ಸಿನಿಮಾ ಸುದ್ದಿ

ನಾತಿಚರಾಮಿ: ಲೈಂಗಿಕ ಬಯಕೆ ಬರೀ ಗಂಡಸರಿಗೆ ಮಾತ್ರನಾ?

ಸ್ಯಾಂಡಲ್‌ವುಡ್‌ನಲ್ಲಿ ಬೋಲ್ಡ್ ವಿಚಾರಧಾರೆಯ ಚಿತ್ರಗಳು ಈಗಾಗಲೇ ಸಾಕಷ್ಟು ಬಂದಿವೆ. ಇದರ ಜೊತೆಗೆ ಈ ಚಿತ್ರಗಳು ಸಕಾರಾತ್ಮಕ ಪ್ರಭಾವವನ್ನೂ ಕೂಡ ಬೀರಿವೆ.

ನಾತಿಚರಾಮಿ: ಲೈಂಗಿಕ ಬಯಕೆ ಬರೀ ಗಂಡಸರಿಗೆ ಮಾತ್ರನಾ?
ಶ್ರುತಿ ಹರಿಹರನ್
Published On :
ಸ್ಯಾಂಡಲ್‌ವುಡ್‌ನಲ್ಲಿ ಬೋಲ್ಡ್ ವಿಚಾರಧಾರೆಯ ಚಿತ್ರಗಳು ಈಗಾಗಲೇ ಸಾಕಷ್ಟು ಬಂದಿವೆ. ಇದರ ಜೊತೆಗೆ ಈ ಚಿತ್ರಗಳು ಸಕಾರಾತ್ಮಕ ಪ್ರಭಾವವನ್ನೂ ಕೂಡ ಬೀರಿವೆ. ಇದೀಗ ಇದೇ ರೀತಿಯ ಒಂದು ಉದಾರ ಮನಸ್ಥಿತಿಯ ವಿಚಾರವನ್ನಿಟ್ಟುಕೊಂಡು ನಾತಿಚರಾಮಿ ಕೂಡ ಇದೇ ವಾರ ತೆರೆಯ ಮೇಲೆ ಬರುತ್ತಿದೆ.
ಶ್ರುತಿ ಹರಿಹರನ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಭಿನಯದ ನಾತಿಚರಾಮಿ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಧರ್ಮೆಚ, ಅರ್ಥೇಚ, ಕಾಮೇಚ, ಮೊಕ್ಷೇಚ ಅಹಂ ಇವಮ್ ನಾತಿಚರಾಮಿ ಎಂಬ ಸಾಲಿನ ಅರ್ಥ ಹುಡುಕುವ ಪ್ರಯತ್ನ ಮಾಡಿದೆ. 
ಶ್ರುತಿ ಹರಿಹರನ್ ಈ ಚಿತ್ರದಲ್ಲಿ ಗೌರಿ ಎಂಬ ವಿಧವೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರ ಲೈಂಗಿಕ ಬಯಕೆ ಕೇವಲ ಗಂಡಸರಿಗೆ ಮಾತ್ರನಾ ಎಂಬ ಪ್ರಶ್ನೆಯನ್ನು ಸಮಾಜದ ಮುಂದಿಡಲಿದೆ. ಮದುವೆ, ಗಂಡ ಹೆಂಡತಿ ಸಂಬಂಧ ಹೇಗಿರಬೇಕು ಎಂಬ ವಿಷಯಗಳನ್ನು ಈ ಚಿತ್ರ ವಿವಿಧ ಪಾತ್ರಗಳ ಮೂಲಕ ತೆರೆಯ ಮೇಲೆ ಚರ್ಚಿಸಲಿದೆ.
ಈ ಇದೇ ರೀತಿಯ ಚಿತ್ರಗಳಲ್ಲಿ ಬಂದಿದ್ದವು, ಅವುಗಳಲ್ಲಿ ಕಾಡಿನ ಬೆಂಕಿ, ಫಣಿಯಮ್ಮ, ಅನುಭವ, ಅನಂತನ ಅವಾಂತರ ಹೀಗೆ ವಿಧವೆ ಮರು ವಿವಾಹದ ಕುರಿತು ಚಿತ್ರಗಳು ಪ್ರಮುಖವಾಗಿದ್ದವು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.