ಬಿಡುವಿಲ್ಲದ ರಾಜಕೀಯದ ನಡುವೆಯೂ ಕೆಜಿಎಫ್ ವೀಕ್ಷಿಸಿದ ಪರಮೇಶ್ವರ್ ಹೇಳಿದ್ದೇನು?
ಬಿಡುವಿಲ್ಲದ ರಾಜಕೀಯದ ನಡುವೆಯೂ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರಯಶ್ ಅಭಿನಯದ ಯಶಸ್ವೀ ಚಿತ್ರ "ಕೆಜಿಎಫ್" ಚಿತ್ರ ವೀಕ್ಷಿಸಿದ್ದಾರೆ. ಅಲ್ಲದೆ ಯಶ್ ಹಾಗೂ ಚಿತ್ರತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Published On :
ಬೆಂಗಳೂರು: ಬಿಡುವಿಲ್ಲದ ರಾಜಕೀಯದ ನಡುವೆಯೂ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರಯಶ್ ಅಭಿನಯದ ಯಶಸ್ವೀ ಚಿತ್ರ "ಕೆಜಿಎಫ್" ಚಿತ್ರ ವೀಕ್ಷಿಸಿದ್ದಾರೆ. ಅಲ್ಲದೆ ಯಶ್ ಹಾಗೂ ಚಿತ್ರತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಕನ್ನಡದ ಸಿನೆಮಾವೊಂದು ಕರ್ನಾಟಕವನ್ನು ದಾಟಿ ದೇಶದುದ್ದಗಲಕ್ಕೂ ಹಾಗೂ ವಿದೇಶದಲ್ಲೂ ಜನಮನವನ್ನು ಗೆಲ್ಲುತ್ತಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಚಾರ. ನಮ್ಮ ಕನ್ನಡ ಚಿತ್ರರಂಗ ಬೇರಾರಿಗೂ ಕಮ್ಮಿಯಿಲ್ಲ ಎಂದು ಅವುಗಳ ಯಶಸ್ಸಿನ ಮೂಲಕವೇ ಸಾರುವ ಸಮಯ ಬಂದಿದೆ. ಕೆಜಿಎಫ್ ತಂಡಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು!" ಎಂದು ಪರಮೇಶ್ವರ ಟ್ವೀಟ್ ಮಾಡಿದ್ದಾರೆ.
ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾಗಿರುವ "ಕೆಜಿಎಫ್"ಮೂರು ದಿನಗಳಲ್ಲಿ ಸುಮಾರು ೬೦ ಕೋಟಿ ರು. ಬಾಚಿಕೊಂಡಿದೆ.ಅಮೆರಿಕಾದಲ್ಲಿ ಸಹ 74 ಸೆಂಟರ್ ಗಳಲ್ಲಿ ಚಿತ್ರ ತೆರೆಕಂಡು ಜನಮೆಚ್ಚುಗೆ ಗಳಿಸಿದೆ.
ಇದಾಗಲೇ ಬಾಲಿವುಡ್ ನಟಿ ರವೀನಾ ಟಂಡನ್ ಸೇರಿ ಹಲವಾರು ಗಣ್ಯರು ಚಿತ್ರದ ಕುರಿತಂತೆ ಮೆಚ್ಚುಗೆಯ ಮಾತುಫ಼್ಗಳನ್ನಾಡಿರುವುದನ್ನು ನಾವಿಲ್ಲಿ ಗಮನಿಸಭುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


