ಸಿನಿಮಾ ಸುದ್ದಿ

ಬಾಲಿವುಡ್‌ನಲ್ಲೂ ಇತಿಹಾಸ ನಿರ್ಮಿಸಿದ ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್' ಚಿತ್ರ!

ದೇಶಾದ್ಯಂತ ರಾಕಿ ಭಾಯ್ ಹವಾ ಜೋರಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಇಂದು ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಎಲ್ಲಾ ಕಡೆ...

Published On :
ಬೆಂಗಳೂರು: ದೇಶಾದ್ಯಂತ ರಾಕಿ ಭಾಯ್ ಹವಾ ಜೋರಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಇಂದು ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಎಲ್ಲಾ ಕಡೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬರೆಯಲಿದೆ ಕೆಜಿಎಫ್. 
ಕನ್ನಡದ ಚಿತ್ರವೊಂದು ಈ ಪಾಟಿ ಸದ್ದು ಮಾಡುತ್ತಿರುವುದು ಇದೇ ಮೊದಲು. ಹಿಂದಿ ಅವತರಣಿಕೆ ಯ ಕೆಜಿಎಫ್ ಚಿತ್ರ ಸುಮಾರು 1500 ಸ್ಕ್ರೀನ್ ಗಳಲ್ಲಿ ತೆರೆ ಕಾಣುತ್ತಿದೆ. ಇನ್ನು ಕನ್ನಡದಲ್ಲಿ 400, ತೆಲುಗು 400, ತಮಿಳು 100 ಮಲಯಾಳಂ 60 ಒಟ್ಟು 2460 ಚಿತ್ರಮಂದಿರಗಳಲ್ಲಿ ರಿಲೀಸಾಗಿದೆ. 
ಮೊದಲ ದಿನ ಕಲೆಕ್ಷನ್ ನಲ್ಲೂ ಕೆಜಿಎಫ್ ದಾಖಲೆ ಬರೆಯಲಿದೆ. ವರದಿಗಳ ಪ್ರಕಾರ ಹಿಂದಿ ಆವೃತ್ತಿಯ ಚಿತ್ರ ಮೊದಲ ದಿನ 3-4 ಕೋಟಿ ಗಳಿಕೆ ಕಾಣಬಹುದು ಎನ್ನಲಾಗಿದೆ. ಇನ್ನು ಕನ್ನಡದಲ್ಲಿ 20-30 ಕೋಟಿ ಗಳಿಕೆ ಆಗಬಹುದು ಎಂಬ ಲೆಕ್ಕಾಚಾರ ಮಾಡಲಾಗಿದೆ. 
ಇಂದೆ ಬಾಲಿವುಡ್ ನಟ ಶಾರುಕ್ ಖಾನ್ ಅಭಿನಯದ ಜೀರೋ ಚಿತ್ರ ಸಹ ಬಿಡುಗಡೆಯಾಗಿದ್ದು ಕೆಜಿಎಫ್ ಮುಂದೆ ಇದು ಸಪ್ಪೆ ಆಗಿರುವುದರಿಂದ ಕೆಜಿಎಫ್ ಗೆ ವರದಾನವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.