ಭೈರವ ಗೀತಾ ಅನಿರೀಕ್ಷಿತವಾಗಿ ಸಿಕ್ಕ ಅವಕಾಶ: ಧನಂಜಯ್
ಸೂಪರ್ ಹಿಟ್ ' ಟಗರು ಚಿತ್ರದಲ್ಲಿನ ಡಾಲಿ ಪಾತ್ರದಿಂದ ಖ್ಯಾತಿಯಾಗಿರುವ ಧನಂಜಯ್ ಮುಂದಿನ ಚಿತ್ರ ಭೈರವ - ಗೀತಾ ಭಾರೀ ನಿರೀಕ್ಷೆ ಮೂಡಿಸಿದೆ

Published On :
ಸೂಪರ್ ಹಿಟ್ ಟಗರು ಚಿತ್ರದಲ್ಲಿನ ಡಾಲಿ ಪಾತ್ರದಿಂದ ಖ್ಯಾತಿಯಾಗಿರುವ ಧನಂಜಯ್ ಮುಂದಿನ ಚಿತ್ರ ಭೈರವ ಗೀತಾ ಭಾರೀ ನಿರೀಕ್ಷೆ ಮೂಡಿಸಿದೆ.
ಯುವ ನಿರ್ದೇಶಕ ಸಿದ್ಧಾರ್ಥ ಟಾತೊಳ್ ಇದೇ ಮೊದಲ ಬಾರಿಗೆ ತೆಲುಗಿನಲ್ಲಿ ನಿರ್ದೇಶಿಸಿರುವ ಈ ಚಿತ್ರ ಕನ್ನಡ ಹಾಗೂ ತೆಲುಗಿ ಆವೃತ್ತಿಯಲ್ಲಿ ಮೂಡಿಬರುತ್ತಿದೆ.
ಸಿನಿಮಾವೊಂದರ ಯಶಸ್ಸಿಗೆ ಪಟ್ಟ ಶ್ರಮದ ಬೆನ್ನಲ್ಲೇ ಹೆಸರು, ಹಣ ಎಲ್ಲವೂ ದೊರೆಯುವ ಅವಕಾಶ ಇರುತ್ತದೆ ಎನ್ನುವ ಧನಂಜಯ್, ಜನರು ತಮ್ಮನ್ನು ನಟನಾಗಿ ಗುರುತಿಸಿದ್ದಾರೆ. ಇದಷ್ಟೆ ಸಾಕು ಎನ್ನುತ್ತಾರೆ.
ಈ ಚಿತ್ರದ ಮೂಲಕ ಟಾಲಿವುಡ್ ನಲ್ಲಿ ತಾನೂ ಹೆಜ್ಜೆ ಇರಿಸಿದ್ದು, ಚಿತ್ರ ಯಶಸ್ವಿಯಾಗಲಿದೆ ಎಂಬ ಭರವಸೆ ಹೊಂದಿರುವುದಾಗಿ ಹೇಳುವ ಧನಂಜಯ್, ಮತ್ತೊಂದು ಚಿತ್ರರಂಗದಲ್ಲಿ ಕೆಲಸ ಮಾಡುವಾಗ ಹೊಸ ಕಲ್ಪನೆಗಳು ಹೊಳೆಯುತ್ತವೆ. ಸಾಕಷ್ಟು ಕಲಿಯುವುದಾಗಿ ಹೇಳಿದ್ದಾರೆ.ಭೈರವ ಗೀತಾ ಹಿಂಸಾತ್ಮಕ ಪ್ರೇಮ ಕಥೆಯಾಗಿದ್ದು, ಧನಂಜಯ್ ಕೂಲಿ ಪಾತ್ರದಲ್ಲಿ ಅಭಿನಯಿಸಿದ್ದಾರೆ
ಕಾರ್ಮಿಕ ವರ್ಗ ಹಾಗೂ ಶ್ರಿಮಂತ ವರ್ಗದವರ ನಡುವಿನ ಹೋರಾಟವನ್ನು ಭೈರವ ಗೀತದಲ್ಲಿ ವೈಭವೀಕರಿಸಲಾಗಿದ್ದು, ಇದೊಂದು ಹಿಂಸಾತ್ಮಕ ಪ್ರೇಮ ಕಥೆ ಇರುವ ಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


