ಸಿನಿಮಾ ಸುದ್ದಿ

ಕೆಜಿಎಫ್ ಗೂ ತಟ್ಟಿದ ಪೈರಸಿ ಭೂತ, ಮುಂಜಾನೆಯೇ ಚಿತ್ರ ಪ್ರದರ್ಶನ ವೇಳೆ ಫೇಸ್ ಬುಕ್ ಲೈವ್!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಿತ್ರಕ್ಕೂ ಪೈರಸಿ ಕಾಟ ತಟ್ಟಿದ್ದು, ಮುಂಜಾನೆಯೇ ಚಿತ್ರ ಪ್ರದರ್ಶನದ ವೇಳೆ ಪ್ರೇಕ್ಷಕನೋರ್ವ ಚಿತ್ರವನ್ನು ಫೇಸ್ ಬುಕ್ ನಲ್ಲಿ ಲೈವ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕೆಜಿಎಫ್ ಗೂ ತಟ್ಟಿದ ಪೈರಸಿ ಭೂತ, ಮುಂಜಾನೆಯೇ ಚಿತ್ರ ಪ್ರದರ್ಶನ ವೇಳೆ ಫೇಸ್ ಬುಕ್ ಲೈವ್!
ಫೇಸ್ ಬುಕ್ ಲೈವ್ ನಲ್ಲಿ ಕೆಜಿಎಫ್ ಚಿತ್ರ
Published On :
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಿತ್ರಕ್ಕೂ ಪೈರಸಿ ಕಾಟ ತಟ್ಟಿದ್ದು, ಮುಂಜಾನೆಯೇ ಚಿತ್ರ ಪ್ರದರ್ಶನದ ವೇಳೆ ಪ್ರೇಕ್ಷಕನೋರ್ವ ಚಿತ್ರವನ್ನು ಫೇಸ್ ಬುಕ್ ನಲ್ಲಿ ಲೈವ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ದೇಶಾದ್ಯಂತ ಇಂದು ಕೆಜಿಎಫ್‌ ಚಿತ್ರ ರಿಲೀಸ್ ಆಗಿ ಭಾರೀ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಈಗ ಕೆಜಿಎಫ್ ಸಿನಿಮಾ ಪೈರಸಿ ಕಾಟಕ್ಕೆ ಸಿಲುಕಿದ್ದು, ಬೆಂಗಳೂರಿನ ಥಿಯೇಟರ್ ಒಂದರಿಂದ ಫೇಸ್ಬುಕ್ ಲೈವ್‌ನಲ್ಲಿ ಚಿತ್ರೀಕರಣ ಮಾಡಿ ಹರಿ ಬಿಟ್ಟಿರುವುದು ಬೆಳಕಿಗೆ ಬಂದಿದೆ. ಸಿನಿಮಾ ಶುರುವಾಗುತ್ತಿದ್ದಂತೆಯೇ ಅಭಿಮಾನಿಯೊಬ್ಬರು ಫೇಸ್ಬುಕ್ ನಲ್ಲಿ ಲೈವ್ ಬಂದು, ಸತತ ನಲವತ್ತು ನಿಮಿಷಗಳ ಕಾಲ ಸಿನಿಮಾವನ್ನು ಲೈವ್ ಆಗಿ ಹರಿ ಬಿಟ್ಟಿದ್ದಾರೆ.  ಬೆಳಗ್ಗೆ 7:30 ರಿಂದ ಫೇಸ್ಬುಕ್ ನಲ್ಲಿ‌ ಕೆಜಿಎಫ್ ಚಿತ್ರವನ್ನು ಲೈವ್ ನಲ್ಲಿ ತೋರಿಸಿದ್ದಾರೆ. ಅನಿಲ್ ಚಿನ್ನು (Anil Chinnii ) ಅನ್ನೋ ವ್ಯಕ್ತಿ ಫೇಸ್ಬುಕ್ ಲೈವ್ ಮಾಡಿದ್ದಾರೆ ಎನ್ನಲಾಗಿದೆ.
ಫೇಸ್ ಬುಕ್ ಲೈವ್ ಗೆ ಆಕ್ರೋಶ
ಅತ್ತ ಅನಿಲ್ ಫೇಸ್ ಬುಕ್ ಲೈವ್ ನಲ್ಲಿ ಚಿತ್ರವನ್ನು ತೋರಿಸುತ್ತಿದ್ದಂತೆಯೇ ಕೆಲ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಮೊದಲು ಲೈವ್ ನಿಲ್ಲಿಸುವಂತೆ ತಾಕೀತು ಮಾಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.