ಸಿನಿಮಾ ಸುದ್ದಿ

ಹಳ್ಳಿ ಕಥೆ ಆಧಾರಿತ ಸಿನಿಮಾಗಳಲ್ಲಿ ನಟಿಸುವುದು ನನಗೆ ಹೆಚ್ಚಿನ ಆಸಕ್ತಿ: ಸಂಹಿತ ವಿನ್ಯಾ

ನಾನು ಮಾಡೆಲ್ ಆಗದಂತೆ ನನ್ನ ಪೋಷಕರು ವಿರೋಧಿಸುತ್ತಿದ್ದರು ಅವರಿಗೆ ನಾನು ಸರ್ಕಾರಿ ನೌಕರಿ ಸೇರುವುದು ಬೇಕಿತ್ತು, ಆದರೆ ನನ್ನ ಪಯಾಣದ ಹಿಂದೆ ತಿರುಗಿ ...

ಹಳ್ಳಿ ಕಥೆ ಆಧಾರಿತ ಸಿನಿಮಾಗಳಲ್ಲಿ ನಟಿಸುವುದು ನನಗೆ ಹೆಚ್ಚಿನ ಆಸಕ್ತಿ: ಸಂಹಿತ ವಿನ್ಯಾ
ಸಂಹಿತ ವಿನ್ಯಾ
Published On :
ಬೆಂಗಳೂರು: ನಾನು ಮಾಡೆಲ್ ಆಗದಂತೆ ನನ್ನ ಪೋಷಕರು ವಿರೋಧಿಸುತ್ತಿದ್ದರು ಅವರಿಗೆ ನಾನು ಸರ್ಕಾರಿ ನೌಕರಿ ಸೇರುವುದು ಬೇಕಿತ್ತು, ಆದರೆ ನನ್ನ ಪಯಾಣದ ಹಿಂದೆ ತಿರುಗಿ ನೋಡಿದಾಗ ನನ್ನ ಆತ್ಮ ವಿಶ್ವಾಸದ ಬಗ್ಗೆ ಹೆಮ್ಮೆಯಾಗುತ್ತದೆ,  ನನಗೆ  ನಾನು ಯಾರು ಎಂಬ ಬಗ್ಗ ಹಾಗೂ ನಾನು ಏನು ಎಂಬ ಬಗ್ಗೆ ತಿಳಿದಿದೆ ಎಂದು ನಟಿ ಸಂಹಿತ ವಿನ್ಯಾ ತಿಳಿಸಿದ್ದಾರೆ.
ತನ್ನ ಗುರಿ ಮುಟ್ಟಲು ಆಕೆ ಯಾವುದೇ ಒಂದು ಸಣ್ಣ ಅವಕಾಶವನ್ನು ಮಿಸ್ ಮಾಡಿಕೊಳ್ಳಲಿಲ್ಲ, ಶಾಲಾ ದಿನಗಳಲ್ಲಿ ನಾನು ನಾಟಕ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ, ಸಣ್ಣ ಅಥವಾ ದೊಡ್ಡ ಶೋಗಳಲ್ಲಿ ಭಾಗವಹಿಸುತ್ತಿದ್ದೆ ಎಂದು ಹೇಳಿದ್ದಾರೆ.
ಸಕಲೇಶಪುರದ ಗ್ರಾಮವೊಂದರಲ್ಲಿ ಜನಿಸಿದ ಸಂಹಿತ ನಂತರ ಬೆಂಗಳೂರಿಗೆ ಶಿಫ್ಟ್ ಆದರು. 2014 ರಲ್ಲಿ ಮಿಸ್ ಕರ್ನಾಟಕ ಕೀರ್ತಿಗೆ ಪಾತ್ರರಾಗಿದ್ದರು, 2015 ರಲ್ಲಿ ಮಿಸ್ ಗ್ಲಾಮರ್ ದಿವಾ ಪಡೆದಿದ್ದರು,  2015 ರಲ್ಲಿ  ಮಾಡೆಲಿಂಗ್ ಫೀಲ್ಡ್ ಗೆ ಎಂಟ್ರಿ ನೀಡಿದ ಬ್ರಾಂಡ್ ಅಂಬಾಸಿಡರ್ ಆಗಿದ್ದರು.
2016 ರಲ್ಲಿ ಕೆಕೆ ಫಿಲ್ಮ್ಸ್  ಅಡಿಯಲ್ಲಿ  ಮಂಜು ದೈವಾಂಗ ನಿರ್ದೇಶನದ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದರು, ವಿಷ್ಣು ಸರ್ಕಲ್ ನಂತರ ಹಾಲು ತುಪ್ಪ ಸಿನಿಮಾದಲ್ಲೂ ನಟಿಸಿದ್ದಾರೆ, ಸಂಹಿತ ನಟನೆಯ 2 ತಮಿಳು ಸಿನಿಮಾ  2019 ರಂದು ರಿಲೀಸ್ ಆಗಲಿದೆ ಎಂದು ಸಂಹಿತ ಹೇಳಿದ್ದಾರೆ.
ಹಾಲು ತುಪ್ಪ ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ, ಪ್ರೇಕ್ಷಕರು ಹಳ್ಳಿ ಡ್ರೆಸ್ ನಲ್ಲಿ ನನ್ನನ್ನು ಒಪ್ಪಿಕೊಂಡಿದ್ದಾರೆ, ಹೀಗಾಗಿ ನನಗೆ ಹಳ್ಳಿ ಹುಡುಗಿ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಇಷ್ಟ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.