ನಾನು ನಟ, ಆದರೆ ತಂದೆಯಾಗಿ ಈ ಭಾವನೆ ಹಂಚಿಕೊಳ್ಳೋಕಾಗಲ್ಲ: ಪತ್ನಿ, ಮಗಳೊಡನೆ ರಾಕಿಂಗ್ ಸ್ಟಾರ್ ಸುದ್ದಿಗೋಷ್ಠಿ
ನಾನು ನಟನೇ ಆಗಿದ್ದರೂ, ಈಗ ತಂದೆಯಾಗಿ, ಈ ಭಾವನೆ, ಅನುಭವವನ್ನು ಹಂಚಿಕೊಳ್ಳುವುದು ಸಾಧ್ಯವಿಲ್ಲ, ಹೆಣ್ಣು ಮಗುವಾಗಿರುವುದು ಬಹಳ ಖುಷಿ ತಂದಿದೆ. ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿಕೊಂಡಿದ್ದಾರೆ.

Published On :
ಬೆಂಗಳೂರು: ನಾನು ನಟನೇ ಆಗಿದ್ದರೂ, ಈಗ ತಂದೆಯಾಗಿ, ಈ ಭಾವನೆ, ಅನುಭವವನ್ನು ಹಂಚಿಕೊಳ್ಳುವುದು ಸಾಧ್ಯವಿಲ್ಲ, ಹೆಣ್ಣು ಮಗುವಾಗಿರುವುದು ಬಹಳ ಖುಷಿ ತಂದಿದೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ತನ್ನ ಪತ್ನಿ, ನಟಿ ರಾಧಿಕಾ ಪಂಡಿತ್ ಹಾಗೂ ಮಗಳೊಡನೆ ಪತ್ರಿಕಾಗೊಷ್ಠಿಯಲ್ಲಿ ಮಾತನಾಡುತ್ತಿದ್ದರು.
"ಆ ದಿನ ನಾನು ಬೇರೆ ಕೆಲಸದಲ್ಲಿದ್ದೆ. ಹಾಗಾಗಿ ನಾನು ಯಾರನ್ನೂ ಮಾತನಾಡಿಸಲು ಸಾಧ್ಯವಾಗಿಲ್ಲ. ಆದರೆ ನೀವು ನಮ್ಮ ಮಾತಿಗೆ ಗೌರವ ನೀಡಿದ್ದೀರಿ, " ಎಂದ ಯಶ್ "ಇದೊಂದು ಸ್ಪೆಷಲ್ ಅನುಭವ ನಟನಾಗಿ ನಾನು ಯಾವ ಭಾವನೆಯನ್ನೂ ತೋರಬಲ್ಲೆನಾದರೂ ಈ ಅನುಭವ, ಭಾವನೆಯನ್ನು ಹಂಚಿಕೊಳ್ಳುವುದು ತೀರಾ ಕಷ್ಟ." ಎಂದಿದ್ದಾರೆ.
ಫೋರ್ಟಿಸ್ ಆಸ್ಪತ್ರೆಯಿಂದ ರಾಧಿಕಾ ಡಿಸ್ಚಾರ್ಜ್ ಆಗಿರುವ ಹಿನ್ನೆಲೆಯಲ್ಲಿ ಯಶ್ ಹಾಗೂ ರಾಧಿಕಾ ಸುದ್ದಿಗೋಷ್ಠಿ ನಡೆಸಿದರು.
"ಇವತ್ತು ನಮ್ಮ ಮದುವೆಯಾಗಿ ಎರಡು ವರ್ಷ ಆಯ್ತು. ನನಗೆ ಹೆಣ್ಣು ಮಗುವಾಗಿದೆ, ಹೆಣ್ಣು ಮಕ್ಕಳೆಂದ್ರೆ ನನಗೆ ಮೊದಲಿಂದಲೂ ಇಷ್ಟ ನಮ್ಮ ಕುಟುಂಬಕ್ಕೂ ಹೆಣ್ಣು ಮಗು ಮನೆಗೆ ಬಂದಿರುವುದು ಖುಷಿಯಾಗಿದೆ.
"ರಾಧಿಕಾಗೆ ಗಂಡುಮಗು ಎಂದರೆ ಇಷ್ಟ, ಹಾಗಾಗಿ ಗಂಡಾಗಿದ್ದರೆ ಇದೇ ಹೆಸರು ಇಡಬೇಕೆಂದು ಹೆಸರನ್ನೂ ಕೂಡಾ ಸೆಲೆಕ್ಟ್ ಮಾಡಿಕೊಂಡಿದ್ದರು. ಆದರೆ ನನ್ನಿಷ್ಟದಂತೆ ಹೆಣ್ಣು ಮಗುವಾಗಿದೆ. ಈಗ ಹೆಸರು ಕುರಿತು ಯೋಚಿಸುತ್ತಿದ್ದೇನೆ " ಅವರು ಹೇಳಿದ್ದಾರೆ.
"ನಾನು ತಾಯ್ತನಕ್ಕೆ ಹೊಂದಿಕೊಂಡಿದ್ದೇನೆ, ವೈದ್ಯರು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ" ರಾಧಿಕಾ ಪಂಡಿತ್ ಹೇಳಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


