ಸಿನಿಮಾ ಸುದ್ದಿ

'ಕೆಜಿಎಫ್' ಹಾದಿಯಲ್ಲಿ 'ಸಾಹೋ'... 2 ಚಾಪ್ಟರ್ ಗಳಲ್ಲಿ ತೆರೆ ಮೇಲೆ ಬರಲಿದೆ 'ಬಾಹುಬಲಿ ಪ್ರಭಾಸ್' ಚಿತ್ರ

ಬಾಹುಬಲಿ ಚಿತ್ರದಿಂದ ಸ್ಪೂರ್ತಿ ಪಡೆದು ಕೆಜಿಎಫ್ ಬಹು ಭಾಷೆಗಳಲ್ಲಿ ತೆರೆಕಂಡಿದೆಯಾದರೂ, ಇದೀಗ ಇದೇ ಕೆಜಿಎಫ್ ಚಿತ್ರ ಹಲವು ಸಿನಿಮಾ ತಯಾರಕರಿಗೆ ಮಾದರಿಯಾಗಿ ನಿಂತಿದೆ.

'ಕೆಜಿಎಫ್' ಹಾದಿಯಲ್ಲಿ 'ಸಾಹೋ'... 2 ಚಾಪ್ಟರ್ ಗಳಲ್ಲಿ ತೆರೆ ಮೇಲೆ ಬರಲಿದೆ 'ಬಾಹುಬಲಿ ಪ್ರಭಾಸ್' ಚಿತ್ರ
ಸಂಗ್ರಹ ಚಿತ್ರ
Published On :
ಹೈದರಾಬಾದ್: ಬಾಹುಬಲಿ ಚಿತ್ರದಿಂದ ಸ್ಪೂರ್ತಿ ಪಡೆದು ಕೆಜಿಎಫ್ ಬಹು ಭಾಷೆಗಳಲ್ಲಿ ತೆರೆಕಂಡಿದೆಯಾದರೂ, ಇದೀಗ ಇದೇ ಕೆಜಿಎಫ್ ಚಿತ್ರ ಹಲವು ಸಿನಿಮಾ ತಯಾರಕರಿಗೆ ಮಾದರಿಯಾಗಿ ನಿಂತಿದೆ.
ಹೌದು.. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಕೆಜಿಎಫ್ ದೇಶಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿರುವಂತೆಯೇ ಹಲವು ಸಿನಿಮಾ ನಿರ್ಮಾಣದಾರರಿಗೆ ಸ್ಪೂರ್ತಿಯಾಗಿ ನಿಂತಿದೆ. ಕೆಜಿಎಫ್ ಚಿತ್ರವನ್ನು 2 ಚಾಪ್ಟರ್ ಗಳಲ್ಲಿ ತೆರೆ ಮೇಲೆ ತಂದ ನಿರ್ದೇಶಕ ಪ್ರಶಾಂತ್ ನೀಲ್ ಅವರ ಮಾಸ್ಟರ್ ಪ್ಲಾನ್ ಇದೀಗ ಇತರೆ ಚಿತ್ರರಂಗದವರಿಗೂ ಸಿಕ್ಕಾಪಟ್ಟೆ ಇಷ್ಟವಾಗಿದ್ದು, ಇದರಿಂದ ಸ್ಪೂರ್ತಿ ಪಡೆದ ಅವರು ಕೆಜಿಎಫ್ ನಂತೆಯೇ ಚಾಪ್ಟರ್ ಗಳಲ್ಲಿ ಚಿತ್ರ ಬಿಡುಗಡೆಗೆ ಮುಂದಾಗಿದ್ದಾರೆ.
ಇದಕ್ಕೆ ಮೊದಲ ಸೇರ್ಪಡೆ ಎಂಬಂತೆ ಬಾಹುಬಲಿ ನಟ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಸಾಹೋ ಕೂಡ 2 ಚಾಪ್ಟರ್ ಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿ ನಿಂತಿದೆ. ಕೆಜಿಎಫ್ ಯಶಸ್ಸಿನ ಬೆನ್ನಲ್ಲೇ ಸಾಹೋ ನಿರ್ದೇಶಕ ಸುಜೀತ್ ಚಿತ್ರವನ್ನು 2 ಚಾಪ್ಚರ್ ಗಳಲ್ಲಿ ತೆರೆ ಮೇಲೆ ತರಲು ಸಿದ್ಧರಾಗಿದ್ದಾರೆ. 
