ ತಾನು ಹಣವನ್ನು ಸೇರಿಸಿ ರಾಮಾಯಣ ಪುಸ್ತಕ ತೆಗೆದುಕೊಳ್ಳುತ್ತೇನೆ ಎನ್ನುವ ಸಾಲೊಂದು ಇದ್ದು ಚಿತ್ರದ ಅಂತ್ಯದವರೆಗೂ ಆ ಬಾಲಕನಿಗೆ ಪುಸ್ತಕ ಖರೀದಿಸಲು ಸಾಧ್ಯವಾಗುವುದಿಲ್ಲ. ಇದೇ ನೆನಪಿನಲ್ಲಿ ಪುನೀತ್ ರಾಮಾಯಣ ಪುಸ್ತಕ ಹಿಡಿದು ಈ ರೀತಿ ಪೋಸ್ಟ್ ಮಾಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಚಿತ್ರ 50 ದಿನ ಪೂರೈಸಿದ್ದು ಈ ವೇಳೆ ಅವರಿಗೆ ರಾಮಾಯಣ ಪುಸ್ತಕ ಉಡುಗೊರೆ ಸಿಕ್ಕಿದೆ. ಆದರೆ ಹೀಗೆ ಪುಸ್ತಕ ನೀಡಿದ್ದ ಅಭಿಮಾನಿ ಯಾರು ಎನ್ನುವ ಗುಟ್ಟನ್ನು ಸ್ಟಾರ್ ನಟ ಎಲ್ಲಿಯೂ ಬಿಟ್ಟು ಕೊಟ್ಟಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.