ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಜನವರಿ 25ಕ್ಕೆ ರಿಲೀಸ್?
ಹಲವು ಘಟಾನುಘಟಿ ನಿರ್ಮಾಪಕರು ಜನವರಿ ಕೊನೆಯ ವಾರದಲ್ಲಿ ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡಲು ತಯಾರಿ ನಡೆಸಿದ್ದಾರೆ. ...

Published On :
ಬೆಂಗಳೂರು: ಹಲವು ಘಟಾನುಘಟಿ ನಿರ್ಮಾಪಕರು ಜನವರಿ ಕೊನೆಯ ವಾರದಲ್ಲಿ ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡಲು ತಯಾರಿ ನಡೆಸಿದ್ದಾರೆ.
ನಿಖಿಲ್ ಕುಮಾರ್ ಹಾಗೂ ರಚಿತಾ ರಾಮ್ ನಟಿಸಿರುವ ಸೀತಾರಾಮ ಕಲ್ಯಾಣ ಸಿನಿಮಾವನ್ನು ಎ, ಹರ್ಷ ನಿರ್ದೇಶಿಸಿದ್ದು, ಸಿನಿಮಾವನ್ನು ಡಿಸೆಂಬರ್ 10 ರಂದು ಸೆನ್ಸಾರ್ ಮಂಡಳಿ ಮುಂದೆ ಪ್ರದರ್ಶಿಸಲಾಗುವುದು. ಅದಾದ ನಂತರ ಸಿನಿಮಾ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗುವುದು.
ಜನವರಿ 22 ರಂದು ನಿಖಿಲ್ ಕುಮಾರ್ ಹುಟ್ಟು ಹಬ್ಬವಿದ್ದು, ಅಂದು ಪ್ರೀ-ರೀಲಿಸ್ ಮಾಡಲು ಯೋಜಿಸಲಾಗುತ್ತಿದೆ. ಆದರೆ ಜನವರಿ 25 ವೀಕೆಂಡ್ ಆಗಿರುವುದರಿಂದ ಗಣರಾಜ್ಯೋತ್ಸವ ದಿನದ ಹಿಂದಿನ ದಿನ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡುತ್ತಿದೆ.
ಸೀತಾರಾಮ ಕಲ್ಯಾಣ ಸಿನಿಮಾದ ಸಂಪೂರ್ಣ ಪೋಸ್ಚ್ ಪ್ರೊಡಕ್ಷನ್ ಕೆಲಸವನ್ನು ಖುದ್ದು ನಿಖಿಲ್ ಕುಮಾರ್ ನಿಂತುಕೊಂಡು ಮಾಡುತ್ತಿದ್ದಾರೆ. ಚೆನ್ನಾಂಬಿಕಾ ಫಿಲ್ಮ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಉತ್ತಮ ಗುಣಮಟ್ಟದ ಸಿನಿಮಾ ಹೊರತರಲು ನಿಖಿಲ್ ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