ಭಾಗ 1, ಭಾಗ 2 ಕಾಲ ಮುಕ್ತಾಯ; ಇಂಡಿಯನ್​ ಸಿನಿಮಾದಲ್ಲಿ ಹೊಸ ಟ್ರೆಂಡ್​ ಶುರು..!
ಈ ಹಿಂದೆಯೇ ಪ್ರಭಾಸ್​ ಬರ್ತ್​ಡೇಗೆ ಸಾಹೋ ಚಾಪ್ಟರ್​-1 ಮೇಕಿಂಗ್​ ಬಿಡಲಾಗಿತ್ತು. ಯಶ್​ ಬರ್ತ್ ​ಡೇಗೆ ಕೆಜಿಎಫ್​ ಚಾಪ್ಟರ್​​-1ರ ಮೇಕಿಂಗ್​ ರಿಲೀಸ್​ ಮಾಡಿತ್ತು. ಇದೀಗ ಸಾಹೋ ಸಿನಿಮಾವನ್ನೂ ಚಾಪ್ಟರ್​​-1, ಚಾಪ್ಟರ್​-2 ಶೈಲಿಯಲ್ಲಿ ಮಾಡೋ ಪ್ಲಾನ್​ ನಡೆದಿದೆ.  ಸುಜೀತ್​ ಆ್ಯಕ್ಷನ್​ ಕಟ್​ ಹೇಳಿರೋ ಸಾಹೋ ಸಿನಿಮಾ ಒಂದು ಸೈಂಟಿಫಿಕಲ್​ ಥ್ರಿಲ್ಲರ್​. ಈ ಸಿನಿಮಾ ಕೂಡ 2 ಚಾಪ್ಟರ್​ಗಳಲ್ಲಿ ರಿಲೀಸ್​ ಆಗ್ತಾ ಇದೆ.
ಒಂದು ಗಮನಿಸಬಹುದಾದ ವಿಷಯ ಅಂದ್ರೆ ಸಿನಿಮಾ ಭಾಗ1, ಭಾಗ2 ಅಂತ ರಿಲೀಸ್​ ಆಗೋದು ಬೇರೆ, ಚಾಪ್ಟರ್​1, ಚಾಪ್ಟರ್​2 ಅಂತ ರಿಲೀಸ್​ ಆಗೋದು ಬೇರೆ. ಯಾಕಂದ್ರೆ ಭಾಗ 1ರ ಮುಂದುವರಿದ ಭಾಗ 2ರಲ್ಲಿ ಇರುತ್ತೆ. ಆದ್ರೆ ಚಾಪ್ಟರ್​ 1 ರ ಮುಂದುವರಿದ ಭಾಗ, ಚಾಪ್ಟರ್​​-2ನಲ್ಲೂ ಇರಬೇಕು ಅಂತೇನು ಇಲ್ಲ, ಅದು ಚಾಪ್ಟರ್​​-2ನಲ್ಲಿ ಮತ್ತೊಂದು ಅಧ್ಯಾಯ ಇರುತ್ತೆ ಅಷ್ಟೆ, ಅದು ಮೊದಲ ಚಾಪ್ಟರ್ ನ ಮುಂದುವರಿದ ಕಥೆಯನ್ನ ಹೇಳಬಹುದು ಅಥವ ಮತ್ತೊಂದು ಹೊಸ ಅಧ್ಯಾಯವನ್ನ ಹೇಳಬಹುದು. ಇದೇ ಕಾರಣಕ್ಕೆ ಕೆಜಿಎಫ್​ ಚಾಪ್ಟರ್​-1ನಲ್ಲಿ, ಚಾಪ್ಟರ್​-2ಗೆ ಏನ್ನನ್ನೂ ಲೀಡ್​ ಕೊಟ್ಟಿಲ್ಲ, ಆದ್ರೆ ಚಾಪ್ಟರ್​​-2 ನೋಡಲೇಬೇಕು ಅನ್ನೋ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ. ಕೆಜಿಎಫ್ ನಿರ್ದೇಶಕರ ಈ ಮಾಸ್ಟರ್ ಪ್ಲಾನ್ ಸಾಹೋ ನಿರ್ದೇಶಕರಿಗೂ ಇಷ್ಟವಾದಂತಿದೆ. ಇದೇ ಕಾರಣಕ್ಕೆ ಸಾಹೋ ಕೂಡ ಇದನ್ನೇ ಫಾಲೋ ಮಾಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.