ಸಿನಿಮಾ ಸುದ್ದಿ

ಅರ್ಜುನ್ ಸರ್ಜಾ ವಿರುದ್ಧ #MeToo ಆರೋಪ ನಂತರ ನಟಿ ಶ್ರುತಿ ಹರಿಹರನ್‌ಗೆ ಬಂದೊದಗಿದ ದುರ್ಗತಿ!

ಆಕ್ಷನ್ ಪ್ರಿನ್ಸ್ ಅರ್ಜುನ್ ಸರ್ಜಾ ತನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು #MeToo ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಗೆ ಸದ್ಯ ಸಂಕಷ್ಟದ ಸರಮಾಲೆ ಎದುರಾಗಿದೆ...

ಅರ್ಜುನ್ ಸರ್ಜಾ ವಿರುದ್ಧ #MeToo ಆರೋಪ ನಂತರ ನಟಿ ಶ್ರುತಿ ಹರಿಹರನ್‌ಗೆ ಬಂದೊದಗಿದ ದುರ್ಗತಿ!
ಅರ್ಜುನ್ ಸರ್ಜಾ-ಶ್ರುತಿ ಹರಿಹರನ್
Published On :
ಆಕ್ಷನ್ ಪ್ರಿನ್ಸ್ ಅರ್ಜುನ್ ಸರ್ಜಾ ತನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು #MeToo ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಗೆ ಸದ್ಯ ಸಂಕಷ್ಟದ ಸರಮಾಲೆ ಎದುರಾಗಿದೆ. 
ಮೀಟೂ ಆರೋಪ ಮಾಡಿದ ನಂತರ ನನಗೆ ಸಿನಿಮಾ ಅವಕಾಶಗಳೇ ಕಡಿಮೆಯಾಗಿವೆ. ಇಲ್ಲದೆ ಕೆಲ ಚಿತ್ರಗಳಲ್ಲಿ ಆಯ್ಕೆಯಾಗಿದ್ದರೂ ನಂತರ ಆ ಸಿನಿಮಾಗಳಿಂದ ಅವಕಾಶ ತಪ್ಪಿದೆ. ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡುವ ಮೊದಲು ವಾರಕ್ಕೆ 3 ಚಿತ್ರಗಳ ಆಫರ್ ಬರುತ್ತಿತ್ತು. ಆದರೆ ಈಗ ಯಾವುದೇ ಆಫರ್ ಗಳು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 
ಸೆಪ್ಟೆಂಬರ್ ತಿಂಗಳಲ್ಲಿ ನಾನು ಅಭಿನಯಿಸಿದ್ದ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ಯಶಸ್ವಿ ಪ್ರದರ್ಶನವನ್ನೂ ಕಂಡಿತ್ತು. ಆದರೆ ಯಾಕೋ ಯಾವ ಒಳ್ಳೆಯ ಆಫರ್ ಗಳೂ ಬರುತ್ತಿಲ್ಲ. ಸೆಪ್ಟೆಂಬರ್ ತಿಂಗಳ ನಂತರ ಹೆಚ್ಚೆಂದರೆ 2 ಚಿತ್ರಗಳ ಆಫರ್ ಬಂದಿರಬಹುದು. ಆದರೆ ಕತೆ ಹಾಗೂ ಪಾತ್ರಗಳು ನನಗೆ ಇಷ್ಟವಾಗದ ಕಾರಣ ನಾನು ಅವರನ್ನು ತಿರಸ್ಕರಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.