ಸಿನಿಮಾ ಸುದ್ದಿ

ಕಡಿಮೆ ಕನ್ನಡ ಸಾಹಿತ್ಯ; ಯಶ್ ಕೆಜಿಎಫ್ ಹಾಡಿಗೆ ಸಾಮಾಜಿಕ ತಾಣದಲ್ಲಿ ವಿರೋಧ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್​ ಚಿತ್ರದ 'ಸಲಾಂ ರಾಕಿಂಗ್ ಭಾಯ್' ಹಾಡು ನಿನ್ನೆ ಬಿಡುಗಡೆಯಾಗಿ ಅದ್ಬುತ ರೀತಿಯ ಪ್ರತಿಕ್ರಿಯೆ ಪಡೆಯುತ್ತಿದೆಯಾದರೂ, ಹಾಡಿನಲ್ಲಿ ಬಳಕೆ ಮಾಡಲಾಗಿರುವ ಹಿಂದಿ ಸಾಹಿತ್ಯ ಭಾಷಾ ಪ್ರೇಮಿಗಳ ವಿರೋಧಕ್ಕೆ ಕಾರಣವಾಗಿದೆ.

ಕಡಿಮೆ ಕನ್ನಡ ಸಾಹಿತ್ಯ; ಯಶ್ ಕೆಜಿಎಫ್ ಹಾಡಿಗೆ ಸಾಮಾಜಿಕ ತಾಣದಲ್ಲಿ ವಿರೋಧ
ಸಂಗ್ರಹ ಚಿತ್ರ
Published On :
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್​ ಚಿತ್ರದ 'ಸಲಾಂ ರಾಕಿಂಗ್ ಭಾಯ್' ಹಾಡು ನಿನ್ನೆ ಬಿಡುಗಡೆಯಾಗಿ ಅದ್ಬುತ ರೀತಿಯ ಪ್ರತಿಕ್ರಿಯೆ ಪಡೆಯುತ್ತಿದೆಯಾದರೂ, ಹಾಡಿನಲ್ಲಿ ಬಳಕೆ ಮಾಡಲಾಗಿರುವ ಹಿಂದಿ ಸಾಹಿತ್ಯ ಭಾಷಾ ಪ್ರೇಮಿಗಳ ವಿರೋಧಕ್ಕೆ ಕಾರಣವಾಗಿದೆ.
ಸಲಾಂ ರಾಕಿಂಗ್ ಭಾಯ್ ಹಾಡಿನಲ್ಲಿ ಶೇ.50ಕ್ಕಿಂತ ಹೆಚ್ಚು ಹಿಂದಿ ಸಾಹಿತ್ಯ ಬಳಕೆ ಮಾಡಿರುವುದು ಕನ್ನಡ ಭಾಷಾ ಪ್ರೇಮಿಗಳ ವಿರೋಧಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಪ್ರೇಮಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಂತೆಯೇ ಡಬ್ಬಿಂಗ್ ವಿರೋಧಿಸುತ್ತಿದ್ದ ಕನ್ನಡಪರ ಹೋರಾಟಗಾರರ ವಿರುದ್ಧವೂ ವ್ಯಾಪಕ ಟೀಕೆ ಕೇಳಿ ಬಂದಿದೆ.
ಐಎಂಡಿಬಿಯಲ್ಲಿ ಮೋಸ್ಟ್​ ಎಕ್ಸ್​​ಪೆಕ್ಟೆಡ್​​ ಕೆಜಿಎಫ್​ ಚಿತ್ರ ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತೆ ಅಂತಾ ಕನ್ನಡಿಗರು ಕೊಂಡಾಡಿದ್ದರು. ಈ ಚಿತ್ರದ ಟ್ರೇಲರ್​ಗಳನ್ನು ಖುಷಿಯಿಂದಲೇ ನೋಡಿ ಹರಿಸಿ, ಹಾರೈಸಿದ್ದರು. ಜತೆಗೆ ಚಿತ್ರವನ್ನು ನೋಡಲು ಉತ್ಸುಕರಾಗಿದ್ದರು. ಆದರೆ, ನಿನ್ನೆ ಬಿಡುಗಡೆಯಾಗಿರುವ ಸಾಂಗ್​ನಲ್ಲಿ 30 % ಹಿಂದಿ ಭಾಷೆ ಬಳಕೆ ಮಾಡಿರುವುದು ಕನ್ನಡಿಗರನ್ನು ಕೆರಳಿಸಿದಂತೆ ಕಾಣುತ್ತೆ. ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
ಶೃತಿ ಹೆಚ್ ಎಂ ಎಂಬ ಟ್ವಿಟರ್ ಖಾತೆದಾರರು, ಡಬ್ಬಿಂಗ್ ಬಂದರೆ ಕನ್ನಡ ಸಂಸ್ಕೃತಿ ಹಾಳಾಗುತ್ತದೆ ಎಂದು ಬೊಬ್ಬೆ ಹೊಡೆಯೋರು ರೀತಿಯ ಹಾಡುಗಳಲ್ಲಿ ಮುಕ್ಕಾಲು ಭಾಗ ಹಿಂದಿ ತುರುಕಿ ಅದು ಯಾವ ಸಂಸ್ಕೃತಿಯನ್ನು ಉದ್ಧಾರ ಮಾಡುತ್ತಾರೋ ತಿಳಿಯುತ್ತಿಲ್ಲ. ಹಾಡೇ ಹೀಗಿದೆ ಇನ್ನು ಸಿನಿಮಾ ಕನ್ನಡಿಗರಿಗಂತೂ ಅಂತೂ ಅಲ್ಲ ಅನ್ನೋದು ಸ್ಪಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ ರೂಪೇಶ್ ರಾಜಣ್ಣ ಎಂಬ ಕನ್ನಡಪರ ಹೋರಾಟಗಾರರೊಬ್ಬರು ಹಾಡಿನ ಸಾಹಿತ್ಯ ಬರೆದ ಸಾಹಿತಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ತಮಿಳಿನಲ್ಲಿ ಇಲ್ಲದ ಹಿಂದಿ ಕನ್ನಡದಲ್ಲೇಕೆ ? 
ಇನ್ನು ಕೆಜಿಎಫ್ ನ ಫಸ್ಟ್​ ಸಾಂಗ್​ ಪ್ರೀತಿಯಿಂದಲೇ ಮೆಚ್ಚಿಕೊಂಡಿರುವ ಕೆಲವರು, ಹಿಂದಿ ಹೇರಿಕೆಯನ್ನು ಮಾತ್ರ ಖಂಡಿಸುತ್ತಿದ್ದಾರೆ. ಕನ್ನಡ, ತೆಲುಗು ಹಾಗೂ ಮಲಯಾಳಂ ಭಾಷೆಯ ಹಾಡಿನಲ್ಲಿ ಹಿಂದಿ ಬಳಸಲಾಗಿದೆ. ಆದರೆ, ತಮಿಳು ವರ್ಷನ್​ ಸಾಂಗ್ ನಲ್ಲಿ ಪೂರ್ತಿ ಆ ಭಾಷೆಯಲ್ಲಿಯೇ ಸಾಂಗ್ ಮೂಡಿ ಬಂದಿರುವುದೇಕೆ. ಇದು ತಮಿಳರ ಒಲೈಕೆ ಅಲ್ಲದೇ ಮತ್ತೇನು ಅಲ್ಲ ಎಂದು ಪ್ರಶ್ನಿಸುತ್ತಿದ್ದಾರೆ.
Story image

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.