ಸಿನಿಮಾ ಸುದ್ದಿ

ಕೆಜಿಎಫ್ ಮೇನಿಯಾ: ಯಶ್ ನಟನೆಗೆ ಬಾಲಿವುಡ್ ಖ್ಯಾತ ನಟಿ ರವೀನಾ ಟಂಡನ್ ಹೇಳಿದ್ದೇನು?

ಕೆಜಿಎಫ್ ಚಿತ್ರದ ಆರ್ಭಟಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದ್ದು ಪರಭಾಷಿಗರು ಫಿದಾ ಆಗಿದ್ದಾರೆ. ಹಿಂದಿ. ತಮಿಳು ಹಾಗೂ ಹಿಂದಿ ಪ್ರೇಕ್ಷಕರು ರಾಕಿಂಗ್ ಸ್ಟಾರ್ ಯಶ್ ಗೆ ಸಲಾಂ ಅಂತಿದ್ದಾರೆ...

ಕೆಜಿಎಫ್ ಮೇನಿಯಾ: ಯಶ್ ನಟನೆಗೆ ಬಾಲಿವುಡ್ ಖ್ಯಾತ ನಟಿ ರವೀನಾ ಟಂಡನ್ ಹೇಳಿದ್ದೇನು?
ಯಶ್-ರವೀನಾ ಟಂಡನ್
Published On :
ಕೆಜಿಎಫ್ ಚಿತ್ರದ ಆರ್ಭಟಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದ್ದು ಪರಭಾಷಿಗರು ಫಿದಾ ಆಗಿದ್ದಾರೆ. ಹಿಂದಿ. ತಮಿಳು ಹಾಗೂ ಹಿಂದಿ ಪ್ರೇಕ್ಷಕರು ರಾಕಿಂಗ್ ಸ್ಟಾರ್ ಯಶ್ ಗೆ ಸಲಾಂ ಅಂತಿದ್ದಾರೆ. 
ಇದೀಗ ಯಶ್ ಕೆಜಿಎಫ್ ಚಿತ್ರವನ್ನು ನೋಡಿದ ಬಾಲಿವುಡ್ ನಟಿ ರವೀನಾ ಟಂಡನ್ ಸಂತಸ ವ್ಯಕ್ತಪಡಿಸಿದ್ದಾರೆ. ಕೆಜಿಎಫ್ ನೋಡಲೇಬೇಕಾದ ಸಿನಿಮಾ. ದೇಶದಾದ್ಯಂತ ಸಿನಿಮಾ ಆರ್ಭಟಿಸುತ್ತಿದೆ. ನಿಜಕ್ಕೂ ಅದ್ಭುತ ನಟನೆ. ಯಶ್ ನೀವಂತೂ ಬ್ರಿಲಿಯೆಂಟ್ ಎಂದು ಟ್ವೀಟ್ ಮಾಡಿದ್ದಾರೆ. 
ರವೀನಾ ಟಂಡನ್ ಅವರ ಈ ಟ್ವೀಟ್ ಗೆ ಯಶ್ ಕೂಡ ಪ್ರತಿಕ್ರಿಯೆ ನೀಡಿದ್ದು ರವೀನಾಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ ಕೆಜಿಎಫ್ ಚಿತ್ರಕ್ಕೆ ಬೆಂಬಲವಾಗಿ ನಿಂತು ಸಹಾಯ ಮಾಡಿದ ಅನಿಲ್ ತದಾನಿಗೂ ಯಶ್ ಥ್ಯಾಂಕ್ಸ್ ಹೇಳಿದ್ದಾರೆ. 
ರವೀನಾ ಟಂಡನ್ ಅವರು ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸಿದ್ದ ಉಪೇಂದ್ರ ಚಿತ್ರದಲ್ಲಿ ಅಭಿನಯಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.